ಕರ್ನಾಟಕ

karnataka

ETV Bharat / international

ಪಿಗ್ಗಿಯ ಜಾಕೆಟ್​ನಲ್ಲಿ ಮೂಡಿಬಂದ ಉಗ್ರಸ್ವರೂಪಿ ಮಹಾಕಾಳಿ; ಇದಕ್ಕೆ ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ.. - ಪ್ರಿಯಾಂಕಾ ಚೋಪ್ರಾ ಜಾಕೆಟ್​

ವಿಭಿನ್ನ ಹಾಗೂ ಆಕರ್ಷಕ ಬಟ್ಟೆ ತೊಟ್ಟು ಪತಿಯೊಂದಿಗೆ ತಿರುಗಾಡಲು ಬಂದ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಈಗ ಮತ್ತೆ ಸುದ್ದಿಯಾಗಿದ್ಧಾರೆ. ಕಾರಣ ಅವರು ಧರಿಸಿದ್ದ ಬಟ್ಟೆ..

Priyanka Chopra Jonas Wears 'Goddess Kaali' Jacket in New Picture With Nick Jonas
Priyanka Chopra Jonas Wears 'Goddess Kaali' Jacket in New Picture With Nick Jonas

By

Published : May 12, 2021, 4:08 PM IST

Updated : May 12, 2021, 4:33 PM IST

ಜಾಗತಿಕ ಫ್ಯಾಷನ್ ಐಕಾನ್ ಎಂದು ಗುರಿತಿಸಿಕೊಂಡಿರುವ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಟ್ರೆಂಡಿಂಗ್​ ಆಗಿದ್ದಾರೆ.

ಗುಲಾಬಿಗಳನ್ನು ಒಳಗೊಂಡಿರುವ ರತ್ನಖಚಿತ ಕೆಂಪು ಜಾಕೆಟ್​ನಲ್ಲಿ​ ಕಾಳಿಕಾ ಮಾತೆ ಕಾಣಿಸುವ ಅವರ ಹಳೆಯ ಫೋಟೋವೊಂದು ಈಗ ಭಾರಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ವಿಭಿನ್ನ ಹಾಗೂ ಆಕರ್ಷಕ ಬಟ್ಟೆ ತೊಡುವ ನಟಿ ಪ್ರಿಯಾಂಕಾ ಚೋಪ್ರಾ ಟ್ರೆಂಡಿಂಗ್​ ಸೃಷ್ಟಿಸುವಲ್ಲಿ ಯಾವತ್ತು ಹಿಂದೆ ಬಿದ್ದವರಲ್ಲ. ಇಂತಹದ್ದೊಂದು ಬಟ್ಟೆ ತೊಟ್ಟು ಪತಿ ನಿಕ್​ ಜೋನಸ್​ ಜೊತೆ ತಿರುಗಾಡಲು ಬಂದಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.

ಪತಿಯೊಂದಿಗೆ ಜಾಲಿ ಮೂಡ್​ನಲ್ಲಿರುವಾಗ ಅವರ ಹಿಂದಿನಿಂದ ಫೋಟೋ ಕ್ಲಿಕ್ಕಿಸಲಾಗಿದ್ದು ಈ ದೇವಿಯ ಅವತಾರ ಕಾಣಿಸಿಕೊಂಡಿದೆ.

ದುರ್ಗಿಯ ಅವತಾರವುಳ್ಳ ರೆಡ್​ ಜಾಕೆಟ್ ಇದಾಗಿದ್ದು ಅವರ ಬೆನ್ನ ಮೇಲೆ ಕಾಳಿ ದೇವಿಯ ಮುಖದ ವರ್ಣಚಿತ್ರವಿದೆ. ಅಂತಹದ್ದೊಂದು ವಿಶಿಷ್ಟ ಜಾಕೆಟ್ ಧರಿಸಿದ್ದ ಫೋಟೋ ಈಗ ವೈರಲ್​ ಆಗಿದೆ. ವಿದೇಶಿ ನೆಲದಲ್ಲಿ ಭಾರತೀಯ ದೇವರುಗಳ ಆಕೃತಿ ಇರುವ ಬಟ್ಟೆ ತೊಟ್ಟಿದ್ದಕ್ಕೆ ಕೆಲವರು ಟೀಕಿಸಿದ್ದಾರೆ.

ಈ ಬಗ್ಗೆ ಪರ ಮತ್ತು ವಿರೋಧದ ಮಾತುಗಳು ಸಹ ಕೇಳಿ ಬರುತ್ತಿವೆ. ಹಾಲಿವುಡ್​​ ತಾರೆಯರು ಸೇರಿದಂತೆ ಹಲವು ಪಾಪ್​ ಗಾಯಕರು ಹಾಗೂ ನಟರು ಇದಕ್ಕೂ ಮೊದಲು ಇಂತಹ ವಿಭಿನ್ನ ಹಾಗೂ ಆಕರ್ಷಕ ಬಟ್ಟೆ ತೊಟ್ಟಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು.

Last Updated : May 12, 2021, 4:33 PM IST

ABOUT THE AUTHOR

...view details