ವಾಷಿಂಗ್ಟನ್ (ಅಮೆರಿಕ) :ಪ್ರಿನ್ಸ್ ಹ್ಯಾರಿ ತಮ್ಮ ವೈಯಕ್ತಿಕ ಜೀವನದ ಹೋರಾಟಗಳಿಂದ ಕಲಿತ ಪಾಠವನ್ನು ಜನರ ಮುಂದಿಡಲು ಟಿವಿ ಕಾರ್ಯಕ್ರಮವೊಂದನ್ನು ಮಾಡಿದ್ದಾರೆ. ‘ದಿ ಮಿಯು ಕಾಂಟ್ ಸೀ’ ಎಪಿಸೋಡ್ನಲ್ಲಿ ತಮ್ಮ ಜೀವನದ ಸವಾಲುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಗುರುವಾರ ರಾತ್ರಿ ಆಪಲ್ ಟಿವಿ ಪ್ಲಸ್ನಲ್ಲಿ ಪ್ರಸಾರವಾದ ಡಾಕ್ಯುಸರೀಸ್ ದಿ ಮಿ ಯು ಕಾಂಟ್ ಸೀಯಲ್ಲಿ ತಮ್ಮ ಪ್ರೀತಿ ಪಾತ್ರರು ಹೇಗೆ ಕಷ್ಟ ಪಡುತ್ತಿರುತ್ತಾರೆ. ಆಗುವ ಅವಮಾನಗಳ ಬಗ್ಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯುತ್ತದೆ.
ಅನೇಕ ಜನರು ಮಾತನಾಡಲು, ಕೇಳಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಪ್ರತಿಯೊಂದು ಕಷ್ಟಕ್ಕೂ ಪರಿಹಾರ ಇರುತ್ತೆ ಎಂದು ಅವರಿಗೆ ಮನವರಿಕೆಯಾಗಿರುವುದಿಲ್ಲ, ಮತ್ತೊಬ್ಬರು ಮಾತನಾಡುವಾಗ ದಯವಿಟ್ಟು ಕೇಳಿಸಿಕೊಳ್ಳಿ, ಇದರಿಂದ ಅವರ ಮನಸ್ಸು ಹಗುರವಾಗುವುದು ಎಂದು ಹ್ಯಾರಿ ಅಭಿಪ್ರಾಯಪಟ್ಟಿದ್ದಾರೆ.