ಕರ್ನಾಟಕ

karnataka

ETV Bharat / international

Watch - ಕ್ರಿಸ್‌ಮಸ್ ಮೆರವಣಿಗೆಯಲ್ಲಿದ್ದ ಜನರ ಮೇಲೆ ಹರಿದ ಕಾರು.. 5 ಮಂದಿ ಸಾವು 40ಕ್ಕೂ ಹೆಚ್ಚು ಮಂದಿಗೆ ಗಾಯ - ಅಮೆರಿಕದ ವಿಸ್ಕಾನ್ಸಿನ್ ರಾಜ್ಯದಲ್ಲಿ ಮಹಾ ದುರ್ಘಟನೆ

ಕ್ರಿಸ್‌ಮಸ್ ಮೆರವಣಿಗೆ ಸಾಗುತ್ತಿದ್ದ ವೇಳೆ ಎಸ್​ಯುವಿ ಕಾರು ಜನರ ಮೇಲೆ ಹರಿದಿದ್ದು, ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ. 12 ಮಕ್ಕಳು ಸೇರಿದಂತೆ 40 ಜನರನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್‌ಮಸ್ ಮೆರವಣಿಗೆಯಲ್ಲಿದ್ದ ಜನರ ಮೇಲೆ ಹರಿದ ಕಾರು
ಸ್‌ಮಸ್ ಮೆರವಣಿಗೆಯಲ್ಲಿದ್ದ ಜನರ ಮೇಲೆ ಹರಿದ ಕಾರು

By

Published : Nov 22, 2021, 10:32 AM IST

Updated : Nov 22, 2021, 4:25 PM IST

ವಾಷಿಂಗ್ಟನ್: ಅಮೆರಿಕದ ವಿಸ್ಕಾನ್ಸಿನ್ ರಾಜ್ಯದಲ್ಲಿ ನಿನ್ನೆ ಸಂಜೆ ಕ್ರಿಸ್‌ಮಸ್ ಮೆರವಣಿಗೆ ಸಾಗುತ್ತಿದ್ದ ವೇಳೆ ಎಸ್​ಯುವಿ ಕಾರು (SUV Rams Christmas Parade) ನುಗ್ಗಿದ ಪರಿಣಾಮ ಐವರು ಸಾವನ್ನಪ್ಪಿದ್ದಾರೆ. 40 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಸ್ಕಾನ್ಸಿನ್​ ವೌಕೇಶಾ ಎಂಬ ಪಟ್ಟಣದಲ್ಲಿ ಘಟನೆ ನಡೆದಿದೆ. ಅಪಘಾತಕ್ಕೊಳಗಾದವರಲ್ಲಿ ಮಕ್ಕಳೂ ಇದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ವಿಡಿಯೋ ಹರಿದಾಡುತ್ತಿದ್ದು, ಕೆಂಪು ಬಣ್ಣದ ಎಸ್​ಯುವಿ ಕಾರು ವೇಗವಾಗಿ ಬಂದು ಜನರೆಡೆ ನುಗ್ಗುವುದನ್ನು ಕಾಣಬಹುದಾಗಿದೆ.

12 ಮಕ್ಕಳು ಸೇರಿದಂತೆ 40 ಜನರನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರನ್ನು ತಡೆಯಲು ಅಧಿಕಾರಿಯೊಬ್ಬರು ಗುಂಡು ಹಾರಿಸಿದ್ದಾರೆ. ಆರೋಪಿ ಚಾಲಕ ಪೊಲೀಸ್​ ವಶದಲ್ಲಿದ್ದು, ತನಿಖೆ ನಡೆಸಲಾಗುತ್ತುದೆ. ವೌಕೇಶಾ ಪಟ್ಟಣದ ಶಾಲೆಗಳು ಹಾಗೂ ರಸ್ತೆಗಳನ್ನು ಇಂದು ಮುಚ್ಚಲಾಗಿದೆ.

ಅಮೆರಿಕದ ವಿಸ್ಕಾನ್ಸಿನ್​ ವೌಕೇಶಾ ಎಂಬಪಟ್ಟಣದಲ್ಲಿ ಮೆರವಣಿಗೆ ವೇಳೆ ಜನರ ಮೇಲೆ ಹರಿದ ಕಾರು

ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರು ಘಟನೆಯ ಮಾಹಿತಿ ಪಡೆದಿದ್ದು, ವೌಕೇಶಾದಲ್ಲಿನ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸಲಾಗುತ್ತಿದೆ. ಭಯಾನಕ ಘಟನೆ ಸಂತ್ರಸ್ತರಿಗೆ ನಮ್ಮ ಹೃದಯ ಮಿಡಿಯುತ್ತಿದೆ. ಅಗತ್ಯವಿರುವ ಎಲ್ಲ ಬೆಂಬಲ ನೀಡಲು ವಿಸ್ಕಾನ್ಸಿನ್ ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Last Updated : Nov 22, 2021, 4:25 PM IST

ABOUT THE AUTHOR

...view details