ಕರ್ನಾಟಕ

karnataka

ETV Bharat / international

ತಂದೆಯ ಗನ್ ತಂದು ವಿದ್ಯಾರ್ಥಿಗಳ ಮೇಲೆ ಗುಂಡಿನ ಸುರಿಮಳೆ: ಮೂವರು ಸಾವು, ಹಲವರ ಸ್ಥಿತಿ ಗಂಭೀರ - ವಿದ್ಯಾರ್ಥಿಗಳನ್ನು ಕೊಂದ ಸಹಪಾಠಿ

15 ವರ್ಷದ ಪ್ರೌಢಶಾಲಾ ವಿದ್ಯಾರ್ಥಿಯು ತನ್ನ ಮಿಚಿಗನ್ ಹೈಸ್ಕೂಲ್‌ನಲ್ಲಿ ಗುಂಡು ಹಾರಿಸಿದ್ದಾನೆ. ಪರಿಣಾಮ ಮೂವರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ.

student-kills-3-wounds-8-at-oxford-high-school-in-michigan
ತಂದೆಯ ಗನ್ ತಂದು ವಿದ್ಯಾರ್ಥಿಗಳ ಮೇಲೆ ಗುಂಡಿನ ಸುರಿಮಳೆ

By

Published : Dec 1, 2021, 4:30 PM IST

ಆಕ್ಸ್‌ಫರ್ಡ್ ಟೌನ್‌ಶಿಪ್: 15 ವರ್ಷದ ದ್ವಿತೀಯ ವಿದ್ಯಾರ್ಥಿ ಮಿಚಿಗನ್ ಹೈಸ್ಕೂಲ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದು, ಮೂವರು ವಿದ್ಯಾರ್ಥಿಗಳ ಸಾವಿಗೀಡಾಗಿದ್ದಾರೆ. ಇದರಲ್ಲಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ 16 ವರ್ಷದ ಬಾಲಕ ಸಾವಿಗೀಡಾಗಿದ್ದಾನೆ. ಇದಲ್ಲದೇ ಇನ್ನೂ ಎಂಟು ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಕ್ಸ್‌ಫರ್ಡ್ ಟೌನ್‌ಶಿಪ್‌ನಲ್ಲಿರುವ ಆಕ್ಸ್‌ಫರ್ಡ್ ಹೈಸ್ಕೂಲ್‌ನಲ್ಲಿ ಇಂದು ಈ ದುರಂತ ಸಂಭವಿಸಿದೆ. ಗುಂಡಿನ ದಾಳಿಯ ಉದ್ದೇಶವನ್ನು ತನಿಖಾಧಿಕಾರಿಗಳು ಇನ್ನೂ ಕಂಡುಕೊಂಡಿಲ್ಲ ಓಕ್ಲ್ಯಾಂಡ್ ಕೌಂಟಿ ಶೆರಿಫ್ ಮೈಕೆಲ್ ಬೌಚರ್ಡ್ ಹೇಳಿದ್ದಾರೆ.

ಇದನ್ನೂ ಓದಿ: Omicron scare : ಬ್ರೆಜಿಲ್​ನಲ್ಲಿ ಪತ್ತೆಯಾದ ಒಮಿಕ್ರೋನ್ ವೈರಸ್​

ಆರೋಪಿಯ ತಂದೆ ಶುಕ್ರವಾರ 9 ಎಂಎಂ ಗನ್​​ನನ್ನು ಖರೀದಿಸಿದ್ದರು. ಆದರೆ, ವಿದ್ಯಾರ್ಥಿ ಅದನ್ನು ತೆಗೆದುಕೊಂಡು ಬಂದು ಈ ರೀತಿ ಮಾಡಿದ್ದಾನೆ ಎಂದು ಬೌಚರ್ಡ್ ಮಾಹಿತಿ ನೀಡಿದ್ದಾರೆ.

ಆರೋಪಿ ವಿದ್ಯಾರ್ಥಿ ಬಂದೂಕಿನಿಂದ ಗುಂಡು ಹಾರಿಸುವುದನ್ನು ಅಭ್ಯಾಸ ಮಾಡಿದ್ದ ಹಾಗೆಯೇ ಗುರಿ ಇಟ್ಟು ಹಿಡಿದುಕೊಂಡಿರುವ ಗನ್​ನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕೂಡ ಮಾಡಿದ್ದನು ಎಂದು ಬೌಚರ್ಡ್ ಹೇಳಿದ್ದಾರೆ.

16 ವರ್ಷದ ಟೇಟ್ ಮೈರ್, 14 ವರ್ಷದ ಹಾನಾ ಸೇಂಟ್ ಜೂಲಿಯಾನಾ ಮತ್ತು 17 ವರ್ಷದ ಮ್ಯಾಡಿಸಿನ್ ಬಾಲ್ಡ್ವಿನ್ ಸಾವಿಗೀಡಾದ ಮೂವರು ವಿದ್ಯಾರ್ಥಿಗಳು. ಹಾಗೆ 14 ರಿಂದ 17 ವರ್ಷದೊಳಗಿನ ಏಳು ವಿದ್ಯಾರ್ಥಿಗಳು ಗುಂಡೇಟಿನ ಗಾಯದಿಂದ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details