ಕರ್ನಾಟಕ

karnataka

ETV Bharat / international

ಚೀನಾ - ಅಮೆರಿಕ ಅಧ್ಯಕ್ಷರ ವರ್ಚುಯಲ್ ಸಭೆಗೆ ವೇದಿಕೆ ಸಿದ್ಧ.. ಭಾರತ ಗಡಿ ಸಮಸ್ಯೆ ಪ್ರಸ್ತಾಪ ಸಾಧ್ಯತೆ - White House news

ಹಲವು ಕಾಲದ ಚೀನಾ ಹಾಗೂ ಅಮೆರಿಕ ನಡುವಿನ ಶೀತಲ ಸಮರ ಪರಿಸ್ಥಿತಿಯ ನಡುವೆ ಉಭಯ ನಾಯಕರ ಭೇಟಿ ನಿಗದಿಯಾಗಿದೆ. ವರ್ಚುಯಲ್ ಮಾತುಕತೆಗೆ ವೇದಿಕೆ ಸಿದ್ಧವಾಗಿದ್ದು, ಕುತೂಹಲ ಮೂಡಿಸಿದೆ.

president-joe-biden-to-virtually-meet-chinese-president-xi-jinping
ಚೀನಾ-ಅಮೆರಿಕ ಅಧ್ಯಕ್ಷರ ವರ್ಚುವಲ್ ಸಭೆ

By

Published : Nov 13, 2021, 10:43 AM IST

Updated : Nov 14, 2021, 2:45 PM IST

ವಾಷಿಂಗ್ಟನ್ ಡಿಸಿ (ಅಮೆರಿಕ):ವಿಶ್ವದ ದೊಡ್ಡಣ್ಣ ಅಮೆರಿಕ ಹಾಗೂ ಚೀನಾ (America-China) ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆಯಲು ಉಭಯ ನಾಯಕರು ಸಿದ್ಧರಾಗಿದ್ದಾರೆ. ಕೆಲ ವರ್ಷದಿಂದಲೂ ಉಭಯ ರಾಷ್ಟ್ರಗಳ ನಡುವೆ ಮೇಲ್ನೋಟಕಷ್ಟೇ ಉತ್ತಮ ಸಂಬಂಧ ಇರುವಂತೆ ಕಂಡುಬಂದರೂ ವಾಸ್ತವಾಂಶ ಬೇರೆಯದ್ದೇ ಆಗಿತ್ತು.

ಈ ಬೆಳವಣಿಗೆಗಳ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡನ್ (America President Joe Biden) ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್​​ಪಿಂಗ್ (China President Xi Jinping) ನಡುವೆ ವರ್ಚುಯಲ್ ಸಭೆ ನಿಗದಿಯಾಗಿದೆ ಎಂದು ವೈಟ್ ಹೌಸ್ (White House) ತಿಳಿಸಿದೆ. ಸೋಮವಾರ (ನ.15ರಂದು) ಸಭೆ ನಿಗದಿಯಾಗಿದೆ ಎಂದು ತಿಳಿಸಲಾಗಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಈ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ (Press Secretary of White House) ಜೆನ್ ಪ್ಸಾಕಿ, ಭಾನುವಾರ ಉಭಯ ನಾಯಕರ ಸಭೆಗೆ ಸಮಯ ನಿಗದಿಯಾಗಿದೆ ಎಂದಿದ್ದಾರೆ.

ಈ ವೇಳೆ ಭಾರತ-ಚೀನಾ ಗಡಿ ಸಮಸ್ಯೆ (India-China Boarder Issue) ಕುರಿತು ಚರ್ಚೆಯಾಗಲಿದ್ಯಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತ ಈ ಮಾತುಕತೆಯು ಭದ್ರತೆ ಮತ್ತು ಗಡಿ ಕುರಿತಾಗಿರುತ್ತದೆ. ಈ ವಿಚಾರಗಳ ಬಗ್ಗೆಯೂ ನಮಗೆ ಕಾಳಜಿ ಇದೆ. ನಾವು ಒಟ್ಟಾಗಿಯೇ ಕಾರ್ಯ ಮಾಡಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ:COP-26 Summit: ನಿಗದಿಗಿಂತ ಹೆಚ್ಚು ಸಮಯ ಚರ್ಚೆಯಲ್ಲಿ ಮುಳುಗಿದ ಸದಸ್ಯರು

Last Updated : Nov 14, 2021, 2:45 PM IST

ABOUT THE AUTHOR

...view details