ವಾಷಿಂಗ್ಟನ್:ಅಮೆರಿಕ ಹಾಗೂ ಭಾರತದ ಕಾರ್ಯತಂತ್ರದ ಸಹಭಾಗಿತ್ವವನ್ನು ಹೆಚ್ಚಿಸುವಲ್ಲಿ ಸಮರ್ಥವಾಗಿ ನಾಯಕತ್ವ ನಿಭಾಯಿಸಿದ ಪ್ರಧಾನಿ ನರೇಂದ್ರ ಮೋದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಷ್ಠಿತ 'ಲೀಜನ್ ಆಫ್ ಮೆರಿಟ್' ಪದಕವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಅಮೆರಿಕದ ಭಾರತೀಯ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಅವರು ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಸಿ ಒ'ಬ್ರಿಯೆನ್ ಮೂಲಕ ಪ್ರಧಾನಿ ಮೋದಿ ಪರವಾಗಿ ಪದಕವನ್ನು ಶ್ವೇತಭವನದಲ್ಲಿ ಸ್ವೀಕರಿಸಿದರು.
ಲೀಜನ್ ಆಫ್ ಮೆರಿಟ್ (LOM), ಇದು ಅಮೆರಿಕದ ಸಶಸ್ತ್ರ ಪಡೆಗಳ ಮಿಲಿಟರಿ ಪ್ರಶಸ್ತಿಯಾಗಿದ್ದು, ಅತ್ಯುತ್ತಮ ಸೇವೆ ಮತ್ತು ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ. ರಾಷ್ಟ್ರದ ಪ್ರಧಾನಿ ಅಥವಾ ಅಧ್ಯಕ್ಷ ಅಥವಾ ಸರ್ಕಾರಕ್ಕೆ ಮಾತ್ರ ಇದನ್ನು ನೀಡಲಾಗುತ್ತದೆ.
ಇದನ್ನೂ ಓದಿ: ಸಾರ್ವಜನಿಕವಾಗಿ ಮೊದಲ ಕೊರೊನಾ ಲಸಿಕೆಯ ಡೋಸ್ ಪಡೆದ ಜೋ ಬೈಡನ್
ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರಿಗೆ ಕೂಡ ಟ್ರಂಪ್ ಲೀಜನ್ ಆಫ್ ಮೆರಿಟ್ ಅನ್ನು ನೀಡಿದ್ದು, ಪ್ರಶಸ್ತಿಗಳನ್ನು ವಾಷಿಂಗ್ಟನ್ ಡಿಸಿಯಲ್ಲಿ ಆಯಾ ದೇಶದ ರಾಯಭಾರಿಗಳು ಸ್ವೀಕರಿಸಿದ್ದಾರೆ ಎಂದು ಒ'ಬ್ರಿಯೆನ್ ತಿಳಿಸಿದ್ದಾರೆ.