ಕರ್ನಾಟಕ

karnataka

ETV Bharat / international

ಇಲ್ಲಿ ಮಾಸ್ಕ್​ ಹಾಕಿದ್ರೂ ಕಷ್ಟ: ರೆಸ್ಟೋರೆಂಟ್‌ ಗ್ರಾಹಕರಿಗೆ ಬಿತ್ತು ದಂಡ - ಕ್ರಿಸ್ ಕ್ಯಾಸಲ್‌ಮನ್

ಆರಂಭದಿಂದಲೂ ಲಾಕ್​ಡೌನ್​-ಕೋವಿಡ್​ ನಿರ್ಬಂಧಗಳನ್ನು ವಿರೋಧಿಸುತ್ತಾ ಬಂದಿದ್ದ ಕ್ಯಾಲಿಫೋರ್ನಿಯಾದ ರೆಸ್ಟೋರೆಂಟ್​ವೊಂದು ಇದೀಗ ಮಾಸ್ಕ್​ ಹಾಕಿ ರೆಸ್ಟೋರೆಂಟ್​ಗೆ ಬಂದ ಜನರಿಗೆ 5 ಡಾಲರ್ ದಂಡ ವಿಧಿಸುತ್ತಿದೆ.

Anti-lockdown California restaurant owner fines patrons $5 for wearing a mask OR 'bragging' about COVID vaccine - and says he'll donate the fees to charity
ರೆಸ್ಟೋರೆಂಟ್‌ ಗ್ರಾಹಕರಿಗೆ ಬಿತ್ತು ದಂಡ

By

Published : Jun 7, 2021, 1:49 PM IST

ಕ್ಯಾಲಿಫೋರ್ನಿಯಾ (ಅಮೆರಿಕ): ಕೋವಿಡ್​ ಲಸಿಕೆಯ ಎರಡೂ ಡೋಸ್​ಗಳನ್ನು ಪಡೆದವರು ಮಾಸ್ಕ್​ ಧರಿಸುವ ಅಗತ್ಯವಿಲ್ಲ ಎಂದಿದ್ದ ಅಮೆರಿಕದಲ್ಲೀಗ ಮಾಸ್ಕ್​ ಹಾಕಿದವರಿಗೆ ದಂಡ ವಿಧಿಸುತ್ತಿದ್ದಾರೆಂದರೆ ನೀವು ನಂಬಲೇ ಬೇಕು.

ಅಮೆರಿಕದ ಕ್ಯಾಲಿಫೋರ್ನಿಯಾದ ರೆಸ್ಟೋರೆಂಟ್​ವೊಂದರಲ್ಲಿ ಮಾಸ್ಕ್​ ಧರಿಸಿ ಬಂದ ಗ್ರಾಹಕರಿಗೆ ದಂಡ ವಿಧಿಸಲಾಗುತ್ತಿದೆ. ಮೆಂಡೊಸಿನೊದಲ್ಲಿನ ಫಿಡೆಲ್‌ಹೆಡ್ಸ್ ಕೆಫೆ ಮಾಲೀಕರು ಕೊರೊನಾ ಸಾಂಕ್ರಾಮಿಕದ ಆರಂಭದಿಂದಲೂ ಲಾಕ್​ಡೌನ್​-ಕೋವಿಡ್​ ನಿರ್ಬಂಧಗಳನ್ನು ವಿರೋಧಿಸುತ್ತಾ ಬಂದಿದ್ದರು. ಮಾಸ್ಕ್​​​ಗಳನ್ನು ಕಸದ ಬುಟ್ಟಿಗೆ ಎಸೆಯುವವರಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಕೂಡ ಮಾರ್ಚ್‌ನಲ್ಲಿ ಘೋಷಿಸಿದ್ದರು.

ಇದನ್ನೂ ಓದಿ: ಸಂಪೂರ್ಣವಾಗಿ ಲಸಿಕೆ ಪಡೆದವರು ಮಾಸ್ಕ್​​ ಧರಿಸಬೇಕಿಲ್ಲ- ಅಮೆರಿಕ

ಇದೀಗ ಮಾಸ್ಕ್​ ಹಾಕಿ ರೆಸ್ಟೋರೆಂಟ್​ಗೆ ಬಂದ ಜನರಿಗೆ ಹೆಚ್ಚುವರಿ 5 ಡಾಲರ್​ ಹಣವನ್ನು ನೀಡಲು ಸೂಚಿಸುತ್ತಿದ್ದಾರೆ. ಆದರೆ ದಂಡದ ಹಣವನ್ನು ಸಂಗ್ರಹಿಸಿ ಅದನ್ನು ಚಾರಿಟಿಗಳಿಗೆ ದಾನವಾಗಿ ನೀಡುವುದಾಗಿ ರೆಸ್ಟೋರೆಂಟ್ ಮಾಲೀಕ ಕ್ರಿಸ್ ಕ್ಯಾಸಲ್‌ಮನ್ ಹೇಳಿದ್ದಾರೆ.

ಕೋವಿಡ್​ ಪರಿಣಾಮಗಳನ್ನು ಎದುರಿಸಿ ಸಹಜ ಸ್ಥಿತಿಗೆ ಮರಳಿರುವ ಅಮೆರಿಕದಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೊರತು ಪಡಿಸಿ ಉಳಿದ ಸ್ಥಳಗಳಲ್ಲಿ ಸಂಪೂರ್ಣವಾಗಿ ವ್ಯಾಕ್ಸಿನ್​ ಹಾಕಿಸಿಕೊಂಡ ಜನರು ಮಾಸ್ಕ್​​ ಧರಿಸಬೇಕಿಲ್ಲ. ದೈಹಿಕ ಅಂತರ ಕಾಯ್ದುಕೊಳ್ಳಬೇಕಿಲ್ಲ. ದೇಶದೊಳಗೆ ಪ್ರಯಾಣಿಸುವವರು ಕ್ವಾರಂಟೈನ್​ಗೆ ಒಳಪಡುವ ಅಗತ್ಯತೆಯಿಲ್ಲ ಎಂದು ಅಧ್ಯಕ್ಷ ಜೋ ಬೈಡನ್​ ಈ ಹಿಂದೆ ತಿಳಿಸಿದ್ದರು.

ABOUT THE AUTHOR

...view details