ಕರ್ನಾಟಕ

karnataka

ETV Bharat / international

ಭಾರತದ ಮೇಲೆ ಯುಎಸ್ ನಿರ್ಬಂಧ?: ಸೂಚನೆ ನೀಡಿದ ಅಮೆರಿಕದ ಉನ್ನತ ರಾಜತಾಂತ್ರಿಕರು

ಭಾರತ ರಷ್ಯಾದೊಂದಿಗೆ ಉತ್ತಮ ಭಾಂದವ್ಯ ಬೆಳಸಿ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸಲು ಸಿದ್ದತೆ ನಡೆಸಿದ್ದು, ಭಾರತದ ಮೇಲೆ ಯುಎಸ್ ನಿರ್ಬಂಧ ಹೇರುವ ಸಾಧ್ಯತೆಗಳಿವೆ ಎಂದು ಅಮೆರಿಕದ ಉನ್ನತ ರಾಜತಾಂತ್ರಿಕರು ತಿಳಿಸಿದ್ದಾರೆ.

US sanctions
ಭಾರತದ ಮೇಲೆ ಯುಎಸ್ ನಿರ್ಬಂಧ

By

Published : May 21, 2020, 8:13 PM IST

ವಾಷಿಂಗ್ಟನ್(ಅಮೆರಿಕ): ರಷ್ಯಾದಿಂದ ಶತಕೋಟಿ ಡಾಲರ್ ಮೌಲ್ಯದ ಎಸ್ - 400 ಕ್ಷಿಪಣಿಯನ್ನು ಖರೀದಿಸಲು ಭಾರತದ ಮೇಲೆ ಯುಎಸ್ ನಿರ್ಬಂಧ ಹೇರುವ ಸಾಧ್ಯತೆಗಳಿವೆ ಎಂದು ಅಮೆರಿಕದ ಉನ್ನತ ರಾಜತಾಂತ್ರಿಕರು ಹೇಳಿದ್ದಾರೆ, ಭಾರತವು ತಂತ್ರಜ್ಞಾನ ಮತ್ತು ಕಾರ್ಯತಂತ್ರದ ಬದ್ಧತೆಯನ್ನು ಈ ವೇಳೆ ಪ್ರಸ್ತುತಪಡಿಸುವ ಅವಶ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ಅಕ್ಟೋಬರ್ 2018 ರಲ್ಲಿ, ಎಸ್ - 400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳ ಐದು ಘಟಕಗಳನ್ನು ಖರೀದಿಸಲು ಭಾರತ ರಷ್ಯಾದೊಂದಿಗೆ 5 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ, ಈ ಒಪ್ಪಂದಕ್ಕೆ ಅಮೆರಿಕ ನಿರ್ಬಂಧ ಹೇರುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ.

ಕಳೆದ ವರ್ಷ, ಕ್ಷಿಪಣಿ ವ್ಯವಸ್ಥೆಗಳಿಗಾಗಿ ಭಾರತವು ರಷ್ಯಾಕ್ಕೆ ಸುಮಾರು 800 ಮಿಲಿಯನ್ ಯುಎಸ್ ಡಾಲರ್​​ಗಳನ್ನು ಪಾವತಿಸಿತ್ತು. ಎಸ್- 400 ಅನ್ನು ರಷ್ಯಾದ ಅತ್ಯಾಧುನಿಕ ದೀರ್ಘ-ಶ್ರೇಣಿಯ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಎಂದು ಕರೆಯಲಾಗಿದ್ದರಿಂದ, ಭಾರತ ಇದನ್ನು ಖರೀದಿಸಲು ಒಲವು ತೋರಿತ್ತು.

