ಹ್ಯೂಸ್ಟನ್:ಅಮೆರಿಕದ ಹ್ಯೂಸ್ಟನ್ನಲ್ಲಿ 'ಹೌಡಿ ಮೋದಿ' ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಪ್ರಧಾನಿಯವರು ಇದೇ ವೇಳೆ ಅಮೆರಿಕದ ಸೆನೆಟರ್ ಜಾನ್ ಕಾರ್ನಿನ್ ಅವರ ಪತ್ನಿ ಸ್ಯಾಂಡಿಯವರ ಕ್ಷಮೆ ಕೋರಿದ್ದಾರೆ.
ಅಮೆರಿಕದ ಸೆನೆಟರ್ ಜಾನ್ ಕಾರ್ನಿನ್ ಪತ್ನಿಯ ಕ್ಷಮೆ ಕೋರಿದ ಮೋದಿ... ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರ - PM Narendra Modi apology
ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದ ಸೆನೆಟರ್ ಜಾನ್ ಕಾರ್ನಿನ್ ಅವರ ಪತ್ನಿ ಸ್ಯಾಂಡಿಯವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ್ದಾರೆ. ಇದೇ ವೇಳೆ ಮೋದಿ ಸ್ಯಾಂಡಿಯವರ ಕ್ಷಮೆ ಕೋರಿದ್ದಾರೆ.
ನಿನ್ನೆ ಸೆನೆಟರ್ ಕಾರ್ನಿನ್ ಅವರ ಪತ್ನಿಯವರ ಹುಟ್ಟುಹಬ್ಬವಿತ್ತು. ಆದರೆ ' ಹೌಡಿ ಮೋದಿ' ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾರ್ನಿನ್ ಅವರು ತಮ್ಮ ಪತ್ನಿಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗವಹಿಸಲು ಆಗಿರಲಿಲ್ಲ. ಹೀಗಾಗಿ ಮೋದಿಯವರು ನೇರವಾಗಿ ಸ್ಯಾಂಡಿಯವರನ್ನು ಉದ್ದೇಶಿಸಿ ಒಂದು ವಿಡಿಯೋ ಪೋಸ್ಟ್ ಮಾಡಿ ಇದರಲ್ಲಿ ಕ್ಷಮೆ ಕೋರಿದ್ಧಾರೆ. 'ನಾನು ನಿಮ್ಮ ಕ್ಷಮೆ ಕೇಳುತ್ತೇನೆ, ಯಾಕೆಂದರೆ ಹುಟ್ಟುಹಬ್ಬದ ಸಂದರ್ಭದಲ್ಲಿ ಜಾನ್ ಕಾರ್ನಿನ್ ನಿಮ್ಮ ಜೊತೆಗಿರಲಿಲ್ಲ. ಇದರಿಂದ ನಿಮಗೆ ಅಸೂಯೆಯಾಗಿರಬಹುದು' ಎಂದು ಟ್ವೀಟ್ ಮಾಡಲಾಗಿದೆ.
ಅಲ್ಲದೆ ಇದೇ ಸಂದರ್ಭದಲ್ಲಿ ಮೋದಿಯವರು ಸ್ಯಾಂಡಿಯವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ನಿಮಗೆ ಶುಭ ಹಾರೈಸುತ್ತೇನೆ, ನಿಮ್ಮ ಜೀವನ ಸಂತಸದಿಂದಿರಲಿ. ಹಾಗೆಯೇ ಭವಿಷ್ಯದಲ್ಲಿ ಶಾಂತಿಯುತ ಸಮೃದ್ಧಿಭರಿತ ಜೀವನ ನಿಮ್ಮದಾಗಲಿ ಎಂದು ಮೋದಿ ಹಾರೈಸಿದ್ದಾರೆ.