ವಾಷಿಂಗ್ಟನ್: ಇತ್ತೀಚೆಗೆ ಹೃದಯಘಾತದಿಂದ ಅಗಲಿದ ಬಿಜೆಪಿಯ ಹಿರಿಯ ನಾಯಕಿ, ವಿದೇಶಾಂಗ ಖಾತೆಯ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ/ ಅಧ್ಯಕ್ಷರ ಹಿರಿಯ ಸಲಹೆಗಾರ್ತಿ ಇವಾಂಕಾ ಟ್ರಂಪ್ ಅವರುಭಾವುಕರಾಗಿ ಟ್ವೀಟ್ ಮಾಡಿದ್ದಾರೆ.
ಸುಷ್ಮಾ ಸ್ವರಾಜ್ ಜಗತ್ತಿನ ಎಲ್ಲ ಮಹಿಳೆಯರಿಗೆ ಗೆಲುವಿನ ಸ್ಪೂರ್ತಿ: ಟ್ರಂಪ್ ಪುತ್ರಿ ಬಣ್ಣನೆ - ಇವಾಂಕಾ ಟ್ರಂಪ್
"ಮಾಜಿ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರ ನಿಧನದೊಂದಿಗೆ ಭಾರತ ಬೆಚ್ಚಗಿನ ಮತ್ತು ಸಮರ್ಪಿತ ನಾಯಕಿಯನ್ನೂ ಹಾಗೂ ಸಾರ್ವಜನಿಕ ಸೇವಕಿಯನ್ನು ಕಳೆದುಕೊಂಡಿದೆ" ಎಂದು ಇವಾಂಕಾ ಟ್ರಂಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸುಷ್ಮಾ ಸ್ವರಾಜ್ ಮತ್ತು ಇವಾಂಕಾ ಟ್ರಂಪ್
"ಮಾಜಿ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರ ನಿಧನದೊಂದಿಗೆ ಭಾರತವು ಬೆಚ್ಚಗಿನ ಮತ್ತು ಸಮರ್ಪಿತ ನಾಯಕಿಯನ್ನ ಮತ್ತು ಸಾರ್ವಜನಿಕ ಸೇವಕಿಯನ್ನು ಕಳೆದುಕೊಂಡಿದೆ" ಎಂದು ಇವಾಂಕಾ ಟ್ರಂಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
"ಸುಷ್ಮಾ ಸ್ವರಾಜ್ ಭಾರತ ಮತ್ತು ಜಗತ್ತಿನಾದ್ಯಂತ ಇರುವ ಎಲ್ಲ ಮಹಿಳೆಯರಿಗೆ ಚಾಂಪಿಯನ್ ಆಗಿದ್ದರು. ಅವರ ಬಗ್ಗೆ ತಿಳಿದುಕೊಳ್ಳುವುದು ಗೌರವಯುತವಾದದ್ದು'' ಎಂದು ಸ್ಮರಿಸಿದರು.