ಕರ್ನಾಟಕ

karnataka

By

Published : Nov 16, 2021, 9:12 AM IST

ETV Bharat / international

ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಮಳೆ ಆರ್ಭಟ: ಹೆದ್ದಾರಿಗಳು ಬಂದ್, ಜನರ ಸ್ಥಳಾಂತರ

ಕೆನಡಾದ ಹಲವೆಡೆ ಭಾರಿ ಮಳೆಯಾಗಿದ್ದು, ಹಲವಾರು ರಸ್ತೆಗಳನ್ನು ಮುಚ್ಚಲಾಗಿದೆ. ಅಮೆರಿಕದ ದಕ್ಷಿಣದ ಗಡಿಯಾದ ಮೆರಿಟ್ ಮತ್ತು ಫ್ರೇಸರ್ ಪ್ರದೇಶ ಮತ್ತು ದಕ್ಷಿಣ ವ್ಯಾಂಕೋವರ್ ದ್ವೀಪದಲ್ಲಿ ಪ್ರವಾಹ ಮುನ್ನೆಚ್ಚರಿಕೆಯನ್ನು ಘೋಷಿಸಲಾಗಿದೆ.

Rain sets off flooding, mudslides in British Columbia
ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಮಳೆ ಆರ್ಭಟ: ಹೆದ್ದಾರಿಗಳು ಬಂದ್, ಜನರ ಸ್ಥಳಾಂತರ

ವ್ಯಾಂಕೋವರ್( ಕೆನಡಾ):ಪೆಸಿಫಿಕ್ ಸಾಗರದ ಕರಾವಳಿಯ ಸಮೀಪದಲ್ಲಿರುವ ಕೆನಡಾದ ಬ್ರಿಟಿಷ್ ಕೊಲಂಬಿಯಾದ (British Columbia) ಭಾಗದಲ್ಲಿ ಭಾರಿ ಮಳೆ, ಭೂ ಕುಸಿತ, ಪ್ರವಾಹದ ಕಾರಣದಿಂದ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ಪ್ರಾಂತ್ಯದ ದಕ್ಷಿಣ ಭಾಗದಲ್ಲಿರುವ ಕೆಲವು ಹೆದ್ದಾರಿಗಳನ್ನು ಮುಚ್ಚಲಾಗಿದೆ.

ಅಗಾಸಿಜ್ ಸೇರಿದಂತೆ ಕೆಂಟ್ ಜಿಲ್ಲೆಯಲ್ಲಿ ಮತ್ತು ಚಿಲ್ಲಿವಾಕ್ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ ಎಂದು ಕೆನಡಾದ ಪರಿಸರ ಇಲಾಖೆ (Environment Canada) ಮಾಹಿತಿ ನೀಡಿದೆ. ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಭೂಕುಸಿತವಾಗಿ, ಹಲವು ವಾಹನಗಳು ಸಿಲುಕಿಕೊಂಡಿವೆ. ಅವುಗಳ ರಕ್ಷಣೆಗೆ ಸಿಬ್ಬಂದಿ ಧಾವಿಸಿದ್ದಾರೆ ಎಂದು ವಿಕೋಪ ನಿರ್ವಹಣಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಅಮೆರಿಕದ ದಕ್ಷಿಣದ ಗಡಿಯಾದ (United States border) ಮೆರಿಟ್ ಮತ್ತು ಫ್ರೇಸರ್ ಪ್ರದೇಶ ಮತ್ತು ದಕ್ಷಿಣ ವ್ಯಾಂಕೋವರ್ ದ್ವೀಪದ (Vancouver Island) ಕೆಲವು ಭಾಗಗಳಲ್ಲಿ ಪ್ರವಾಹ ಸಂಭವಿಸಬಹುದಾದ ಎಚ್ಚರಿಕೆಯನ್ನು ಸರ್ಕಾರ ನೀಡಿದೆ.

ಸೋಮವಾರ ಬೆಳಗ್ಗೆ ಅಣೆಕಟ್ಟೆಯೊಂದು ಒಡೆದ ಪರಿಣಾಮ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮೆರಿಟ್, ಅಗಾಸ್ಸಿಜ್, ಅಬಾಟ್ಸ್‌ಫೋರ್ಡ್ ಮತ್ತು ಪ್ರಿನ್ಸ್‌ಟನ್‌ನಲ್ಲಿ 200 ಕುಟುಂಬಗಳ ಸ್ಥಳಾಂತರಕ್ಕೆ ಆದೇಶ ನೀಡಲಾಗಿದೆ. ಹೆಲಿಕಾಪ್ಟರ್ ಬಳಸಿ ಕೆಲವರನ್ನು ಸ್ಥಳಾಂತರ ಮಾಡಲಾಗಿದೆ. ಮೆರಿಟ್ ನಗರದಲ್ಲಿ ನೀರು ಸರಬರಾಜು ವ್ಯವಸ್ಥೆಯಲ್ಲಿ ಏರುಪೇರಾಗಿದ್ದು, ನೀರಿನ ಬಳಕೆಯನ್ನು ನಿಲ್ಲಿಸುವಂತೆ ಸಾರ್ವಜನಿಕರಿಗೆ ಸರ್ಕಾರ ಸೂಚನೆ ನೀಡಿದೆ. ಚರಂಡಿಗಳ ನೀರೂ ಸರ್ಕಾರದ ನೀರು ಸರಬರಾಜು ವ್ಯವಸ್ಥೆಯಲ್ಲಿ ಬೆರೆತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್​​​ಗಳು ಹರಿದಾಡುತ್ತಿವೆ.

ಪೂರ್ವ ಫ್ರೇಸರ್ ಕಣಿವೆಯಲ್ಲಿ ಇನ್ನೂ 50 ಮಿಲಿಮೀಟರ್ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯ ಅವಘಡಗಳಿಂದ ಮನೆ ತಲುಪಲು ಸಾಧ್ಯವಾಗದವರರಿಗೆ, ಮನೆಗಳಿಗೆ ನೀರು ನುಗ್ಗಿದವರಿಗೆ ಭಾನುವಾರ ಸ್ವಾಗತ ಕೇಂದ್ರವನ್ನು ತೆರೆಯಲಾಗಿದೆ. ಗುಡ್ಡ ಕುಸಿತದಂತಹ ಕೆಲವು ಅವಘಡಗಳು ಮಾರ್ಗಗಳನ್ನು ಬಂದ್ ಮಾಡಿದ್ದು, ಕೆಲವು ಮನರಂಜನಾ ಕೇಂದ್ರಗಳಲ್ಲೂ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲಾಗಿದೆ.

ಇದನ್ನೂ ಓದಿ:Space Junk: ಗಗನಯಾತ್ರಿಗಳಿಗೆ ಬೆದರಿಕೆಯೊಡ್ಡಿದ 'ಬಾಹ್ಯಾಕಾಶ ತ್ಯಾಜ್ಯ'

ABOUT THE AUTHOR

...view details