ಅಮೆರಿಕದ ಸಿಎಎಟಿಎಸ್ಎ ನೀತಿ ಅಂದರೆ, ದೇಶದ ನಿರ್ಬಂಧಗಳ ಕಾಯ್ದೆಯ ಮೂಲಕ ಅಮೆರಿಕದ ವಿರೋಧಿಗಳನ್ನು ಎದುರಿಸುವುದು, ಅಮೆರಿಕದ ಆದ್ಯತೆಯಾಗಿ ಉಳಿದಿದೆ. ಕಠಿಣವಾದ ಸಿಎಎಟಿಎಸ್ಎ ಅಡಿಯಲ್ಲಿಯೇ ಅಮೆರಿಕ ರಷ್ಯಾದ ಮೇಲೆ ಈ ಹಿಂದೆಯೂ ನಿರ್ಬಂಧಗಳನ್ನು ವಿಧಿಸಿತ್ತು. ಅದಲ್ಲದೇ ರಷ್ಯಾದಿಂದ ರಕ್ಷಣಾ ಯಂತ್ರಗಳನ್ನು ಖರೀದಿಸುವ ದೇಶಗಳ ವಿರುದ್ಧ ದಂಡನಾತ್ಮಕ ಕ್ರಮಕ್ಕೂ ಈ ನೀತಿ ಅನ್ವಯವಾಗುತ್ತದೆ.

ನಮ್ಮ ದೇಶದ ರಕ್ಷಣಾ ವಿಭಾಗದಲ್ಲಿ ನಾವು ದಾಪುಗಾಲು ಇಟ್ಟಿದ್ದೇವೆ. ಭಾರತಕ್ಕೆ ಅಮೆರಿಕ ಅಧ್ಯಕ್ಷರ ಭೇಟಿಯ ನಂತರ ಎರಡು ದೇಶದ ದ್ವಿಪಕ್ಷೀಯ ಮೊತ್ತವು ಈಗ 20 ಬಿಲಿಯನ್ ಗಡಿ ದಾಟಿದೆ. ಭಾರತಕ್ಕೆ ನಮ್ಮ ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನಗಳಾದ ಶಸ್ತ್ರಸಜ್ಜಿತ ಮಾನವರಹಿತ ವೈಮಾನಿಕ ಯುದ್ಧ ಸಲಕರಣೆಗಳನ್ನು ಒದಗಿಸುವುದಾಗಿ ಅಮೆರಿಕದ ರಾಜತಾಂತ್ರಿಕ ಮತ್ತು ಮಾಜಿ ರಾಯಭಾರಿಯಾದ ಆಲಿಸ್ ವೆಲ್ಸ್ ಹೇಳಿದ್ದಾರೆ

ವಾಷಿಂಗ್ಟನ್ ಡಿಸಿಯನ್ನು ರಕ್ಷಿಸುವಂತಹ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಶೀಘ್ರದಲ್ಲಿಯೇ ಭಾರತದ ನವದೆಹಲಿಯನ್ನು ರಕ್ಷಿಸಲಿದೆ ಎಂದು ಯೋಚಿಸಲಾಗಿದೆ ಎಂದು ಇದೇ ವೇಳೆ, ವೆಲ್ಸ್​​ ಉಲ್ಲೇಖಿಸಿದ್ದಾರೆ.

ಅಮೆರಿಕವು, ಭಾರತ ದೇಶವನ್ನು ಒಂದು ಜಾಗತಿಕ ಶಕ್ತಿಯಾಗಿ ನೋಡುತ್ತಿದೆ ಮತ್ತು ದೇಶದ ಜಾಗತಿಕ ಹಿತಾಸಕ್ತಿಗಳನ್ನು ಅರ್ಥೈಸಿಕೊಳ್ಳುವತ್ತ ಹೆಜ್ಜೆ ಇಡುತ್ತಿದೆ. ಭಾರತವನ್ನು ರಾಜತಾಂತ್ರಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಮಿಲಿಟರಿ ವಿಭಾಗದಲ್ಲಿ ರಕ್ಷಿಸಲು ಅಮೆರಿಕ ಪ್ರಯತ್ನಿಸುತ್ತದೆ ಎಂದು ವೆಲ್ಸ್ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details