ವಾಷಿಂಗ್ಟನ್:ವಾಯುವ್ಯ ಸಿರಿಯಾದಲ್ಲಿ ಅಲ್-ಖೈದಾ ಹಿರಿಯ ನಾಯಕ ಅಬ್ದುಲ್ ಹಮೀದ್ ಅಲ್-ಮತಾರ್ನನ್ನು ಯುಎಸ್ ಮಿಲಿಟರಿ ವೈಮಾನಿಕ ದಾಳಿ ನಡೆಸಿ ಕೊಂದು ಹಾಕಿದೆ ಎಂದು ಸೆಂಟ್ರಲ್ ಕಮಾಂಡ್ (CENTCOM) ವಕ್ತಾರ ಮೇಜರ್ ಜಾನ್ ರಿಗ್ಸ್ಬೀ ಶುಕ್ರವಾರ ಹೇಳಿದ್ದಾರೆ.
ವೈಮಾನಿಕ ದಾಳಿ.. ಅಲ್-ಖೈದಾ ಹಿರಿಯ ನಾಯಕನನ್ನು ಕೊಂದು ಹಾಕಿದ ಅಮೆರಿಕ
ಅಮೆರಿಕ ಮಿಲಟರಿ ಅಲ್-ಖೈದಾ ಹಿರಿಯ ನಾಯಕನನ್ನು ವೈಮಾನಿಕ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಸಿರಿಯಾದಲ್ಲಿ ನಡೆದಿದೆ.
MQ-9 ವಿಮಾನವನ್ನು ಬಳಸಿ ನಡೆಸಲಾದ ವೈಮಾನಿಕ ದಾಳಿಯಲ್ಲಿ ನಾಗರಿಕರ ಸಾವುನೋವಿನ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಅಲ್-ಖೈದಾ ಸಿರಿಯಾವನ್ನು ಪುನರ್ ನಿರ್ಮಾಣ ಮಾಡಲು, ಬಾಹ್ಯ ಅಂಗಸಂಸ್ಥೆಗಳೊಂದಿಗೆ ಸಂಯೋಜಿಸಲು ಮತ್ತು ಬಾಹ್ಯ ಕಾರ್ಯಾಚರಣೆಗಳನ್ನು ಯೋಜಿಸಲು ಸುರಕ್ಷಿತ ತಾಣವಾಗಿ ಬಳಸುತ್ತದೆ. ಭಯೋತ್ಪಾದಕ ಸಂಘಟನೆಯು ಅಮೆರಿಕದ ನಾಗರಿಕರು, ನಮ್ಮ ಪಾಲುದಾರರು ಮತ್ತು ಮುಗ್ಧ ನಾಗರಿಕರನ್ನು ಬೆದರಿಸುವ ಕೆಲಸ ಮಾಡುತ್ತಿದೆ ಹೇಳಿದರು.
ತಾಯ್ನಾಡಿಗೆ ಹಾನಿ ಮಾಡುವ ಉದ್ದೇಶ ಹೊಂದಿರುವ ಅಲ್-ಖೈದಾ ಮತ್ತು ಇತರ ಭಯೋತ್ಪಾದಕ ಸಂಘಟನೆಗಳ ಸದಸ್ಯರನ್ನು ಗುರಿಯಾಗಿಸುವುದನ್ನು ಅಮೆರಿಕ ಮುಂದುವರಿಸುತ್ತದೆ ಎಂದು ರಿಗ್ಸ್ಬೀ ಹೇಳಿದರು.