ಕರ್ನಾಟಕ

karnataka

ETV Bharat / international

ಕೋವಿಡ್ -19 ವೈರಸ್ ನಾಶಪಡಿಸಲು ಬಂದಿದೆ ಏರ್ ಫಿಲ್ಟರ್ - ಹೂಸ್ಟನ್ ವಿಶ್ವವಿದ್ಯಾಲಯದ ಸಂಶೋಧಕರು

ಹೂಸ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಕೋವಿಡ್-19ಗೆ ಕಾರಣವಾಗುವ ವೈರಸ್​​ ಅನ್ನು ಬಲೆಗೆ ಬೀಳಿಸುವ ಏರ್ ಫಿಲ್ಟರ್ ವಿನ್ಯಾಸಗೊಳಿಸಿದ್ದು, ಅದು ತಕ್ಷಣವೇ ವೈರಸ್​​​ ಕೊಲ್ಲುತ್ತದೆ. ಕೋವಿಡ್-19 ಹರಡುವುದನ್ನು ತಡೆಯಲು ಈ ಫಿಲ್ಟರ್ ವಿಮಾನ ನಿಲ್ದಾಣಗಳು, ವಿಮಾನಗಳು, ಕಚೇರಿ ಕಟ್ಟಡಗಳು, ಶಾಲೆಗಳು ಮತ್ತು ಹಡಗುಗಳಲ್ಲಿ ಉಪಯುಕ್ತವಾಗಲಿವೆ.

air filter
air filter

By

Published : Jul 9, 2020, 1:16 PM IST

ಹೈದರಾಬಾದ್: ಕೊರೊನಾ ವೈರಸ್ ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿ ಮುನ್ನುಗ್ಗುತ್ತಿರುವಾಗಲೇ ಹೂಸ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಕೋವಿಡ್-19ಗೆ ಕಾರಣವಾಗುವ ವೈರಸ್​​​ ಬಲೆ ಬೀಳಿಸಲು ಸನ್ನದ್ಧರಾಗಿದ್ದಾರೆ. ವೈರಸ್​​ ಬಲೆಗೆ ಬೀಳಿಸುವ ಏರ್ ಫಿಲ್ಟರ್ ವಿನ್ಯಾಸಗೊಳಿಸಿದ್ದು, ಅದು ತಕ್ಷಣವೇ ವೈರಸ್​​​ ಕೊಲ್ಲುತ್ತದೆ ಎಂದು ಹೇಳಿಕೊಂಡಿದ್ದಾರೆ.

"ಕ್ಯಾಚ್ ಅಂಡ್ ಕಿಲ್" ಫಿಲ್ಟರ್​​​​ ಅನ್ನು ವಿಶ್ವವಿದ್ಯಾಲಯದ ಟೆಕ್ಸಾಸ್ ಸೆಂಟರ್ ಫಾರ್ ಸೂಪರ್ ಕಂಡಕ್ಟಿವಿಟಿಯ ನಿರ್ದೇಶಕ ಝಿಫೆಂಗ್ ರೆನ್ ಈ ಫಿಲ್ಟರ್​ ವಿನ್ಯಾಸಗೊಳಿಸಿದ್ದಾರೆ. ಹೂಸ್ಟನ್ ಮೂಲದ ವೈದ್ಯಕೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಸ್ಥೆ ಮತ್ತು ಇತರ ಸಂಶೋಧಕರಾದ ಮೆಡಿಸ್ಟಾರ್‌ನ ಸಿಇಒ ಮೊಂಜರ್ ಹೌರಾನಿ ಈ ಸಂಶೋಧನೆಗೆ ಸಹಕರಿಸಿದ್ದಾರೆ.

ಗ್ಯಾಲ್ವೆಸ್ಟನ್ ನ್ಯಾಷನಲ್ ಲ್ಯಾಬೊರೇಟರಿಯಲ್ಲಿ ನಡೆದ ವೈರಸ್ ಪರೀಕ್ಷೆಯಲ್ಲಿ ಕೋವಿಡ್-19ಕ್ಕೆ ಕಾರಣವಾಗುವ ವೈರಸ್ 99.8 ಶೇಕಡಾದಷ್ಟು ನಾಶವಾಗಿದೆ. 392 ಡಿಗ್ರಿ ಫ್ಯಾರನ್​ಹೀಟ್​ಗೆ ಬಿಸಿಮಾಡಿದ ನಿಕಲ್ ಫೋಮ್​ನಿಂದ ತಯಾರಿಸಿದ ಫಿಲ್ಟರ್ ಮೂಲಕ ವೈರಸ್ ಕೊಲ್ಲಲ್ಪಟ್ಟಿದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಝಿಫೆಂಗ್ ರೆನ್, ಕೋವಿಡ್-19 ಹರಡುವುದನ್ನು ತಡೆಯಲು ಈ ಫಿಲ್ಟರ್ ವಿಮಾನ ನಿಲ್ದಾಣಗಳು, ವಿಮಾನಗಳು, ಕಚೇರಿ ಕಟ್ಟಡಗಳು, ಶಾಲೆಗಳು ಮತ್ತು ಹಡಗುಗಳಲ್ಲಿ ಉಪಯುಕ್ತವಾಗಲಿವೆ ಎಂದು ಹೇಳಿದರು.

"ಮೆಡಿಸ್ಟಾರ್ ಅಧಿಕಾರಿಗಳು ಡೆಸ್ಕ್ - ಟಾಪ್ ಮಾದರಿಯ ಏರ್ ಫಿಲ್ಟರ್ ವಿನ್ಯಾಸಗೊಳಿಸುವ ಕುರಿತು ಪ್ರಸ್ತಾಪಿಸಿದ್ದು, ಇದು ಕಚೇರಿಗಳಲ್ಲಿ ಗಾಳಿ ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ" ಎಂದು ಅವರು ಹೇಳಿದರು.

ಲಾಕ್​ಡೌನ್ ನಿಧಾನವಾಗಿ ಸಡಿಲಗೊಳ್ಳುತ್ತ ಬಂದಂತೆ ಹವಾನಿಯಂತ್ರಿತ ಸ್ಥಳಗಳಲ್ಲಿ ವೈರಸ್ ಹರಡುವುದನ್ನು ನಿಯಂತ್ರಿಸುವುದು ಅಗತ್ಯ. ವೈರಸ್ 70 ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಬದುಕಲು ಸಾಧ್ಯವಿಲ್ಲ. ಆದ್ದರಿಂದ ನಾವು ಬಿಸಿಯಾದ ಫಿಲ್ಟರ್ ಬಳಸಲು ನಿರ್ಧರಿಸಿದೆವು. ಫಿಲ್ಟರ್ ತಾಪಮಾನವನ್ನು ಹೆಚ್ಚು ಬಿಸಿ ಮಾಡುವ ಮೂಲಕ ವೈರಸನ್ನು ತಕ್ಷಣವೇ ಕೊಲ್ಲಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು.

ABOUT THE AUTHOR

...view details