ಕರ್ನಾಟಕ

karnataka

ETV Bharat / international

ಇಂದೂ ಬಿಡುಗಡೆಯಾಗಲ್ಲ ಮ್ಯಾನ್ಮಾರ್‌ನ ನಾಯಕಿ ಆಂಗ್ ಸಾನ್ ಸೂಕಿ - Myanmar latest update

ಸೂಕಿ ಅವರನ್ನು ಈಗ ಫೆಬ್ರವರಿ 17 ರ ವರೆಗೆ ರಿಮ್ಯಾಂಡ್ ಮಾಡಲಾಗಿದೆ ಎಂದು ಸೂಕಿ ಪರ ವಕೀಲರಾದ ಖಿನ್ ಮಾಂಗ್ ಜಾವ್ ಹೇಳಿದ್ದಾರೆ. ರಾಜಧಾನಿ ನಾಯ್‌ಪಿಟಾವ್‌ನ ನ್ಯಾಯಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಇಂದೂ ಬಿಡುಗಡೆಯಾಗಲ್ಲ ಮ್ಯಾನ್ಮಾರ್‌ನ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ
ಇಂದೂ ಬಿಡುಗಡೆಯಾಗಲ್ಲ ಮ್ಯಾನ್ಮಾರ್‌ನ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ

By

Published : Feb 15, 2021, 1:24 PM IST

ಯಾಂಗೊನ್:ಮ್ಯಾನ್ಮಾರ್‌ನ ಮಿಲಿಟರಿ ನಾಯಕರು ಆಂಗ್ ಸಾನ್ ಸೂಕಿ ಅವರ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿದ್ದಾರೆ. ಇಂದು ಅವರ ರಿಮ್ಯಾಂಡ್​ ಅವಧಿ ಮುಕ್ತಾಯಗೊಳ್ಳಲಿತ್ತು.

ಮಿಲಿಟರಿಯಿಂದ ಬಂಧನಕ್ಕೊಳಗಾಗಿರುವ ಮ್ಯಾನ್ಮಾರ್‌ನ ನಾಯಕಿ ಆಂಗ್ ಸಾನ್ ಸೂಕಿ ಅವರು ಸೋಮವಾರದ ಬದಲಿಗೆ ಬುಧವಾರ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಅಲ್ಲಿಯವರಿಗೆ ಅವರನ್ನು ಬಂಧನದಲ್ಲೇ ಇರಿಸಲು ಸೇನಾಡಳಿತ ನಿರ್ಧರಿಸಿದಂತಿದೆ. ಸೂಕಿ ಅವರನ್ನು ಈಗ ಫೆಬ್ರವರಿ 17 ರ ವರೆಗೆ ರಿಮ್ಯಾಂಡ್ ಮಾಡಲಾಗಿದೆ ಎಂದು ಸೂಕಿ ಪರ ವಕೀಲರಾದ ಖಿನ್ ಮಾಂಗ್ ಜಾವ್ ಹೇಳಿದ್ದಾರೆ. ರಾಜಧಾನಿ ನಾಯ್‌ಪಿಟಾವ್‌ನ ನ್ಯಾಯಾಲಯದ ಹೊರಗೆ ವಿಸ್ತರಣೆಯ ಕುರಿತು ಅವರು ಸುದ್ದಿಗಾರರಿಗೆ ತಿಳಿಸಿದರು.

ಯಾಂಗೊನ್‌ನಲ್ಲಿ ಮಿಲಿಟರಿ ಆಡಳಿತದ ವಿರುದ್ಧ ಪ್ರತಿಭಟನೆ: ಮಿಲಿಟರಿ ಆಡಳಿತವನ್ನು ವಿರೋಧಿಸಿ ಭಾನುವಾರ ರಾತ್ರಿ ಪ್ರತಿಭಟನೆ ನಡೆದ ಹಿನ್ನೆಲೆ ನಗರದೆಲ್ಲೆಡೆ ಸೇನಾ ಶಸಾಸ್ತ್ರ ಪಡೆಯನ್ನು ನಿಯೋಜಿಸಲಾಗಿದೆ. ಅಲ್ಲದೇ ಇಂಟರ್‌ನೆಟ್‌ ಸೇವೆಯನ್ನು ಸಹ ಸ್ಥಗಿತಗೊಳಿಸಲಾಗಿದೆ. ರಾಜಕೀಯ ನಾಯಕರು ಮತ್ತು ಕಾರ್ಯಕರ್ತರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.

ABOUT THE AUTHOR

...view details