ವಾಷಿಂಗ್ಟನ್: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಜುಲೈ 21 ಮತ್ತು 22ರಂದು ಎರಡು ದಿನಗಳ ಕಾಲ 'ವರ್ಚುವಲ್ ಇಂಡಿಯಾ ಐಡಿಯಾ ಸಮಾವೇಶ' ನಡೆಯಲಿದೆ.
ಭಾರತ-ಅಮೆರಿಕ ಕೊರೊನಾ ಸ್ಥಿತಿಗತಿ ಕುರಿತ ವರ್ಚುವಲ್ ಸಮಾವೇಶ - ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್
ಉಭಯ ರಾಷ್ಟ್ರಗಳಲ್ಲಿನ ಕೋವಿಡ್ ಸ್ಥಿತಿಗತಿ ಹಾಗೂ ಚೀನಾದ ಆಕ್ರಮಣಕಾರಿ ನೀತಿಗಳ ಕುರಿತು ಭಾರತ ಹಾಗೂ ಅಮೆರಿಕ ಜುಲೈ 21 ಮತ್ತು 22ರಂದು ವರ್ಚುವಲ್ ಸಮಾವೇಶ ನಡೆಸಲಿವೆ.
ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ (USIBC) ಆಯೋಜಿಸುವ ಈ ವರ್ಚುವಲ್ ಸಮಾವೇಶದಲ್ಲಿ ಉಭಯ ರಾಷ್ಟ್ರಗಳಲ್ಲಿನ ಕೋವಿಡ್ ಸ್ಥಿತಿಗತಿ ಹಾಗೂ ಚೀನಾದ ಆಕ್ರಮಣಕಾರಿ ನೀತಿಗಳ ಕುರಿತು ಚರ್ಚೆ ನಡೆಯಲಿದೆ. ''ಉತ್ತಮ ಭವಿಷ್ಯದ ನಿರ್ಮಾಣ'' (building a better future) ಈ ಬಾರಿಯ ಸಮಾವೇಶದ ವಿಷಯವಾಗಿದೆ ಎಂದು ಯುಎಸ್ಐಬಿಸಿ ಅಧ್ಯಕ್ಷೆ ನಿಶಾ ದೇಸಾಯಿ ಬಿಸ್ವಾಲ್ ತಿಳಿಸಿದ್ದಾರೆ.
ಭಾರತದ ಮತ್ತು ಅಮೆರಿಕ ಹಾಗೂ ಇವುಗಳ ಕೈಗಾರಿಕೆಗಳು ಜೊತೆಯಾಗಿ ಕೆಲಸ ಮಾಡುವ ಮೂಲಕ ಮಾತ್ರ ಉಭಯ ರಾಷ್ಟ್ರಗಳ ಹಾಗೂ ಜನರ ಉತ್ತಮ ಭವಿಷ್ಯ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆದರೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ನಿಶಾ ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ.