ಕರ್ನಾಟಕ

karnataka

ETV Bharat / international

ಅಮೆರಿಕ.. ಸ್ಟೇಟ್​​ ಸೆನೆಟರ್​ ಸ್ಥಾನಕ್ಕೆ ಇದೇ ಮೊದಲ ಬಾರಿಗೆ ತೃತೀಯ ಲಿಂಗಿ ವ್ಯಕ್ತಿ ಆಯ್ಕೆ - ತೃತೀಯ ಲಿಂಗಿ ಹೋರಾಟಗಾರ್ತಿ ಸಾರಾ ಮೆಕ್​ಬ್ರೈಡ್ ಸುದ್ದಿ

ತೃತೀಯ ಲಿಂಗಿ ಹೋರಾಟಗಾರ್ತಿ ಸಾರಾ ಮೆಕ್​ಬ್ರೈಡ್​ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಅಮರಿಕ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿ ಸ್ಟೇಟ್​​ ಸೆನೆಟರ್​ ಸ್ಥಾನಕ್ಕೆ ಆಯ್ಕೆಯಾದ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ..

senator
ಅಮೆರಿಕ: ಸ್ಟೇಟ್​​ ಸೆನೆಟರ್​ ಸ್ಥಾನಕ್ಕೆ ಇದೇ ಮೊದಲ ಬಾರಿಗೆ ತೃತೀಯ ಲಿಂಗಿ ವ್ಯಕ್ತಿ ಆಯ್ಕೆ

By

Published : Nov 4, 2020, 6:17 PM IST

ವಾಷಿಂಗ್​ಟನ್​ :ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಲವಾರು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಇದೇ ಮೊದಲ ಬಾರಿ ತೃತೀಯ ಲಿಂಗಿಯೊಬ್ಬರು ಡೆಲೆವರ್​ ಸ್ಟೇಟ್​ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ.

ತೃತೀಯ ಲಿಂಗಿ ಹೋರಾಟಗಾರ್ತಿ ಸಾರಾ ಮೆಕ್​ಬ್ರೈಡ್​ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಅಮೆರಿಕ ಇತಿಹಾಸದಲ್ಲಿ ಮೊದಲ ಬಾರಿ ಸ್ಟೇಟ್​​ ಸೆನೆಟರ್​ ಸ್ಥಾನಕ್ಕೆ ಆಯ್ಕೆಯಾದ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

30ರ ಹರೆಯದ ಸಾರಾ ಮೆಕ್​ಬ್ರೈಡ್ ​ರಿಪಬ್ಲಿಕನ್​​ ಪಕ್ಷದ ಸ್ಟೀವ್​ ವಾಷಿಂಗ್​ಟನ್‌ರನ್ನು ಮಣಿಸಿ ಡೆಲವರ್​ ಸ್ಟೇಟ್​ ಫಸ್ಟ್​ ಸೆನೆಟ್​​ ಡಿಸ್ಟ್ರಿಕ್ಟ್​ ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಸಾರಾ ಮೆಕ್​ಬ್ರೈಡ್ ಡೆಲವೇರ್​​ನಲ್ಲಿ LGBTQ ಸಮುದಾಯದ ಹಕ್ಕುಗಳ ರಕ್ಷಣೆ ಹಾಗೂ ತಾರತಮ್ಯ ವಿರೋಧಿ ಕ್ರಮ ಕೈಗೊಳ್ಳಲು ಹೋರಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಅಲ್ಲದೇ 2016ರಲ್ಲಿ, ಫಿಲಡೆಲ್ಫಿಯಾದಲ್ಲಿ ನಡೆದ ಡೆಮಾಕ್ರಟಿಕ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೊದಲ ತೃತೀಯ ಲಿಂಗಿ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದರು. ಈ ಮೊದಲು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮರ ಆಡಳಿತ ಕಾಲದಲ್ಲಿ ಕೂಡ ಕೆಲಸ ಮಾಡಿರುವ ಸಾರಾ ಶ್ವೇತಭವನದಲ್ಲಿ ಕೆಲಸ ಮಾಡಿದ ಮೊದಲ ತೃತೀಯ ಲಿಂಗಿ ಮಹಿಳೆ ಎಂಬ ಪ್ರಶಂಸೆಗೆ ಪಾತ್ರವಾಗಿದ್ದರು.

ತಮ್ಮ ಈ ಗೆಲುವಿನ ಕುರಿತು ಟ್ವಿಟರ್​ನಲ್ಲಿ ಬರೆದುಕೊಂಡಿರುವ ಸಾರಾ ಮೆಕ್​ಬ್ರೈಡ್ "We did it. We won the general election. Thank you, thank you, thank you." ಎಂದು ಧನ್ಯವಾದ ತಿಳಿಸಿದ್ದಾರೆ.

ABOUT THE AUTHOR

...view details