ಕರ್ನಾಟಕ

karnataka

ETV Bharat / international

ಇಲಿಗಳಲ್ಲೂ ಇದೆಯಂತೆ ಕೊರೊನಾ ಮಹಾಮಾರಿಗೆ ಬೇಕಾದ ಸಂಭಾವ್ಯ ಲಸಿಕೆ - Potential vaccine for COVID 19 generates immunity in mice

ಇಬಿಯೊಮೆಡಿಸಿನ್ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ವಾಷಿಂಗ್ಟನ್​ನ ಕೆಲ ಸಂಶೋಧಕರು ಇಲಿಗಳಲ್ಲಿ COVID-19 ಸೋಂಕಿತರ​ ಚಿಕಿತ್ಸೆಗೆ ಬೇಕಾದ ಸಂಭಾವ್ಯ ಲಸಿಕೆಯನ್ನು ಪರೀಕ್ಷಿಸಿದ್ದಾರೆ. ಇದರಲ್ಲಿರುವ ರೋಗ ನಿರೋಧಕ ಅಂಶವು ಕೊರೊನಾ ವೈರಸ್ ಅನ್ನು ತಟಸ್ಥಗೊಳಿಸಲು ಸಾಕಾಗುತ್ತದೆ ಎಂದು ಹೇಳಲಾಗಿದೆ.

vaccine
ಕೊರೊನಾ ಲಸಿಕೆ

By

Published : Apr 3, 2020, 8:48 PM IST

ವಾಷಿಂಗ್ಟನ್​: ಕೊರೊನಾವನ್ನು ಹೋಗಲಾಡಿಸಲು ಔಷಧ ಹುಡುಕುವ ಯತ್ನದಲ್ಲಿ ಹಲವು ಸಂಶೋಧಕರು ಹಾಗೂ ವೈದ್ಯರುಗಳಿದ್ದು, ಸದ್ಯ ಈ ಹೊಸ ಸಂಶೋಧನಾ ವರದಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಇಬಿಯೊಮೆಡಿಸಿನ್ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ಇಲ್ಲಿನ ಸಂಶೋಧಕರು ಇಲಿಗಳಲ್ಲಿ COVID-19 ಗೆ ಸಂಭಾವ್ಯ ಲಸಿಕೆಯನ್ನು ಪರೀಕ್ಷಿಸಿದ್ದಾರೆ. ಇದರಲ್ಲಿರುವ ರೋಗ ನಿರೋಧಕ ಅಂಶವು ಕೊರೊನಾ ವೈರಸ್ ಅನ್ನು ತಟಸ್ಥಗೊಳಿಸಲು ಸಾಕಾಗುತ್ತದೆ ಎಂದು ಹೇಳಲಾಗಿದೆ.

2003ರ SARS-CoV ಮತ್ತು 2014 ರಲ್ಲಿ MERS-CoV ವೈರಸ್​ ಬಗ್ಗೆ ನಮಗೆ ಮೊದಲೇ ಅನುಭವವಿದೆ. SARS-CoV-2 ಗೆ ನಿಕಟ ಸಂಬಂಧ ಹೊಂದಿರುವ ಈ ಎರಡು ವೈರಸ್‌ಗಳು, ವೈರಸ್​ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸ್ಪೈಕ್ ಪ್ರೋಟೀನ್ ಎಂದು ಕರೆಯಲ್ಪಡುವ ನಿರ್ದಿಷ್ಟ ಪ್ರೋಟೀನ್ ಮುಖ್ಯ ಎಂದು ನಮಗೆ ಕಲಿಸುತ್ತದೆ ಎಂದು ಯುಎಸ್​ನ ಪಿಟ್ಸ್​ಬರ್ಗ್ ವಿಶ್ವವಿದ್ಯಾಲಯದ ಸಹ-ಹಿರಿಯ ಲೇಖಕಿ ಆಂಡ್ರಿಯಾ ಗ್ಯಾಂಬೊಟ್ಟೊ ಹೇಳಿದ್ದಾರೆ.

ಈ ಹೊಸ ವೈರಸ್ ವಿರುದ್ಧ ಎಲ್ಲಿ ಹೋರಾಡಬೇಕೆಂದು ನಮಗೆ ತಿಳಿದಿತ್ತು. ಪ್ರಸ್ತುತ ಅಧ್ಯಯನದಲ್ಲಿ ವಿವರಿಸಿದ ಈ ಲಸಿಕೆ ಹೆಚ್ಚು ಬಳಸುವ ವಿಧಾನವನ್ನು ಅನುಸರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಲ್ಯಾಬ್-ನಿರ್ಮಿತ ಪ್ರೋಟೀನ್‌ಗಳನ್ನು ಇದರಲ್ಲಿ ಬಳಸಲಾಗಿದೆ ಎಂದು ಗ್ಯಾಂಬೊಟ್ಟೊ ವಿವರಿಸಿದ್ದಾರೆ.

ಈ ವಿಧಾನದಲ್ಲಿ 400 ಸಣ್ಣ ಸೂಜಿಗಳ ಮೂಲಕ ಸ್ಪೈಕ್ ಪ್ರೋಟೀನ್ ತುಣುಕುಗಳನ್ನು ಚರ್ಮಕ್ಕೆ ತಲುಪಿಸುತ್ತದೆ. ಅಲ್ಲಿ ರೋಗನಿರೋಧಕ ಕ್ರಿಯೆಯು ಪ್ರಬಲವಾಗಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ABOUT THE AUTHOR

...view details