ನ್ಯೂಯಾರ್ಕ್: ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದ ಕಾಂಪ್ಲೆಕ್ಸ್ 39A ನಿಂದ 49 ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಹೊತ್ತು ಫಾಲ್ಕನ್ - 9 ರಾಕೆಟ್ ನಭಕ್ಕೆ ಹಾರಿದೆ.
ಇಂಟರ್ನೆಟ್ ಉಪಗ್ರಹ ಸಮೂಹ ವ್ಯವಸ್ಥೆಗಾಗಿ 49 ಸ್ಟಾರ್‌ಲಿಂಕ್ ಉಪಗ್ರಹಗಳ ಮುಂದಿನ ಬ್ಯಾಚ್ ಅನ್ನು ಹೊತ್ತೊಯ್ದಿರುವ ಫಾಲ್ಕನ್- 9 ರಾಕೆಟ್ನ್ನು ಸ್ಪೇಸ್‌ಎಕ್ಸ್ ಉಡಾವಣೆ ಮಾಡಿದೆ.
ಈ ಮಿಷನ್ ಅನ್ನು ಬೆಂಬಲಿಸುವ ಫಾಲ್ಕನ್ -9 ರ ಮೊದಲ ಹಂತದ ಬೂಸ್ಟರ್ ಇದಾಗಿದೆ. ಈ ಹಿಂದೆ GPS III-4, GPS III-5, ಮತ್ತು Inspiration4ರ ಮಿಷನ್ ಪ್ರಾರಂಭಿಸಿತ್ತು.
Starlink ಒಂದು ಉಪಗ್ರಹ ಆಧಾರಿತ ಜಾಗತಿಕ ಇಂಟರ್ನೆಟ್ ವ್ಯವಸ್ಥೆಯಾಗಿದ್ದು, SpaceX ಪ್ರಪಂಚದ ಹಿಂದುಳಿದ ಪ್ರದೇಶಗಳಿಗೆ ಇಂಟರ್ನೆಟ್ ಒದಗಿಸಲು ಕೆಲಸ ಮಾಡುತ್ತಿದೆ. ಮಿಷನ್ SpaceX ನ ಈ ವರ್ಷದ ಮೊದಲ ಉಡಾವಣೆಯೂ ಇದಾಗಿದೆ.
ಸ್ಟಾರ್‌ಲಿಂಕ್ ಸ್ಯಾಟ್‌ಲೈಟ್‌ಗಳನ್ನು ಹೊತ್ತ ಫಾಲ್ಕನ್ 9 (Falcon 9) ರಾಕೆಟ್ ಕಕ್ಷೆ ಸೇರಿದ್ದು, ಸ್ಯಾಟ್ಲೈಟ್‌ಗಳನ್ನು ಅವುಗಳ ಸ್ಥಾನದಲ್ಲಿ ಇರಿಸಲು ಯಶಸ್ವಿಯಾಗಿದೆ ಎಂದು ಹೇಳಲಾಗಿದೆ.