ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಾಮ ನಿರ್ದೇಶಿತ ನ್ಯಾಯಾಧೀಶರಾಗಿ ಆಮಿ ಕೋನಿ ಬ್ಯಾರೆಟ್ ಅವರನ್ನು ಅ.26ರಂದು ಸುಪ್ರೀಂಕೋರ್ಟ್‌ಗೆ ಶಿಫಾರಸು ಮಾಡಿ ಅಂತಿಮ ಮತ ಚಲಾಯಿಸಲು ಸೆನೆಟ್ ರಿಪಬ್ಲಿಕನ್ಸ್ ತಯಾರಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಗುರುವಾರ ಬ್ಯಾರೆಟ್ ಅವರ ನಾಮ ನಿರ್ದೇಶನವನ್ನು ನ್ಯಾಯಾಂಗ ಸಮಿತಿಯಿಂದ ಮತದಾನ ಮಾಡುವ ನಿರೀಕ್ಷೆಯಿದ್ದು, ಇದು ಸೆನೆಟ್ ಲೀಡರ್ ಮಿಚ್ ಮೆಕ್ಮೆಕ್ನಾಲ್ ಅವರ ಮುಂದಿನ ನಿರ್ಧಾರಗಳಿಗೆ ದಾರಿ ಮಾಡಿಕೊಡಲಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ನಿನ್ನೆ ಸೆನೆಟ್ ಸಭೆ ಉದ್ದೇಶಿಸಿ ಮಾತನಾಡಿದ ಮೆಕ್ ಮೆಕ್ನಾಲ್, ನಾನು ಗುರುವಾರ ನ್ಯಾಯಾಂಗ ಸಮಿತಿಯ ಮತದಾನಕ್ಕಾಗಿ ಎದುರು ನೋಡುತ್ತಿದ್ದೇನೆ. ಸಮಿತಿಯಿಂದ ಹೊರಬಂದ ಕೂಡಲೇ ಪೂರ್ಣ ಸೆನೆಟ್ ಜಸ್ಟೀಸ್ ಬ್ಯಾರೆಟ್ರ ನಾಮ ನಿರ್ದೇಶನವಾಗಲಿದೆ ಎಂದಿದ್ದಾರೆ.
ಈ ಭಾನುವಾರ ನಡೆಯಲಿರುವ ಮತದಾನದ ಬಳಿವೂ ನಾಮನಿರ್ದೇಶನವು ನವೆಂಬರ್ 3ರ ಅಧ್ಯಕ್ಷೀಯ ಚುನಾವಣೆಗೂ ಮುನ್ನ, ಅಂದರೆ ಅ.26ರಂದು ಅಂತಿಮವಾಗಿ ಮತದಾನಕ್ಕೆ ಬರಲಿದ್ದು, ಈ ವೇಳೆ ಸುದೀರ್ಘ 30 ಗಂಟೆಗಳ ಚರ್ಚೆಯನ್ನು ಎದುರಿಸಬೇಕಾಗುತ್ತದೆ.
ವಿರೋಧ ಪಕ್ಷದ ತೀವ್ರ ವಿರೋಧದ ನಡುವೆಯೂ ಮೃತಪಟ್ಟಿದ್ದ ನ್ಯಾಯಮೂರ್ತಿ ರುತ್ ಬೇಡರ್ ಗಿನ್ಸ್ಬರ್ಗ್ ಅವರ ಜಾಗಕ್ಕೆ ಸೆ.26ರಂದು ಬ್ಯಾರೆಟ್ರನ್ನು ಅಧ್ಯಕ್ಷ ಟ್ರಂಪ್ ಸುಪ್ರೀಂ ನ್ಯಾಯಮೂರ್ತಿಗಳಾಗಿ ನಾಮಕರಣ ಮಾಡಿದ್ದರು.