ನವದೆಹಲಿ:ಚಂದ್ರಯಾನ- 2ರ ನೌಕೆಯನ್ನು ಹೊತ್ತ ರಾಕೆಟ್ 'ಬಾಹುಬಲಿ' ಸೋಮವಾರ ಮಧ್ಯಾಹ್ನ 2.45ಕ್ಕೆ ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಜಿಗದ ಬಳಿಕ ಜಾಗತಿಕ ಮಾಧ್ಯಮಗಳ ಗಮನ ಸೆಳೆದಿದೆ.
ಅಮೆರಿಕ, ರಷ್ಯಾ, ಚೀನಾ, ಯುರೋಪ್ ಒಕ್ಕೂಟ ರಾಷ್ಟ್ರಗಳು ಸೇರಿಂದತೆ ಹಲವು ರಾಷ್ಟ್ರಗಳ ಮಾಧ್ಯಮಗಳ ಭಾರತ, ಚಂದ್ರಯಾನ -2ರ ಉಡಾವಣೆ ಹೇಗೆ ಯಶಸ್ವಿಗೊಳಿಸುತ್ತದೆ ಎಂಬುದನ್ನು ಎದುರು ನೋಡುತ್ತಿದ್ದವು. ಅವರ ನಿರೀಕ್ಷಗೆ ತಕ್ಕಂತೆ ವಿಕ್ರಂ ಮತ್ತು ರೋವರ್ ಅನ್ನು ಹೊತ್ತ ಜಿಎಸ್ಎಲ್ವಿ- 3 ನಭಕ್ಕೆ ಜಿಗಿದು ಚಂದ್ರನ ಅಂಗಳದತ್ತ ಸಾಗುತ್ತಿದೆ.
ಅಮೆರಿಕದ ''ನ್ಯೂಯಾರ್ಕ್ ಟೈಮ್ಸ್'' (ಎನ್ವೈಟಿ) ಪತ್ರಿಕೆ 'ಭಾರತ ಎರಡನೇ ಬಾರಿಗೆ ಚಂದ್ರಯಾನ-2 ಉಡಾವಣೆಗೊಳಿಸಿದೆ' ಎಂಬ ಶಿರ್ಷೀಕೆ ನೀಡಿದೆ. ಬಾಹ್ಯಾಕಾಶ ಯೋಜನೆಗಿಂತ ರಾಷ್ಟ್ರವನ್ನು ಹೇಗೆ ಉತ್ತಮವಾಗಿ ಒಂದುಗೂಡಿಸುತ್ತದೆ ಎಂದು ಅದು ವರ್ಣಿಸಿದೆ.
ಇದೊಂದ ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆ. ವಿಶ್ವದಾದ್ಯಂತ ಇರುವ ವಿಜ್ಞಾನಿಗಳು ಮತ್ತು ರಕ್ಷಣಾ ಪರಿಣತರು ರಾಕೆಟ್ ಅನ್ನು ಭಾರತ ಹೇಗೆ ಕಕ್ಷೆಗೆ ಸೇರಿಸಲಿದೆ ಎಂದು ನೋಡುತ್ತಿದ್ದರು ಎಂದಿದೆ.
"ವಾಷಿಂಗ್ಟನ್ ಪೋಸ್ಟ್" 'ನಮ್ಮಲ್ಲಿ ಲಿಫ್ಟ್ ಇದೆ! ಭಾರತ ಎರಡನೇ ಬಾರಿಗೆ ಚಂದ್ರಯಾನಕ್ಕೆ ಯತ್ನಿಸಿದೆ' ಎಂದು ಹಣೆಪಟ್ಟಿ ನೀಡಿ ಸುದ್ದಿ ಪ್ರಕಟಿಸಿದೆ.