ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆ ಆಗಿರುವ ಜೋ ಬೈಡನ್ ಅವರ ಅಧಿಕಾರವಧಿಯಲ್ಲಿ ಹೋಮ್ ಲ್ಯಾಂಡ್ ಭದ್ರತಾ ಕಾರ್ಯದರ್ಶಿಯಾಗಿ ಅಲೆಜಾಂಡ್ರೊ ಮಯೋರ್ಕಾಸ್ ಅವರನ್ನು ಅಯ್ಕೆಮಾಡಲಾಗಿದೆ ಎಂದು ಸೆನೆಟ್ ದೃಢಪಡಿಸಿದೆ.
ಹೋಮ್ ಲ್ಯಾಂಡ್ ಭದ್ರತಾ ಕಾರ್ಯದರ್ಶಿಯಾಗಿ ಅಲೆಜಾಂಡ್ರೊ ಮಯೋರ್ಕಾಸ್ ನೇಮಕ - ಜೋ ಬೈಡನ್
ಜೋ ಬೈಡನ್ ಅವರ ಹೋಮ್ ಲ್ಯಾಂಡ್ ಭದ್ರತಾ ಕಾರ್ಯದರ್ಶಿಯಾಗಿ ಅಲೆಜಾಂಡ್ರೊ ಮಯೋರ್ಕಾಸ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸೆನೆಟ್ ದೃಢಪಡಿಸಿದೆ.
ರಷ್ಯಾ ಸಂಬಂಧಿತ ಸೈಬರ್ ಹ್ಯಾಕ್ ಮತ್ತು ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವುದು ಬೈಡನ್ ಅವರ ಮುಂದಿರುವ ಪ್ರಥಮ ಸವಾಲು. ಹಾಗಾಗಿ ಹೋಮ್ ಲ್ಯಾಂಡ್ ಭದ್ರತಾ ಕಾರ್ಯದರ್ಶಿಯಾಗಿ ಅಲೆಜಾಂಡ್ರೊ ಮಯೋರ್ಕಾಸ್ ಅವರನ್ನು ಜನವರಿ 20 ರೊಳಗೆ ನೇಮಿಸಬೇಕೆಂದು ಬೈಡನ್ ತಂಡವು ಆಶಿಸಿತ್ತು. ಇದೀಗ ಸೆನೆಟ್ ನಿನ್ನೆ ಅಲೆಜಾಂಡ್ರೊ ಮಯೋರ್ಕಾಸ್ ಅವರನ್ನು ಹೋಮ್ ಲ್ಯಾಂಡ್ ಭದ್ರತಾ ಕಾರ್ಯದರ್ಶಿಯಾಗಿ ದೃಢಪಡಿಸಿದೆ.
ಇನ್ನು ಮಯೋರ್ಕಾಸ್ ಮಾಜಿ ಫೆಡರಲ್ ಪ್ರಾಸಿಕ್ಯೂಟರ್ ಆಗಿ ಕಾರ್ಯ ನಿರ್ವಹಿಸಿದ್ದು, ಈ ಹಿಂದೆ ಹಿರಿಯ ಹೋಮ್ಲ್ಯಾಂಡ್ ಸೆಕ್ಯುರಿಟಿ (ಡಿಹೆಚ್ಎಸ್) ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಜೊತೆಗೆ ಬರಾಕ್ ಒಬಾಮ ಅಧಿಕಾರವಧಿಯಲ್ಲಿ ಹೂಡಿಕೆದಾರರ ವೀಸಾ ಕಾರ್ಯಕ್ರಮದ ನಿರ್ವಹಣೆ ಕುರಿತು ಉಂಟಾದ ಗೊಂದಲವನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.