ಕರ್ನಾಟಕ

karnataka

ETV Bharat / international

ಉಕ್ರೇನ್ ಬಿಕ್ಕಟ್ಟು: ವಿಶ್ವಸಂಸ್ಥೆಗೆ ಪತ್ರ ಬರೆದ ಕ್ರೆಮ್ಲಿನ್​..ಅಮೆರಿಕ ಪ್ರಸ್ತಾಪಕ್ಕೆ ರಷ್ಯಾ ಪ್ರತಿಕ್ರಿಯೆ ಏನು?. - ಉಕ್ರೇನ್ ಬಿಕ್ಕಟ್ಟು ಲೇಟೆಸ್ಟ್​​ ಅಪ್ಡೇಟ್​​

ರಷ್ಯಾ - ಉಕ್ರೇನ್ ಗಡಿಯಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಬಗ್ಗೆ ಭಾರತ ಮತ್ತು ರಷ್ಯಾ ನಡುವೆ ಜನವರಿ 2022 ರಲ್ಲಿ ಮೂರು ಉನ್ನತ ಮಟ್ಟದ ರಾಜತಾಂತ್ರಿಕ ಸಭೆಗಳು ನಡೆದಿವೆ..

Russia responds to US proposal to deescalate Ukraine crisis
ಉಕ್ರೇನ್ ಬಿಕ್ಕಟ್ಟು: ಯುಎಸ್ ಪ್ರಸ್ತಾಪಕ್ಕೆ ರಷ್ಯಾ ಪ್ರತಿಕ್ರಿಯೆ

By

Published : Feb 1, 2022, 1:50 PM IST

ವಿಶ್ವಸಂಸ್ಥೆ: ಉಕ್ರೇನ್ ಬಿಕ್ಕಟ್ಟನ್ನು ತಗ್ಗಿಸುವ ಗುರಿಯನ್ನು ಹೊಂದಿರುವ ಅಮೆರಿಕ ಪ್ರಸ್ತಾಪಕ್ಕೆ ರಷ್ಯಾ ಸರ್ಕಾರ ಲಿಖಿತ ಪ್ರತಿಕ್ರಿಯೆ ನೀಡಿದೆ. ವಿಶ್ವಸಂಸ್ಥೆ ಆಡಳಿತಾಧಿಕಾರಿಗಳ ಪ್ರಕಾರ, ರಷ್ಯಾದ ಸುಮಾರು 100,000 ಪಡೆಗಳು ಉಕ್ರೇನ್ ಗಡಿಯಲ್ಲಿ ಬೀಡು ಬಿಟ್ಟಿದ್ದು, ಬಿಕ್ಕಟ್ಟು ತಗ್ಗಿಸು ಹಿನ್ನೆಲೆಯಲ್ಲಿ ಬೈಡನ್​ ಸರ್ಕಾರ​ ರಷ್ಯಾ ಸರ್ಕಾರದ ಮೇಲೆ ಒತ್ತಡ ಹೇರುವುದನ್ನು ಮುಂದುವರೆಸುತ್ತಿದೆ. ಈ ಹಿನ್ನೆಲೆ ರಷ್ಯಾ ಪ್ರತಿಕ್ರಿಯೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಷ್ಯಾ ಯಾವ ತಿರುಗೇಟು ನೀಡಿದೆ ಹಾಗೂ ಏನು ಹೇಳಿದೆ ಎಂಬ ವಿವರಗಳನ್ನು ನೀಡಲು ಅಧಿಕಾರಿಯೊಬ್ಬರು ನಿರಾಕರಿಸಿದ್ದಾರೆ. ಸಾರ್ವಜನಿಕವಾಗಿ ಮಾತುಕತೆ ನಡೆಸುವುದು ಸರಿಯಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ನಡುವೆ ಅಮೆರಿಕ ರಷ್ಯಾ ಉಕ್ರೇನ್‌ನ ಮೇಲೆ ಉದ್ವಿಗ್ನತೆ ಹೆಚ್ಚಿಸುತ್ತಿದೆ ಎಂದು ಆರೋಪಿಸಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಅಮೆರಿಕ ರಾಯಭಾರಿ ಲಿಂಡಾ ಥಾಮಸ್ - ಗ್ರೀನ್‌ಫೀಲ್ಡ್, ಉಕ್ರೇನ್​​ ಗಡಿಯಲ್ಲಿ ಹೆಚ್ಚುತ್ತಿರುವ ರಷ್ಯಾದ ಮಿಲಿಟರಿ ಬಲ ಯುರೋಪ್‌ನಲ್ಲಿ ಅತಿದೊಡ್ಡ ಯುದ್ದಕ್ಕೆ ಸಜ್ಜುಗೊಳಿಸಿದಂತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಯಾವುದೇ ವಾಸ್ತವಿಕ ಆಧಾರವಿಲ್ಲದೇ, ದಾಳಿಯ ನೆಪವನ್ನು ಸೃಷ್ಟಿಸಲು ಉಕ್ರೇನ್ ಮತ್ತು ಪಾಶ್ಚಿಮಾತ್ಯ ದೇಶಗಳನ್ನು ರಷ್ಯಾ ಆಕ್ರಮಣಕಾರರೆಂದು ಬಣ್ಣಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಉಕ್ರೇನ್​ ಮೇಲಿನ ದಾಳಿಯ ಯೋಜನೆಯನ್ನು ರಷ್ಯಾ ನಿರಾಕರಿಸಿದೆ. ರಷ್ಯಾದ ರಾಯಭಾರಿ ವಾಸಿಲಿ ನೆಬೆಂಜಿಯಾ ಬೈಡೆನ್ ಆಡಳಿತವು ಉದ್ವಿಗ್ನತೆ ಪ್ರಚೋದಿಸುತ್ತಿದೆ ಎಂದು ಪ್ರತಿಯಾಗಿ ಆರೋಪಿಸಿದ್ದಾರೆ. ಇನ್ನು ರಷ್ಯಾ - ಉಕ್ರೇನ್ ಗಡಿಯಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಬಗ್ಗೆ ಭಾರತ ಮತ್ತು ರಷ್ಯಾ ನಡುವೆ ಜನವರಿ 2022 ರಲ್ಲಿ ಮೂರು ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆಗಳು ಈಗಾಗಲೇ ನಡೆದಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಉಕ್ರೇನ್ ಬಿಕ್ಕಟ್ಟು..ಯುಎಸ್ ನಿಲುವೇನು?

For All Latest Updates

ABOUT THE AUTHOR

...view details