ಕರ್ನಾಟಕ

karnataka

ETV Bharat / international

ಕೊರೊನಾ ಸೋಂಕಿಗೆ ತುತ್ತಾದ ಮಕ್ಕಳ ರಕ್ಷಣೆಗೆ ಕೈ ಜೋಡಿಸಿದ ದೇಸಿ ಗರ್ಲ್​

ಕರೋನಾ ವೈರಸ್‌ನಿಂದ ಹೆಚ್ಚು ಬೇಗನೆ ಸೋಂಕಿಗೆ ಒಳಗಾಗುವ ವಿಶ್ವದಾದ್ಯಂತದ ಮಕ್ಕಳನ್ನು ಉಳಿಸುವ ಸಲುವಾಗಿ ಸ್ವೀಡಿಷ್ ಟೀನೇಜ್ ಆಕ್ಟಿವಿಸ್ಟ್ ಗ್ರೆಟಾ ಥನ್‌ಬರ್ಗ್ ಜೋತೆ ನಾನು ಸೇರಿಕೊಂಡು ಒಟ್ಟಾಗಿ ಕೆಲಸ ಮಾಡಲಿದ್ದೇವೆ ಎಂದು ಪ್ರಿಯಾಂಕಾ ಚೋಪ್ರಾ ಟ್ವೀಟ್ ಮಾಡಿದ್ದಾರೆ.

Priyanka
ಪ್ರಿಯಾಂಕಾ ಚೋಪ್ರಾ

By

Published : May 1, 2020, 9:02 PM IST

ಮುಂಬೈ: ವಿಶ್ವಾದ್ಯಂತ ಕರೋನಾ ವೈರಸ್‌ಗೆ ತುತ್ತಾದ ಮಕ್ಕಳನ್ನು ಉಳಿಸಲು ನಟಿ ಪ್ರಿಯಾಂಕಾ ಚೋಪ್ರಾ ಸ್ವೀಡಿಷ್ ಟೀನೇಜ್ ಆಕ್ಟಿವಿಸ್ಟ್​ ಗ್ರೆಟಾ ಥನ್‌ಬರ್ಗ್ ಅವರೊಂದಿಗೆ ಕೈಜೋಡಿಸಿದ್ದಾರೆ.

ಈ ಬಗ್ಗೆ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ದೇಸಿ ಗರ್ಲ್ ಪ್ರಿಯಾಂಕಾ, ದುರ್ಬಲ ಮತ್ತು ಕೊರೊನಾ ವೈರಸ್ ಸೋಂಕಿನ ಅಪಾಯದಲ್ಲಿರುವ ಮಕ್ಕಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ವಿಶ್ವದಾದ್ಯಂತ ದುರ್ಬಲ ಮಕ್ಕಳ ಮೇಲಿನ ಕೋವಿಡ್ -19 ರ ಪರಿಣಾಮವನ್ನು ನೋಡುವುದು ಹೃದಯ ವಿದ್ರಾವಕವಾಗಿದೆ. ಅವರು ಈಗ ಆಹಾರದ ಕೊರತೆ, ಒತ್ತಡದ ಆರೋಗ್ಯ ವ್ಯವಸ್ಥೆಗಳು, ಹಿಂಸೆ ಮತ್ತು ಕಳೆದುಹೋದ ಶಿಕ್ಷಣವನ್ನು ನಿಭಾಯಿಸಬೇಕಾಗಿದೆ. ನಾವು ಅವರನ್ನು ರಕ್ಷಿಸಬೇಕಾಗಿದೆ. ಅದರ ಜವಾಬ್ದಾರಿ ನಮ್ಮ ಮೇಲಿದೆ. ಈ ಅಭಿಯಾನಕ್ಕೆ ಸಹಾಯ ಮಾಡಲು@ ಯುನಿಸೆಫ್ ಮತ್ತು ರೆಗ್ರೇಟಾ ಥನ್‌ಬರ್ಗ್‌ಗೆ ಸೇರಿ ಎಂದು ನಟಿ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಈ ಹಿಂದೆ ಪ್ರಿಯಾಂಕಾ ಮತ್ತು ನಿಕ್ ಜೋನಸ್​ ಪಿಎಂ - ಕೇರ್ಸ್ ಫಂಡ್, ಯುನಿಸೆಫ್, ಫೀಡಿಂಗ್ ಅಮೆರಿಕ ಮತ್ತು ಎಕೋ ಸೇರಿದಂತೆ ಹಲವಾರು ಕೊರೊನಾ ಪರಿಹಾರ ನಿಧಿಗೆ ಸಾಕಷ್ಟು ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.

ABOUT THE AUTHOR

...view details