ಕರ್ನಾಟಕ

karnataka

ETV Bharat / international

ಲೈಂಗಿಕ ಅಲ್ಪಸಂಖ್ಯಾತರಿಗೆ ಕೆಲಸದಲ್ಲಿ ಸಮಾನ ಹಕ್ಕು;  ಸುಪ್ರೀಂ ತೀರ್ಪು - ಟ್ರಂಪ್ ಆಡಳಿತ

ಓರ್ವ ವ್ಯಕ್ತಿ ಯಾರು, ಆತ ಯಾರನ್ನು ಪ್ರೀತಿಸುತ್ತಾನೆ ಹಾಗೂ ಆತ ಹೇಗೆ ಕಾಣಿಸುತ್ತಾನೆ ಎಂಬುದರ ಮೇಲೆ ಕೆಲಸದ ಕಳೆದುಕೊಳ್ಳುವ ಆತಂಕ ಯಾರಿಗೂ ಇರಕೂಡದು. ಇಂದಿನ ಆದೇಶದಿಂದ ನಮಗೆ ನ್ಯಾಯ ಸಿಕ್ಕಿದ್ದು, ಇನ್ನು ನಾವು ಯಾವುದಕ್ಕೂ ಹೆದರಬೇಕಿಲ್ಲ ಎಂದು ಜೆರಾಲ್ಡ್​ ಬೊಸ್ಟೊಕ್ ಹೇಳಿದ್ದಾರೆ. ಸುಪ್ರೀಂಕೋರ್ಟ್​ ವಿಚಾರಣೆ ನಡೆಸಿದ ಮೂರು ಪ್ರಕರಣಗಳ ಪೈಕಿ ಒಂದು ಪ್ರಕರಣವನ್ನು ಇದೇ ಜೆರಾಲ್ಡ್​ ಬೊಸ್ಟೊಕ್ ದಾಖಲಿಸಿದ್ದರು.

transgender workers protected by law
transgender workers protected by law

By

Published : Jun 16, 2020, 1:40 PM IST

ವಾಷಿಂಗ್ಟನ್​: ತೃತೀಯ ಲಿಂಗಿಗಳು (ಎಲ್​ಜಿಬಿಟಿ) ಕೆಲಸದ ಸಮಾನ ಹಕ್ಕುಗಳಿವೆ ಎಂದು ಅಮೆರಿಕದ ಸುಪ್ರೀಂಕೋರ್ಟ್​ ಐತಿಹಾಸಿಕ ತೀರ್ಪು ನೀಡಿದೆ. ತೃತೀಯ ಲಿಂಗಿಗಳಿಗೆ ಕೆಲಸದಲ್ಲಿ ಸಮಾನ ಹಕ್ಕು ನೀಡುವ ಕುರಿತಾಗಿ ವಿಚಾರಣೆ ನಡೆಸಿದ ಪೀಠ, 6-3 ಮತಗಳ ಅಂತರದಿಂದ ಈ ಆದೇಶ ನೀಡಿದೆ.

ನಾಗರಿಕ ಹಕ್ಕುಗಳ ಕಾಯ್ದೆ 1964 ಯಲ್ಲಿ ಹೇಳಲಾಗಿರುವ ಟೈಟಲ್ 7 ರಲ್ಲಿ, ಲಿಂಗ ಹಾಗೂ ಅದಕ್ಕೆ ಸಂಬಂಧಿಸಿದ ಯಾವುದೇ ಕಾರಣಗಳಿಗಾಗಿ ವ್ಯಕ್ತಿಗಳಿಗೆ ನೌಕರಿಯಲ್ಲಿ ತಾರತಮ್ಯ ಮಾಡುವಂತಿಲ್ಲ ಎಂದು ಹೇಳಿದೆ. ಹೀಗಾಗಿ ಲೈಂಗಿಕ ಆಕಾಂಕ್ಷೆ ಅಥವಾ ಲಿಂಗ ಗುರುತಿನ ಆಧಾರದಲ್ಲಿ ವ್ಯಕ್ತಿಗಳಿಗೆ ಕೆಲಸದಲ್ಲಿ ತಾರತಮ್ಯ ಮಾಡುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ ಎಂದು ಕೋರ್ಟ್​ ಹೇಳಿದೆ.

ಸಲಿಂಗಕಾಮಿ ಅಥವಾ ಲಿಂಗ ಪರಿವರ್ತಿತ ವ್ಯಕ್ತಿಯೊಬ್ಬನನ್ನ ಅದೇ ಕಾರಣಕ್ಕಾಗಿ ಕಂಪನಿಯೊಂದು ಕೆಲಸದಿಂದ ವಜಾ ಮಾಡಿದಾಗ ಇತರ ಲೈಂಗಿಕ ಗುಂಪಿನ ಜನತೆ ಅದನ್ನು ಪ್ರಶ್ನಿಸುತ್ತಿರಲಿಲ್ಲ.

ಸುಪ್ರೀಂಕೋರ್ಟ್​​​​ನ ಈ ಆದೇಶವು ದೇಶದ ಉದ್ಯೋಗದಾತರು ಹಾಗೂ ಟ್ರಂಪ್ ಆಡಳಿತಕ್ಕೆ ಉಂಟಾದ ಭಾರಿ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೂ ಕೋರ್ಟಿನ ಪ್ರಬಲ ಆದೇಶವನ್ನು ತಾವು ಒಪ್ಪಿಕೊಂಡಿರುವುದಾಗಿ ಟ್ರಂಪ್ ಹೇಳಿಕೆ ನೀಡಿದ್ದಾರೆ.

ಇಂದಿನ ಈ ಆದೇಶದಿಂದ ದೇಶದ 8.1 ಮಿಲಿಯನ್ ಎಲ್​ಜಿಬಿಟಿ ಸಮುದಾಯದ ಕೆಲಸಗಾರರಿಗೆ ಅನುಕೂಲವಾಗಲಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಇವರಿಗೆ ಕೆಲಸದ ಭದ್ರತೆ ಇರಲಿಲ್ಲ. ಇನ್ನು ಇವರೆಲ್ಲರಿಗೂ ಲಿಂಗ ತಾರತಮ್ಯವಿಲ್ಲದೇ ಎಲ್ಲರಂತೆ ಕೆಲಸದ ಭದ್ರತೆ ಸಿಗಲಿದೆ. ಯುಸಿಎಲ್​ಎ ಲಾ ಸ್ಕೂಲ್​ನ ಸಮೀಕ್ಷೆಯ ಪ್ರಕಾರ ಅಮೆರಿಕದಲ್ಲಿ ಒಟ್ಟು 11.3 ಮಿಲಿಯನ್ ಎಲ್​ಜಿಬಿಟಿ ಸಮುದಾಯದ ಜನ ಇದ್ದಾರೆ ಎಂದು ಹೇಳಲಾಗಿದೆ.

ABOUT THE AUTHOR

...view details