ವಾಷಿಂಗ್ಟನ್ ಡಿಸಿ (ಯುಎಸ್): ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಪಾವತಿಸಿದ ಕನಿಷ್ಠ ಆದಾಯ ತೆರಿಗೆ ಬಗೆಗಿನ ಸುದ್ದಿಯ ಬಗ್ಗೆ ಪ್ರಶ್ನಿಸಿದಾಗ ನಾನು ತೆರಿಗೆ ಪಾವತಿಸಲು ಬಯಸುವುದಿಲ್ಲ ಎಂದು ಹೇಳಿದರು.
ನಾನು ತೆರಿಗೆ ಪಾವತಿಸಲು ಬಯಸುವುದಿಲ್ಲ: ಟ್ರಂಪ್ - ಮೊದಲ ಅಧ್ಯಕ್ಷೀಯ ಚರ್ಚೆ
2016 ಮತ್ತು 2017 ರಲ್ಲಿ ಫೆಡರಲ್ ಆದಾಯ ತೆರಿಗೆಯಲ್ಲಿ $750 ಪಾವತಿಸಲಾಗಿದೆ. ಆದರೆ, ಈ ಹಿಂದಿನ 15 ವರ್ಷಗಳಲ್ಲಿ ಯಾವುದೇ ಆದಾಯ ತೆರಿಗೆಯನ್ನು ಪಾವತಿಸಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಟ್ರಂಪ್, ನಾನು ಮಿಲಿಯನ್ ಡಾಲರ್ ತೆರಿಗೆಯನ್ನು ಪಾವತಿಸಿದ್ದೇನೆ ಎಂದಿದ್ದಾರೆ.
ಮೊದಲ ಅಧ್ಯಕ್ಷೀಯ ಚರ್ಚೆಯ ಸಮಯದಲ್ಲಿ, ಮಾಡರೇಟರ್ ಕ್ರಿಸ್ ವ್ಯಾಲೇಸ್ ಅವರು ನ್ಯೂಯಾರ್ಕ್ ಟೈಮ್ಸ್ ವರದಿಯ ಬಗ್ಗೆ ಉಲ್ಲೇಖಿಸಿ 2016 ಮತ್ತು 2017 ರಲ್ಲಿ ಫೆಡರಲ್ ಆದಾಯ ತೆರಿಗೆಯಲ್ಲಿ $750 ಪಾವತಿಸಲಾಗಿದೆ. ಆದರೆ, ಈ ಹಿಂದಿನ 15 ವರ್ಷಗಳಲ್ಲಿ ಯಾವುದೇ ಆದಾಯ ತೆರಿಗೆಯನ್ನು ಪಾವತಿಸಿಲ್ಲ ಎಂದರು. ಈ ಬಗ್ಗೆ ನಕಾರ ವ್ಯಕ್ತಪಡಿಸಿದ ಟ್ರಂಪ್, ನಾನು ಮಿಲಿಯನ್ ಡಾಲರ್ ತೆರಿಗೆಯನ್ನು ಈಗಾಗಲೇ ಪಾವತಿಸಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದರು.
ಟ್ರಂಪ್ ಜಾರಿಗೆ ತಂದಿರುವ ತೆರಿಗೆ ಕಡಿತಗಳನ್ನು ರದ್ದುಗೊಳಿಸುವುದು ಹಾಗೂ ಯು.ಎಸ್ ಗೆ ಕಡಿಮೆ ಪಾವತಿಸುವ ಕಂಪನಿಗಳ ಮೇಲೆ ತೆರಿಗೆ ವಿಧಿಸುವ ಯೋಜನೆಗಳ ಬಗ್ಗೆ ಬಿಡನ್ ಮಾತನಾಡಿದರು. ಟ್ರಂಪ್ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು.