ಕರ್ನಾಟಕ

karnataka

ETV Bharat / international

ಭಾರಿ ಹಿಮಪಾತಕ್ಕೆ ಹೆಪ್ಪುಗಟ್ಟಿದ ಟೆಕ್ಸಸ್​: 120 ಅಪಘಾತ, ವಿದ್ಯುತ್​ ತುರ್ತು ಪರಿಸ್ಥಿತಿ ಘೋಷಣೆ! - ಅಮೆರಿಕದಲ್ಲಿ ಹಿಮಪಾತ

ಅಮೆರಿಕದಲ್ಲಿ ತೀವ್ರ ಚಳಿ ಹಾಗೂ ಹಿಮಪಾತದಿಂದ ದಕ್ಷಿಣದ ಹಲವು ರಾಜ್ಯಗಳು ತತ್ತರಿಸಿವೆ. ರಸ್ತೆಯಲ್ಲಿ ಹಿಮ ಹೆಪ್ಪುಗಟ್ಟಿದ್ದರಿಂದ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಮತ್ತೊಂದೆಡೆ ಚಳಿಯಿಂದ ರಕ್ಷಣೆ ಪಡೆಯಲು ಜನರು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಸುತ್ತಿದ್ದಾರೆ. ಇದರಿಂದ ವಿದ್ಯುತ್ ಅಭಾವ ಸೃಷ್ಟಿಯಾಗಿದ್ದು, ಪೂರೈಕೆಯನ್ನು ಕಡಿತಗೊಳಿಸಲಾಗುತ್ತಿದೆ. ಅಧ್ಯಕ್ಷ ಜೋ ಬೈಡನ್​ ತುರ್ತು ವಿದ್ಯುತ್ ಪರಿಸ್ಥಿತಿ ಘೋಷಿಸಿದ್ದಾರೆ.

ice blanket
ice blanket

By

Published : Feb 16, 2021, 7:58 AM IST

ಡಲ್ಲಾಸ್: ಚಳಿಗಾಲದ ತೀವ್ರ ಉಷ್ಣಾಂಶ ಕುಸಿತದ ಜೊತೆಗೆ ಭಾರಿ ಹಿಮಪಾತದಿಂದಾಗಿ ಅಮೆರಿಕವು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದೆ.

ಟೆಕ್ಸಸ್ ರಾಜ್ಯದಲ್ಲಿ ಮೈನಸ್ 5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಅಲ್ಲಿನ ರಸ್ತೆಗಳಲ್ಲಿ ಹಿಮ ಸಂಗ್ರಹವಾಗುತ್ತಿರುವುದರಿಂದ ವಾಹನಗಳು ಅಪಘಾತಕ್ಕೀಡಾಗುತ್ತಿವೆ.

ಹೂಸ್ಟನ್ ನಗರ ಮತ್ತು ಸುತ್ತಮುತ್ತ ಸುಮಾರು 120 ರಸ್ತೆ ಅಪಘಾತಗಳು ಸಂಭವಿಸಿದ್ದು, 10 ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದಿದೆ. ವಿಪರೀತ ಶೀತದಿಂದಾಗಿ ವಿದ್ಯುತ್ ಬಳಕೆಯಲ್ಲಿ ಹೆಚ್ಚಿನ ಹೆಚ್ಚಳದಿಂದಾಗಿ ವಿದ್ಯುತ್ ಕೊರತೆ ಉಂಟಾಗಿದೆ. ಟೆಕ್ಸಸ್‌ನ ವಿದ್ಯುತ್ ವಿಶ್ವಾಸಾರ್ಹತೆ ಮಂಡಳಿಯು (ಇಆರ್‌ಸಿವಿಒಟಿ) ವಿದ್ಯುತ್ ಕಡಿತಗೊಳಿಸಿದ್ದರಿಂದ ಸಾವಿರಾರು ಜನರು ಬಾಧಿತರಾಗಿದ್ದಾರೆ. ಇನ್ನೂ ಕೆಲವು ದಿನಗಳವರೆಗೆ ವಿದ್ಯುತ್ ಕಡಿತ ಆಗಲಿದ್ದು, ಜನರು ಇದಕ್ಕಾಗಿ ಸಿದ್ಧರಾಗಿರಬೇಕು ಎಂದು ಅಧಿಕಾರಿಗಳು ಮುನ್ಸೂಚನೆ ನೀಡಿದರು.

ಇದನ್ನೂ ಓದಿ: 46 ಪಿಕೆಕೆ ಶಂಕಿತ ಸದಸ್ಯರನ್ನು ಬಂಧಿಸಲು ಟರ್ಕಿ ಆದೇಶ

ಹವಾಮಾನ ಇಲಾಖೆಯು ಮಂಗಳವಾರ ರಾಜ್ಯದ ದಕ್ಷಿಣ ಭಾಗಗಳಲ್ಲಿ 30 ಸೆಂ.ಮೀ ಹಿಮದ ಮುನ್ಸೂಚನೆ ನೀಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾನುವಾರ ರಾತ್ರಿ ಟೆಕ್ಸಸ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು. ರಾಜ್ಯದಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಾಚರಣೆಗಳಲ್ಲಿ ಸಹಕರಿಸುವಂತೆ ಕೇಂದ್ರ ವಿಪತ್ತು ನಿರ್ವಹಣಾ ಸಂಸ್ಥೆಗಳಿಗೆ ನಿರ್ದೇಶನ ನೀಡಿದರು. ಮತ್ತೊಂದೆಡೆ ಹಿಮಪಾತವು ವಿಮಾನ ಪ್ರಯಾಣಕ್ಕೆ ತೀವ್ರ ಅಡ್ಡಿ ಉಂಟುಮಾಡುತ್ತಿದೆ.

ABOUT THE AUTHOR

...view details