ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರಿದಿದೆ. ಭಾರತೀಯರು ಸೇರಿದಂತೆ ಅನೇಕರು ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿದ್ದಾರೆ. ಅವರನ್ನು ಕರೆತರುವ ಕೆಲಸವೂ ಆಗುತ್ತಿದೆ. ಉಕ್ರೇನ್ ರಷ್ಯಾ ಯುದ್ಧದಿಂದ ಇತರೆ ದೇಶಗಳ ಮೇಲೆ ಭಾರಿ ಪರಿಣಾಮ ಬೀರಿದೆ.
ಮೆಕ್ಸಿಕೋ:ಉಕ್ರೇನ್‌ನ ಮೇಲೆ ರಷ್ಯಾ ಆಕ್ರಮಣಕ್ಕೆ ಸಂಬಂಧಿಸಿದಂತೆ ತನ್ನ ಸರ್ಕಾರವು ರಷ್ಯಾದ ಮೇಲೆ ಯಾವುದೇ ಆರ್ಥಿಕ ನಿರ್ಬಂಧಗಳನ್ನು ವಿಧಿಸುವುದಿಲ್ಲ ಎಂದು ಮೆಕ್ಸಿಕೋ ಅಧ್ಯಕ್ಷ ಆಂಡ್ರ್ಸ್ ಮ್ಯಾನುಯೆಲ್ ಲ್ಪೆಝ್ ಒಬ್ರಡಾರ್ ಹೇಳಿದ್ದಾರೆ. ಈ ಬಗ್ಗೆ ಮಂಗಳವಾರದಂದು ಮಾತನಾಡಿದ ಅವರು, ನಾವು ವಿಶ್ವದ ಎಲ್ಲಾ ಸರ್ಕಾರಗಳೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸುತ್ತೇವೆ ಎಂದಿದ್ದಾರೆ. ಸಂಘರ್ಷದ ಉಭಯ ರಾಷ್ಟ್ರಗಳೊಂದಿಗೆ ಮಾತನಾಡಲು ಸಾಧ್ಯವಾಗುವ ಪರಿಸ್ಥಿತಿಯಲ್ಲಿರಲು ನಾವು ಬಯಸುತ್ತೇವೆ ಎಂದು ತಿಳಿಸಿದ್ದಾರೆ.
ಒಕ್ಲಹೋಮ ಸಿಟಿ: ಯುಎಸ್‌ನಾದ್ಯಂತ ರಾಜಕಾರಣಿಗಳು ಅಧ್ಯಕ್ಷ ಜೋ ಬಿಡನ್ ಅವರ ದೇಶೀಯ ಇಂಧನ ನೀತಿಗಳ ಬಗ್ಗೆ ಟೀಕಿಸುತ್ತಿದ್ದಾರೆ ಮತ್ತು ದೇಶೀಯ ಉತ್ಪಾದನೆಯನ್ನು ಅಳವಡಿಸಿಕೊಳ್ಳಲು ಅವರ ಆಡಳಿತವನ್ನು ಒತ್ತಾಯಿಸುತ್ತಿದ್ದಾರೆ. ಒಕ್ಲಹೋಮ ಗವರ್ನರ್ ಕೆವಿನ್ ಸ್ಟಿಟ್ ಮತ್ತು ಓಹಿಯೋದ ಯುಎಸ್ ಸೆನೆಂಟ್ ರಾಬ್ ಪೋರ್ಟ್‌ಮ್ಯಾನ್ ಇಬ್ಬರೂ ಯುಎಸ್‌ಗೆ ರಷ್ಯಾದ ತೈಲ ಆಮದುಗಳನ್ನು ನಿಲ್ಲಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಂಗಳವಾರ ಬಿಡೆನ್ ಅವರನ್ನು ಒತ್ತಾಯಿಸಿದರು
ವಾಷಿಂಗ್ಟನ್: ತಮ್ಮ ಆಕ್ರಮಣಶೀಲತೆಗೆ ಬೆಲೆ ನೀಡದ ಸರ್ವಾಧಿಕಾರಿಗಳು ಹೆಚ್ಚಿನ ಅವ್ಯವಸ್ಥೆಯನ್ನು ಉಂಟುಮಾಡುತ್ತಾರೆ ಎಂದು ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಮಂಗಳವಾರದಂದು, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ನಿಂದ ಉಕ್ರೇನ್ ಮೇಲಿನ ಆಕ್ರಮಣವು ಪೂರ್ವಯೋಜಿತ ಎಂದು ಬಿಡೆನ್ ಹೇಳಿದ್ದಾರೆ. ಪುಟಿನ್ ಅವರು ನ್ಯಾಟೋ ಮೈತ್ರಿಯನ್ನು ವಿಭಜಿಸಬಹುದು ಎಂದು ಅಂದುಕೊಂಡಿದ್ದಾರೆ, ಆದರೆ ಇದು ಅವರ ತಪ್ಪು ಗ್ರಹಿಕೆ ಎಂದು ಹೇಳಿದರು.