ವಾಷಿಂಗ್ಟನ್:ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಆರ್. ಪೊಂಪಿಯೊ ಅಕ್ಟೋಬರ್ 25ರಿಂದ 30ರವರೆಗೆ ದೆಹಲಿ, ಕೊಲಂಬೊ, ಮಲಯ್ ಮತ್ತು ಜಕಾರ್ತಾ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ಇಲಾಖೆ ದೃಢಪಡಿಸಿದೆ.
ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ. ಎಸ್ಪರ್ ಅಕ್ಟೋಬರ್ 27ರಂದು ದೆಹಲಿಗೆಆಗಮಿಸಲಿದ್ದು, ಅಂದುಭಾರತೀಯ ನಿಯೋಗದೊಂದಿಗೆ ಅಮೆರಿಕ-ಇಂಡಿಯಾ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸುವ ಬಗ್ಗೆ ಚರ್ಚಿಸಲಿದ್ದಾರೆ. ಉಭಯ ರಾಷ್ಟ್ರಗಳ ಸ್ಥಿರತೆ ಮತ್ತು ಸಮೃದ್ಧಿ ಉತ್ತೇಜನಯ ಸಹಕಾರ ವಿಸ್ತರಣೆ ಹಾಗೂ ಇಂಡೋ-ಪೆಸಿಫಿಕ್ ಮತ್ತು ವಿಶ್ವವನ್ನು ಮುನ್ನಡೆಸಲು ಮೂರನೇ ಯುಎಸ್-ಇಂಡಿಯಾ 2+2 ಸಚಿವರ ಮಟ್ಟದ ಸಂಭಾಷಣೆ ನಡೆಯಲಿದೆ ಎಂದು ಯುಎಸ್ ವಿದೇಶಾಂಗ ವಕ್ತಾರ ಮೋರ್ಗನ್ ಒರ್ಟಾಗಸ್ ಹೇಳಿದ್ದಾರೆ.