ಕರ್ನಾಟಕ

karnataka

ETV Bharat / international

ಸಾಗರದಲ್ಲಿನ ಮೈಕ್ರೋಪ್ಲಾಸ್ಟಿಕ್‌ ನಿವಾರಣೆಗೆ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ನಾಸಾ - Scientists use NASA satellite data to track ocean microplastics from space

ಸಾಗರದಲ್ಲಿ ಸಣ್ಣಸಣ್ಣ ಪ್ಲಾಸ್ಟಿಕ್ ತುಂಡುಗಳ ಚಲನೆಯನ್ನು ಪತ್ತೆಹಚ್ಚಲು ವಿಜ್ಞಾನಿಗಳು ನಾಸಾ ಉಪಗ್ರಹ ದತ್ತಾಂಶವನ್ನು ಬಳಸುವ ನವೀನ ಮಾರ್ಗವನ್ನು ಅಭಿವೃದ್ಧಿಪಡಿಸಿದ್ದಾರೆ.

Scientists use NASA satellite data to track ocean microplastics from space
ಸಾಗರದಲ್ಲಿನ ಮೈಕ್ರೋಪ್ಲ್ಯಾಸ್ಟಿಕ್‌ ನಿವಾರಣೆಗೆ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ನಾಸಾ

By

Published : Jun 28, 2021, 1:50 PM IST

ನ್ಯೂಯಾರ್ಕ್: ಸಾಗರದಲ್ಲಿ ಸಣ್ಣಸಣ್ಣ ಪ್ಲಾಸ್ಟಿಕ್ ತುಂಡುಗಳ ಚಲನೆಯನ್ನು ಪತ್ತೆಹಚ್ಚಲು ಮಿಚಿಗನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಾಸಾ ಉಪಗ್ರಹ ದತ್ತಾಂಶವನ್ನು ಬಳಸುವ ಒಂದು ನವೀನ ಮಾರ್ಗವನ್ನು ಅಭಿವೃದ್ಧಿಪಡಿಸಿದ್ದಾರೆ. ಪ್ಲಾಸ್ಟಿಕ್‌ನ ಈ ಸಣ್ಣ ತುಂಡುಗಳು ಸಮುದ್ರ ಜೀವಿಗಳು ಮತ್ತು ಪರಿಸರ ವ್ಯವಸ್ಥೆಗಳಿಗೆ ಹಾನಿಕಾರಕವಾಗಿದೆ. ಆದ್ದರಿಂದ ಅದನ್ನು ನಿವಾರಿಸಲು ವಿಜ್ಞಾನಿಗಳು ಈ ತಂತ್ರವನ್ನು ಕಂಡುಹಿಡಿದಿದ್ದಾರೆ.

ಮೈಕ್ರೋಪ್ಲಾಸ್ಟಿಕ್‌ಗಳು ಅಲೆಗಳ ಜತೆ ಸಮುದ್ರದಲ್ಲಿ ನೂರಾರು ಅಥವಾ ಸಾವಿರಾರು ಮೈಲುಗಳಷ್ಟು ದೂರ ಸಾಗಬಹುದು. ಅವುಗಳನ್ನು ಪತ್ತೆಹಚ್ಚಲು ಮತ್ತು ತೆಗೆದುಹಾಕಲು ಕಷ್ಟವಾಗುತ್ತದೆ. ಅದೇ ಸಮಯದಲ್ಲಿ, ಮೈಕ್ರೋಪ್ಲಾಸ್ಟಿಕ್‌ಗಳ ಸ್ಥಳದ ಬಗ್ಗೆ ಮಾಹಿತಿಯ ಮುಖ್ಯ ಮೂಲವು ಮೀನುಗಾರ ದೋಣಿ ಟ್ರಾಲರ್‌ಗಳಿಂದ ಬಂದಿದೆ.

ಸಾಗರದಲ್ಲಿನ ಮೈಕ್ರೋಪ್ಲ್ಯಾಸ್ಟಿಕ್‌ ನಿವಾರಣೆಗೆ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ನಾಸಾ

ಹೊಸ ತಂತ್ರವು ನಾಸಾದ ಸೈಕ್ಲೋನ್ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಸಿವೈಜಿಎನ್ಎಸ್ಎಸ್) ದ ದತ್ತಾಂಶವನ್ನು ಅವಲಂಬಿಸಿದೆ. ಇದು ಎಂಟು ಸಣ್ಣ ಉಪಗ್ರಹಗಳ ಸಮೂಹವಾಗಿದ್ದು ಅದು ಗಾಳಿಯ ವೇಗವನ್ನು ಅಳೆಯುತ್ತದೆ. ಚಂಡಮಾರುತಗಳ ಬಲದ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

ಸಮುದ್ರದ ಒರಟುತನವನ್ನು ಅಳೆಯಲು ಸಿವೈಜಿಎನ್‌ಎಸ್‌ಎಸ್ ಸಹ ರಾಡಾರ್ ಅನ್ನು ಬಳಸುತ್ತದೆ. ಇದು ಗಾಳಿಯ ವೇಗ ಮತ್ತು ನೀರಿನಲ್ಲಿ ತೇಲುತ್ತಿರುವ ಭಗ್ನಾವಶೇಷಗಳು ಸೇರಿದಂತೆ ಹಲವಾರು ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಸಾಗರ ಮೈಕ್ರೋಪ್ಲಾಸ್ಟಿಕ್ ಅನ್ನು ಬಾಹ್ಯಾಕಾಶದಿಂದ ಪತ್ತೆಹಚ್ಚಲು CYGNSS ಡೇಟಾವನ್ನು ಸಾಧನವಾಗಿ ಬಳಸಬಹುದು.

ಈ ಪ್ಲಾಸ್ಟಿಕ್‌ಗಳು ಸೂರ್ಯನ ಕಿರಣಗಳಿಂದ ಮತ್ತು ಸಾಗರ ಅಲೆಗಳ ಚಲನೆಯಿಂದ ಒಡೆದು ಮೈಕ್ರೋಪ್ಲ್ಯಾಸ್ಟಿಕ್‌ಗಳಾಗಿ ಪರಿವರ್ತನೆಗೊಳ್ಳುತ್ತವೆ. ಅವುಗಳನ್ನು ಪತ್ತೆಹಚ್ಚಲು ಮತ್ತು ತೆಗೆದುಹಾಕಲು ಈ ತಂತ್ರಜ್ಞಾನ ಉಪಯುಕ್ತವಾಗಿದೆ.

ABOUT THE AUTHOR

...view details