ಮಾಸ್ಕೋ:ಉಕ್ರೇನ್ ಮೇಲೆ ದಾಳಿ ಮಾಡಿದ್ದರ ವಿರುದ್ಧ ರಷ್ಯಾದ ಮೇಲೆ ಅಮೆರಿಕ ಆಸ್ತಿ ಮುಟ್ಟುಗೋಲು, ವ್ಯಾಪಾರ, ಬ್ಯಾಂಕ್ಗಳ ವಹಿವಾಟು, ಬಾಹ್ಯಾಕಾಶ ಕಾರ್ಯಕ್ರಮಗಳ ಮೇಲೆ ನಿರ್ಬಂಧ ಹೇರಿದೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ರಷ್ಯಾ, ನಮ್ಮ ಮೇಲೆ ನಿರ್ಬಂಧ ಹೇರಿದರೆ 'ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ'ದ ಗತಿಯೇನಾಗಲಿದೆ ಬಲ್ಲಿರಾ? ಎಂದು ತಂತ್ರಜ್ಞಾನದ ಬೆದರಿಕೆ ಹಾಕಿದೆ.
ಅಲ್ಲದೇ, ಇದನ್ನೇ ಮುಂದಿಟ್ಟುಕೊಂಡು ಭಾರತ ಮತ್ತು ಚೀನಾವನ್ನು ನಮ್ಮ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿದರೆ, ಪರಿಣಾಮ ಭೀಕರವಾಗಿರುತ್ತದೆ ಎಂದು ಅಮೆರಿಕಕ್ಕೆ ರಷ್ಯಾದ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಷ್ಯಾದ ವಿಜ್ಞಾನಿಯೊಬ್ಬರು, 'ನೀವು ನಮ್ಮ ಮೇಲೆ ನಿರ್ಬಂಧ ಹೇರಿದರೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಯಾರು ಕಾಪಾಡುತ್ತಾರೆ?. ಅದು ನಮ್ಮ ಯಂತ್ರಗಳ ಸಹಾಯದಿಂದ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಮರೆಯಬೇಡಿ ಎಂದಿದ್ದಾರೆ.