ನ್ಯೂಯಾರ್ಕ್(ಯುಎಸ್):ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76ನೇ ಅಧಿವೇಶನದಲ್ಲಿ ಜಿ-4 ದೇಶಗಳ ವಿದೇಶಾಂಗ ಸಚಿವರು ಭಾಗವಹಿಸಿದ್ದರು. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಬ್ರೆಜಿಲ್‌ನ ಕಾರ್ಲೋಸ್ ಆಲ್ಬರ್ಟೊ ಫ್ರಾಂಕೋ ರಾಂಕಾ, ಜರ್ಮನಿಯ ಹೈಕೋ ಮಾಸ್ ಮತ್ತು ಜಪಾನ್‌ನ ತೋಶಿಮಿಟ್ಸು ಮೊಟೆಗಿ ಅವರು ಸಭೆಯ 76ನೇ ಅಧಿವೇಶನಗಳಲ್ಲಿ ಭೇಟಿಯಾದರು.
ಸಭೆಯಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ(unsc) ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸುಧಾರಣೆಗಳನ್ನು ತರಬೇಕೆಂದು ಒತ್ತಾಯಿಸಿದ್ದಾರೆ. ಸಭೆ ಬಳಿಕ ನಾಲ್ವರು ಜಂಟಿ ಹೇಳಿಕೆ ಹೊರಡಿಸಿದ್ದು, ಶಾಶ್ವತ ಮತ್ತು ಖಾಯಂ ಅಲ್ಲದ ಸದಸ್ಯ ರಾಷ್ಟ್ರಗಳ ಮೂಲಕ ಭದ್ರತಾ ಮಂಡಳಿ ಸುಧಾರಣೆ ಮಾಡುವುದು ಅನಿವಾರ್ಯ ಆಗಿದೆ.