ಹೈದರಾಬಾದ್:2021ನೇ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದು, ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ನ ಮೂವರು ವಿಜ್ಞಾನಿಗಳಿಗೆ ಗೌರವ ಸಂದಿದೆ. ವಿಜ್ಞಾನಿಗಳಾಗಿರುವ ಸಿಯುಕುರೊ ಮನಾಬೆ, ಕ್ಲಾಸ್ ಹ್ಯಾಸೆಲ್ಮನ್, ಜಾರ್ಜಿಯೊ ಪ್ಯಾರಿಸಿ ಅವರ ಹೆಸರನ್ನ ಜಂಟಿಯಾಗಿ ಪ್ರಶಸ್ತಿಗೆ ಘೋಷಣೆ ಮಾಡಲಾಗಿದೆ.
ಭೌತಶಾಸ್ತ್ರದಲ್ಲಿ ನೊಬೆಲ್ ಘೋಷಣೆ: ಮೂವರು ವಿಜ್ಞಾನಿಗಳಿಗೆ ಜಂಟಿಯಾಗಿ ಪ್ರಶಸ್ತಿ ಪ್ರಕಟ - ಮೂವರು ವಿಜ್ಞಾನಿಗಳಿಗೆ ಜಂಟಿಯಾಗಿ ಪ್ರಶಸ್ತಿ ಘೋಷಣೆ
ಮೆಡಿಸಿನ್ ವಿಭಾಗದಲ್ಲಿ ಪ್ರತಿಷ್ಠಿತ ನೊಬೆಲ್ ಘೋಷಣೆ ಬೆನ್ನಲ್ಲೇ ಇದೀಗ ಭೌತಶಾಸ್ತ್ರದಲ್ಲೂ ಪ್ರಶಸ್ತಿ ಘೋಷಣೆಯಾಗಿದ್ದು, ಜಂಟಿಯಾಗಿ ಮೂವರು ಸಂಶೋಧಕರಿಗೆ ಈ ಗೌರವ ಸಂದಿದೆ.
Physics Nobel 2021
ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಭೂಮಿಯ ಮೈಲ್ಮೈ ತಾಪಮಾನದಲ್ಲಿ ಹೇಗೆ ಬದಲಾವಣೆ ಮಾಡುತ್ತದೆ. ಹಾಗೂ ತಾಪಮಾನ ಹೆಚ್ಚಾಗಲು ಹೇಗೆ ಕಾರಣವಾಗುತ್ತದೆ ಎಂಬುದರ ಕುರಿತಾಗಿ ಇವರು ಸಂಶೋಧನೆ ಮಾಡಿದ್ದಾರೆ. ಅವರ ಸಂಶೋಧನೆ ಪ್ರಸ್ತುತ ಹವಾಮಾನ ಮಾದರಿ ಅಭಿವೃದ್ಧಿಗೆ ಅಡಿಪಾಯವಾಗಲಿದೆ ಎಂದು ತೀರ್ಪುಗಾರರು ತಿಳಿಸಿದ್ದಾರೆ.
ಇದನ್ನೂ ಓದಿರಿ:ಮೆಡಿಸಿನ್ ವಿಭಾಗದಲ್ಲಿ ಪ್ರತಿಷ್ಠಿತ ನೊಬೆಲ್ ಘೋಷಣೆ... ಡೇವಿಡ್ ಜೂಲಿಯಸ್, ಆರ್ಡೆಮ್ಗೆ ಪ್ರಶಸ್ತಿ
Last Updated : Oct 5, 2021, 9:20 PM IST