ಸಿಡ್ನಿ: ಅಮೆರಿಕ ಪೊಲೀಸರು ನೀಡಿದ ಸುಳಿವಿನ ಮೂಲಕ, ದೊಡ್ಡ ಮಟ್ಟದ ಮಕ್ಕಳ ದೌರ್ಜನ್ಯ ಜಾಲವನ್ನು ಬೇಧಿಸುವಲ್ಲಿ ಆಸ್ಟ್ರೇಲಿಯಾ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಜಾಲವು, ಯುಎಸ್, ಕೆನಡಾ, ಏಷ್ಯಾ, ಯುರೋಪ್ ಮತ್ತು ನ್ಯೂಜಿಲೆಂಡ್ಗಳಲ್ಲಿ ಹಬ್ಬಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಅದಕ್ಕೆ ಅಗತ್ಯವಿರುವ ವಸ್ತುಗಳ ಉತ್ಪಾದನೆ ಸೇರಿದಂತೆ ಒಟ್ಟು 828 ಪ್ರಕರಣಗಳು ಆಸ್ಟ್ರೇಲಿಯಾದ ನ್ಯೂ ಸೌತ್ ವೇಟ್ಸ್, ಕ್ವೀನ್ಸ್‌ಲ್ಯಾಂಡ್ ಮತ್ತು ವೆಸ್ಟರ್ನ್ ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ದಾಖಲಾಗಿದ್ದವು. ಈ ಸಂಬಂಧ ಚೈಲ್ಡ್ ಕೇರ್ ಕೆಲಸಗಾರರು ಮತ್ತು ಮಕ್ಕಳ ಪ್ಲೇ ಕೋಚರ್ಗಳು ಸೇರಿ ಒಟ್ಟು 16 ಜನರನ್ನು ಬಂಧಿಸಲಾಗಿದೆ ಎಂದು ಆಸ್ಟ್ರೇಲಿಯಾದ ಫೆಡರಲ್ ಪೊಲೀಸ್ ಸಹಾಯಕ ಆಯುಕ್ತ ಜಸ್ಟಿನ್ ಗೌಫ್ ಹೇಳಿದ್ದಾರೆ.
ದೌರ್ಜನ್ಯಕ್ಕೊಳಗಾದ 46 ಮಕ್ಕಳನ್ನು ಆಸ್ಟ್ರೇಲಿಯಾ ಪೊಲೀಸರು ಪತ್ತೆ ಹಚ್ಚಿದ್ದಾರೆ, ಈ ಪೈಕಿ ಅತೀ ಕಿರಿಯ ವಯಸ್ಸಿನ, ಅಂದರೆ 16 ತಿಂಗಳ ಮಗು ಕೂಡ ಒಳಗೊಂಡಿದೆ. ಒಟ್ಟು ಪ್ರಕರಣಗಳ ಪೈಕಿ 18 ಯುಎಸ್ಗೆ ಸಂಬಂಧಿಸಿದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಯುಎಸ್ನಲ್ಲಿ ಮೂವರನ್ನು ಬಂಧಿಸಲಾಗಿದೆ. ಇನ್ನುಳಿದ 128 ಪ್ರಕರಣಗಳು ಕೆನಡಾ, ಏಷ್ಯಾ, ಯುರೋಪ್ ಮತ್ತು ನ್ಯೂಝಿಲ್ಯಾಂಡ್ಗೆ ತನಿಖೆ ನಡೆಸಲು ತಿಳಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ತಿಳಿಸಿಲ್ಲ.
ಯು.ಎಸ್. ನ್ಯಾಷನಲ್ ಸೆಂಟರ್ ಫಾರ್ ಮಿಸ್ಸಿಂಗ್ ಆ್ಯಂಡ್ ಎಕ್ಸ್‌ಪ್ಲೋಯಿಟೆಡ್ ಚಿಲ್ಡ್ರನ್ ಮತ್ತು ಸರ್ಕಾರಿ ಅನುದಾನಿತ ಎನ್ಜಿಒ ಜೊತೆಯಾಗಿ, ನ್ಯೂ ಸೌತ್ ವೇಲ್ಸ್‌ನ ವ್ಯಕ್ತಿಯೊಬ್ಬರು ಮಕ್ಕಳ ಲೈಂಗಿಕ ದೌರ್ಜನ್ಯ ವಸ್ತುಗಳನ್ನು ಸರಬರಾಜು ಮಾಡುತಿದ್ದಾರೆ ಎಂದು ಆಸ್ಟ್ರೇಲಿಯಾ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಸಹಾಯಕ ಆಯುಕ್ತ ಗೌಫ್ ತಿಳಿಸಿದ್ದಾರೆ.
ಸಿಡ್ನಿಯ ಉತ್ತರದ ಪಟ್ಟಣವಾದ ವ್ಯೋಂಗ್‌ನಲ್ಲಿ 30 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಕಂಪ್ಯೂಟರ್ ಮತ್ತು ಸಾಮಾಜಿ ಜಾಲತಾಣಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ, ಈತನು ಈ ಜಾಲದ ಭಾಗವಾಗಿದ್ದಾನೆ. ಆರೋಪಿಗಳು ನಿಯಮಿತವಾಗಿ ಇಂಟರ್ನೆಟ್ ಬಳಸುತ್ತಿದ್ದರು. ಡಾರ್ಕ್ ವೆಬ್ ಮೂಲಕ ಮಕ್ಕಳಿ ಲೈಂಗಿಕ ದೌರ್ಜನ್ಯ ನೀಡಲು ಬಳಸುವ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.