ಎಲ್ ಸಾಲ್ವಾಡಾರ್:ಕೇಂದ್ರ ಅಮೆರಿಕಾದ ಎಲ್ ಸಾಲ್ವಾಡಾರ್ನಲ್ಲಿ ಪತ್ರಕರ್ತರು, ವಿರೋಧ ಪಕ್ಷದ ನಾಯಕರು, ಸಾಮಾಜಿಕ ಕಾರ್ಯಕರ್ತರ ಮೇಲೆ ಅಲ್ಲಿನ ಸರ್ಕಾರ ಗೂಢಚರ್ಯೆ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಎಲ್ ಸಾಲ್ವಾಡಾರ್ ಸರ್ಕಾರದಿಂದ ಪತ್ರಕರ್ತರ ಮೇಲೆ ಬೇಹುಗಾರಿಕೆ ಆರೋಪ - ಕೇಂದ್ರ ಅಮೆರಿಕಾದ ಎಲ್ ಸಾಲ್ವಾಡಾರ್
ಕೇಂದ್ರ ಅಮೆರಿಕಾದ ಎಲ್ ಸಾಲ್ವಾಡಾರ್ನಲ್ಲಿ ಪತ್ರಕರ್ತರು, ವಿರೋಧ ಪಕ್ಷದ ನಾಯಕರು, ಸಾಮಾಜಿಕ ಕಾರ್ಯಕರ್ತರ ಮೇಲೆ ಅಲ್ಲಿನ ಸರ್ಕಾರ ಗೂಢಚರ್ಯೆ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
![ಎಲ್ ಸಾಲ್ವಾಡಾರ್ ಸರ್ಕಾರದಿಂದ ಪತ್ರಕರ್ತರ ಮೇಲೆ ಬೇಹುಗಾರಿಕೆ ಆರೋಪ salvadoran journalists spyware](https://etvbharatimages.akamaized.net/etvbharat/prod-images/768-512-13730408-thumbnail-3x2-spyware.jpg)
ಪತ್ರಕರ್ತರ ಮೇಲೆ ಬೇಹುಗಾರಿಕೆ
ಸಾಲ್ವಾಡಾರ್ ಸರ್ಕಾರ ಪೆಗಾಸಸ್ ತಂತ್ರಾಂಶ ಅನ್ನು ಬಳಸಿಕೊಂಡು ಬೇಹುಗಾರಿಕೆ ನಡೆಸುತ್ತಿದೆ. ಈ ಕುರಿತು ಆ್ಯಪಲ್ ಇನ್ ಸಂಸ್ಥೆಯಿಂದ ಮಾಹಿತಿ ಲಭ್ಯವಾಗಿದೆ. ಸಂಭಾವ್ಯ ಬೇಹುಗಾರಿಕೆಯು 23 ಪತ್ರಕರ್ತರು, ವಿರೋಧ ಪಕ್ಷದ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರ ಮೇಲೆ ನಡೆಸಲಾಗುತ್ತಿದೆ. ಬೇಹುಗಾರಿಕೆಗೆ ಒಳಗಾದ ಬಗ್ಗೆ ಅವರೆಲ್ಲರಿಗೂ ಮಾಹಿತಿ ನೀಡಲಾಗಿದೆ ಎಂದು ಸಾಲ್ವಾಡಾರ್ ಪತ್ರಕರ್ತರ ಸಂಘ ತಿಳಿಸಿದೆ.
ಸರ್ಕಾರ ಯಾರ ಮೇಲೂ ಬೇಹುಗಾರಿಕೆ ನಡೆಸುತ್ತಿಲ್ಲ ಎಂದು ಸಾಲ್ವಾಡಾರ್ ಅಧ್ಯಕ್ಷ ನಯೀಬ್ ಬುಕೆಲೆ ಆರೋಪವನ್ನು ತಳ್ಳಿ ಹಾಕಿದ್ದಾರೆ.