ನ್ಯೂಯಾರ್ಕ್(ಅಮೆರಿಕ) :ಸಾಮಾಜಿಕ ಕಟ್ಟುಪಾಡುಗಳು, ಪಿತೃ ಪ್ರಧಾನ ವ್ಯವಸ್ಥೆಯು ಮಹಿಳೆಯರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಿಸುವ ವಿಶೇಷ ವರದಿಗಾರ್ತಿ ಐರೀನ್ ಖಾನ್ ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ ನ್ಯಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತ ವರದಿ ಪ್ರಸ್ತುತ ಪಡಿಸುತ್ತಾ ಅವರು, ತಾರತಮ್ಯದ ಆಚರಣೆಗಳಿಂದ ಮಹಿಳೆಯರ ಧ್ವನಿಯನ್ನು ಕುಗ್ಗಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಬಹುತೇಕ ರಾಷ್ಟ್ರಗಳು ವಿಫಲವಾಗಿರುವುದರಿಂದ ಲಿಂಗ ತಾರತಮ್ಯ ಹೆಚ್ಚಾಗಿದೆ.
ಇನ್ನು, ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯ ದೂರದ ಮಾತು ಎಂದು ಐರೀನ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಪಂಚದ ಸರ್ವಾಧಿಕಾರಿ, ಮೂಲಭೂತವಾದಿ ಶಕ್ತಿಗಳಿಂದ ಲಿಂಗ ತಾರತಮ್ಯ, ಲೈಂಗಿಕತೆ, ಸ್ತ್ರೀ ದ್ವೇಷ ಹೆಚ್ಚಾಗಿದೆ. ಸ್ತ್ರೀಯರು, ತೃತೀಯ ಲಿಂಗಿಗಳನ್ನು ರಕ್ಷಿಸುವ ನೆಪದಲ್ಲಿ ಮೂಲಭೂತವಾದಿಗಳು ಅವರಿಗೆ ಹಿಂಸೆ ನೀಡುತ್ತಾರೆ ಎಂದರು.
ಅಲ್ಲದೆ, ಮಹಿಳೆಯರನ್ನು ಸಾರ್ವಜನಿಕ ವೇದಿಕೆಗಳಿಂದ ದೂರವಿಡುವ ಮೂಲಕ ಅವರಿಗೆ ಬೆದರಿಕೆ ಹಾಕಲಾಗುತ್ತಿದೆ. "ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಅನುಮತಿಸಲಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸಲು ದೇಶಗಳು, ಲಿಂಗ ತಾರತಮ್ಯ, ದ್ವೇಷದ ಭಾಷಣ ಮತ್ತು ತಪ್ಪು ಮಾಹಿತಿಯನ್ನು ಜನರಿಗೆ ನೀಡಬಾರದು ಎಂದು ಅವರು ಮನವಿ ಮಾಡಿದ್ರು.
ಮಹಿಳೆಯರು ತಮ್ಮ ನೆಲೆ ಕಂಡುಕೊಳ್ಳಬೇಕಾದರೆ, ದೇಶಗಳು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಬೇಕಾದರೆ, ಸರ್ಕಾರಗಳು ಸಾರ್ವಜನಿಕರ ವಿಶ್ವಾಸವನ್ನು ಮರಳಿ ಪಡೆಯಬೇಕಾದರೆ, ಮಹಿಳೆಯರ ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಗೌರವಿಸಬೇಕಿದೆ. ಅಲ್ಲದೆ, ಮಹಿಳೆಯರು ಸಾಮಾಜಿಕ-ಸಾಂಸ್ಕೃತಿಕ, ಆರ್ಥಿಕತೆ ಸೇರಿ ಎಲ್ಲಾ ಕ್ಷೇತ್ರಗಳಲ್ಲಿಯೂ ಭಾಗವಹಿಸುವಂತಹ ವಾತಾವರಣ ಸೃಷ್ಟಿಸಬೇಕಿದೆ ಎಂದು ಕರೆ ನೀಡಿದರು.