ಕರ್ನಾಟಕ

karnataka

ETV Bharat / international

6.8 ತೀವ್ರತೆಯ ಪ್ರಬಲ ಭೂಕಂಪ: ಫ್ಲೋರಿಡಾದ ಪನಾಮ, ಕೋಸ್ಟರಿಕಾ ಗಡಗಡ - ಪನಾಮ ಭೂಕಂಪ

ಯುಎಸ್​ನ ಫ್ಲೋರಿಡಾದ ನಗರಗಳಾದ ಪನಾಮ ಮತ್ತು ಕೋಸ್ಟರಿಕಾದಲ್ಲಿ ಭೂಕಂಪ ಸಂಭವಿಸಿದ್ದು, ಯಾವುದೇ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

Powerful magnitude-6.8 quake shakes Panama and Costa Rica
ಪನಾಮ, ಕೋಸ್ಟರಿಕಾ ಭೂಕಂಪ

By

Published : Jul 22, 2021, 6:39 AM IST

Updated : Jul 22, 2021, 6:54 AM IST

ಪನಾಮ ಸಿಟಿ( ಅಮೆರಿಕ) : ಫ್ಲೋರಿಡಾದ ಪನಾಮ ಸಿಟಿ ಮತ್ತು ಕೋಸ್ಟರಿಕಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು ಜನ ಬೆಚ್ಚಿ ಬಿದ್ದಿದ್ದಾರೆ. ರಿಕ್ಟರ್ ಮಾಪಕದಲ್ಲಿ ಭೂಕಂಪನ ತೀವ್ರತೆ 6.8 ದಾಖಲಾಗಿದೆ. ಜನ ನಿಬಿಡ ಪ್ರದೇಶದದಿಂದ ದೂರದಲ್ಲಿ ಭೂಕಂಪ ಸಂಭವಿಸಿದ ಕಾರಣ ಯಾವುದೇ ಸಾವು, ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಜುಲೈ 21ರ ಬುಧವಾರ ಮಧ್ಯಾಹ್ನ ಭೂಕಂಪ ಸಂಭವಿಸಿದೆ. ಪನಾಮಾ ಮತ್ತು ಕೋಸ್ಟರಿಕಾದ ಗಡಿ ಫೆಸಿಫಿಕ್ ಕರಾವಳಿಯ ಪಂಟಾ ಡಿ ಬುರಿಕಾದಿಂದ ದಕ್ಷಿಣಕ್ಕೆ 30 ಮೈಲಿ ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ಗುರುತಿಸಲಾಗಿದೆ. ಸುಮಾರು ಆರು ಮೈಲಿ ಭೂಮಿಯ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ಯುಎಸ್​ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.

ಓದಿ : ಪಾಕಿಸ್ತಾನದ​​ ಮಾಜಿ ರಾಜತಾಂತ್ರಿಕ ಅಧಿಕಾರಿ ಮಗಳ ಗುಂಡಿಕ್ಕಿ ಕೊಲೆ

ಪನಾಮದ ರಾಜಧಾನಿಯಲ್ಲಿ ಕಂಪನ ಆಗಿಲ್ಲ. ಆದರೆ ಪಶ್ಚಿಮ ಪನಾಮ ಮತ್ತು ಕೋಸ್ಟರಿಕಾದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ. ಯಾವುದೇ ಹಾನಿ ಸಂಭವಿಸಿರುವುದರ ಬಗ್ಗೆ ವರದಿಯಾಗಿಲ್ಲ. ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

Last Updated : Jul 22, 2021, 6:54 AM IST

ABOUT THE AUTHOR

...view details