ಕರ್ನಾಟಕ

karnataka

ETV Bharat / international

ಎರಡು ಮರಿಗಳಿಗೆ ಜನ್ಮ ನೀಡಿದ ಸೀ ಡ್ರ್ಯಾಗನ್... ಹೀಗಿದೆ ಇದರ ವಿಶೇಷತೆ!! - Rare sea dragon successfully bred,

ಅತೀ ಕಡಿಮೆ ಸಂಖ್ಯೆಯಲ್ಲಿ ಇರುವ ಸೀ ಡ್ರ್ಯಾಗನ್​ ಪ್ರಬೇಧವನ್ನು ವೃದ್ಧಿಸುವಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಯಶಸ್ವಿಯಾಗಿದೆ.

Rare sea dragon, Rare sea dragon successfully bred, Rare sea dragon successfully bred in California, ಸೀ ಡ್ರ್ಯಾಗನ್, ಎರಡು ಮರಿಗಳಿಗೆ ಜನ್ಮ ನೀಡಿದ ಸೀ ಡ್ರ್ಯಾಗನ್, ಕ್ಯಾಲಿಫೋರ್ನಿಯಾದಲ್ಲಿ ಎರಡು ಮರಿಗಳಿಗೆ ಜನ್ಮ ನೀಡಿದ ಸೀ ಡ್ರ್ಯಾಗನ್,
ಸಂಗ್ರಹ ಚಿತ್ರ

By

Published : Feb 14, 2020, 1:18 PM IST

ಸ್ಯಾನ್​ ಡಿಯಾಗೋ( ಅಮೆರಿಕ): ವಿಶ್ವದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿರುವ‌ ಸೀ ಡ್ರ್ಯಾಗನ್ ಪ್ರಭೇದವನ್ನು ಹೆಚ್ಚಿಸುವ ಮತ್ತು ಪರಿಚಯಿಸುವ‌ ನಿಟ್ಟಿನಲ್ಲಿ ‌ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸೀ ಡ್ರ್ಯಾಗನ್ ಅಕ್ವೇರಿಯಂ ಆರಂಭಿಸಿದ್ದು, ಎಲ್ಲರಿಗೂ ತಿಳಿದ ವಿಚಾರ. ಈಗ ಈ ಅಕ್ವೇರಿಯಂನಲ್ಲಿ ಸೀ ಡ್ರ್ಯಾಗನ್​ ಸಂಖ್ಯೆ ಹೆಚ್ಚಾಗ್ತಿದೆ.

ಹೌದು, ಕ್ಯಾಲಿಫೋರ್ನಿಯಾ‌ ವಿಶ್ವವಿದ್ಯಾಲಯದ ಸಮುದ್ರ ಶಾಸ್ತ್ರ ವಿಭಾಗ ಈ‌ ಅಕ್ವೇರಿಯಂ ಆರಂಭಿಸಿದ್ದು, ಇದರಲ್ಲಿ ವೀಡಿ‌ ಹಾಗೂ ಲೀಫಿ ಎನ್ನುವ ಪ್ರಭೇದದ ಸೀ ಡ್ರ್ಯಾಗನ್​ಗಳನ್ನು ಇಡಲಾಗಿತ್ತು. ಈ ವಾರ ಲೀಫಿ ತಳಿಯ ಸೀ ಡ್ರ್ಯಾಗನ್​ ಎರಡು ಮರಿಗಳಿಗೆ ಜನ್ಮ ನೀಡಿದೆ. ಅವು ಒಂದು ಇಂಚು ಎತ್ತರ ಬೆಳೆದಿದ್ದು, ಈ ಮೀನು​ ಆಹಾರ ಸೇವನೆ ಆರಂಭಿಸಿದೆ. ಯಶಸ್ವಿಯಾಗಿ ಈ ತಳಿಯ ಪ್ರಬೇಧಗಳನ್ನು ನಾವು ಬೆಳೆಸುತ್ತಿದ್ದೇವೆ ಎಂದು ಅಕ್ವೇರಿಯಂ ಮೇಲ್ವಿಚಾರಕರು ಹೇಳಿದ್ದಾರೆ.

ಆಸ್ಟ್ರೇಲಿಯಾದ‌ ಕೆಲ ಭಾಗದಲ್ಲಿ ಮಾತ್ರ ಸಿಗುವ ಈ ಡ್ರ್ಯಾಗನ್‌ ನಶಿಸಿ ಹೋಗುವ ಹಂತಕ್ಕೆ ತಲುಪಿದೆ. ಹೀಗಾಗಿ ಜನರಿಗೆ ಈ ಪ್ರಬೇಧವನ್ನ ಪರಿಚಯಿಸಲು ಮತ್ತು ಹೆಚ್ಚಿಸುವ ನಿಮಿತ್ತ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಈ ತೀರ್ಮಾನ ತೆಗೆದುಕೊಂಡಿತ್ತು.

ಈ ಸೀ ಡ್ರ್ಯಾಗನ್ ಸಂರಕ್ಷಣೆಗೆ 18 ಅಡಿ ಎತ್ತರದ ಅಕ್ವೇರಿಯಂ ಸಿದ್ಧಪಡಿಸಿದ್ದು, ಇದರಲ್ಲಿ ಮೂರು ಲೀಫಿ ಡ್ರ್ಯಾಗನ್‌ಗಳಿದ್ದು, ಎರಡು ಗಂಡು ಹಾಗೂ ಮತ್ತೊಂದು ಹೆಣ್ಣು ಡ್ರ್ಯಾಗನ್​ ಇದೆ . ಇನ್ನುಳಿದಂತೆ 11 ವೀಡಿ ಡ್ರ್ಯಾಗನ್ ಗಳಿವೆ. ಈಗ ಲೀಫಿ ಡ್ರ್ಯಾಗನ್​ಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರ ಸಂತಸವನ್ನ ಮತ್ತಷ್ಟು ಹೆಚ್ಚಿಸಿದೆ.

ABOUT THE AUTHOR

...view details