ವಾಷಿಂಗ್ಟನ್:ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಜರ್ಮನಿಯ ವಿದೇಶಾಂಗ ಸಚಿವ ಹೈಕೊ ಮಾಸ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಚೀನಾವನ್ನು ಎದುರಿಸುವಲ್ಲಿ ಯುಎಸ್ - ಇಯು ಸಹಕಾರ ಹಾಗೂ ಇತರ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು.
ಚೀನಾ ಮಣಿಸಲು ಅಮೆರಿಕ ಕಾರ್ಯತಂತ್ರ: ಜರ್ಮನಿಯ ಜತೆ ಮಹತ್ವದ ಮಾತುಕತೆ - ಜರ್ಮನಿಯ ವಿದೇಶಾಂಗ ಸಚಿವ ಹೈಕೊ ಮಾಸ್
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹಾಗೂ ಜರ್ಮನಿಯ ವಿದೇಶಾಂಗ ಸಚಿವ ಹೈಕೊ ಮಾಸ್ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.
"ಯುರೋಪಿಯನ್ ಯೂನಿಯನ್ ಕೌನ್ಸಿಲ್ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ಕುರಿತು ಜರ್ಮನಿಯ ಆದ್ಯತೆಗಳ ಬಗ್ಗೆ ಚರ್ಚಿಸಲು ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಆರ್ ಪೊಂಪಿಯೊ ಜರ್ಮನ್ ವಿದೇಶಾಂಗ ಸಚಿವ ಹೆಕೊ ಮಾಸ್ ಅವರೊಂದಿಗೆ ಮಾತುಕತೆ ನಡೆಸಿದರು ಎಂದು ರಾಜ್ಯ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
"ಕಾರ್ಯದರ್ಶಿ ಪೊಂಪಿಯೊ ಮತ್ತು ವಿದೇಶಾಂಗ ಸಚಿವ ಮಾಸ್ ಅವರು ಕೋವಿಡ್-19 ಸಾಂಕ್ರಾಮಿಕ, ಚೀನಾವನ್ನು ಎದುರಿಸುವಲ್ಲಿ ಯುಎಸ್-ಇಯು ಸಹಕಾರ, ಆರ್ಥಿಕ ಚೇತರಿಕೆಯ ಹಾದಿ, ಲಿಬಿಯಾದ ರಾಜಕೀಯ ಸಂವಾದದ ಪ್ರಗತಿಗೆ ಶಾಶ್ವತವಾದ ನಿಲುಗಡೆ ಕುರಿತು ಚರ್ಚೆ ನಡೆಸಲಾಗಿದೆ" ಎಂದು ಅಮೆರಿಕ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.