ಕರ್ನಾಟಕ

karnataka

ETV Bharat / international

ಇಂದು ಮೋದಿ-ಟ್ರಂಪ್ ಭೇಟಿ: ಮಾತುಕತೆಯ ಅಂಶಗಳೇನು? - ಮೋದಿ-ಟ್ರಂಪ್ ಭೇಟಿ

ಜಗತ್ತಿನ ಎರಡು ಅತಿದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರಗಳ ದಿಗ್ಗಜ ನಾಯಕರು ಎರಡು ದಿನಗಳ ಅಂತರದಲ್ಲಿ ಪರಸ್ಪರ ಎರಡನೇ ಬಾರಿಗೆ ಭೇಟಿಯಾಗುತ್ತಿದ್ದಾರೆ.

ಮೋದಿ-ಟ್ರಂಪ್ ಭೇಟಿ

By

Published : Sep 24, 2019, 9:52 AM IST

ನ್ಯೂಯಾರ್ಕ್:ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಬಿಡುವಿಲ್ಲದೆ ವಿವಿಧ ಸಭೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸೋಮವಾರ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಪಾಲ್ಗೊಂಡ ಅವರು ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರನ್ನು ಭೇಟಿ ಮಾಡಲಿದ್ದಾರೆ.

ಶೃಂಗಸಭೆಗೆ ಟ್ರಂಪ್​ ದಿಢೀರ್​ ಭೇಟಿ... ಮೋದಿ ಭಾಷಣ ಆಲಿಸಿದ ಅಮೆರಿಕ ಅಧ್ಯಕ್ಷ!

ಇಂದು ಮಧ್ಯಾಹ್ನ 12.15(ಭಾರತೀಯ ಕಾಲಮಾನ) ಮೋದಿ, ಟ್ರಂಪ್​ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ವಿಶೇಷವೆಂದರೆ ಎರಡು ದಿನದ ಅಂತರದಲ್ಲಿ ಉಭಯ ನಾಯಕರ ಎರಡನೇ ಭೇಟಿ ಇದಾಗಿದೆ. ಭಾನುವಾರದಂದು 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರು ಒಟ್ಟಾಗಿ ಕಾಣಿಸಿಕೊಂಡಿದ್ದರು.
ಕಾಶ್ಮೀರ ಪ್ರಸ್ತಾಪ ಇಲ್ಲ:

ಇಂದಿನ ಭೇಟಿಯಲ್ಲಿ ಕಾಶ್ಮೀರ ವಿಚಾರ ಚರ್ಚೆಗೆ ಬರುವ ಸಾಧ್ಯತೆ ಕಡಿಮೆ ಎನ್ನಲಾಗಿದ್ದು, ಸೌಹಾರ್ದಯುತ ಭೇಟಿ ಇದಾಗಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಮೆರಿಕ ಪ್ರವಾಸದಲ್ಲಿ ಮೋದಿ 20 ಜಾಗತಿಕ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ವಿಶೇಷವೆಂದರೆ, ಮೋದಿ-ಇಮ್ರಾನ್ ಖಾನ್ ಭೇಟಿ ಈ ಪ್ರವಾಸದ ಪಟ್ಟಿಯಲ್ಲಿಲ್ಲ.

ಎರಡೂ ದೇಶ ಒಪ್ಪಿದ್ರೆ ಮಾತ್ರ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆಗೆ ಸಿದ್ಧ: ಟ್ರಂಪ್​

ಸೋಮವಾರ ಟ್ರಂಪ್ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾತುಕತೆ ನಡೆಸಿದ್ದರು. ಈ ವೇಳೆ ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಉಭಯ ದೇಶಗಳು ಒಪ್ಪಿದ್ದಲ್ಲಿ ಮಾತ್ರ ಮಧ್ಯಸ್ಥಿಕೆಗೆ ಸಿದ್ಧ ಎಂದಿದ್ದರು.

ABOUT THE AUTHOR

...view details