ಕರ್ನಾಟಕ

karnataka

ETV Bharat / international

ಗುಲಾಬಿ ಬಣ್ಣಕ್ಕೆ ತಿರುಗಿದ ಅರ್ಜೆಂಟೀನಾದ ನದಿ : ಪರಿಸರ ಕಾರ್ಯಕರ್ತರ ಆಕ್ರೋಶ - ಲಗೂನ್ ನದಿ‌

ನೀರು ಮೊದಲು ಗುಲಾಬಿ ಬಣ್ಣವನ್ನು ಪಡೆದಿತ್ತು. ಆದರೆ, "ಈಗ ಅದು ಹಾಳಾಗುತ್ತಿದೆ; ಇದು ತೀವ್ರವಾದ ಗುಲಾಬಿ ಬಣ್ಣಕ್ಕೆ ತಿರುಗಿದೆ. ಚಿಪ್ಪುಮೀನುಗಳನ್ನು ಸಂರಕ್ಷಿಸಲು ಸಹಾಯ ಮಾಡುವ ಸೋಡಿಯಂ ಸಲ್ಫೈಟ್‌ನಿಂದ ಇದು ಉಂಟಾಗುತ್ತದೆ ಎಂದು ತಜ್ಞರು ಶಂಕಿಸಿದ್ದಾರೆ..

Pink lagoon
ಗುಲಾಬಿ ಬಣ್ಣಕ್ಕೆ ತಿರುಗಿದ ಅರ್ಜೆಂಟೀನಾದ ನದಿ

By

Published : Aug 1, 2021, 7:25 PM IST

ಬ್ಯೂನೆಸ್‌ಐರಿಸ್ :ಅರ್ಜೆಂಟೀನಾದ ದಕ್ಷಿಣ ಪ್ಯಾಟಗೋನಿಯಾ ಪ್ರದೇಶದಲ್ಲಿನ ಲಗೂನ್ ನದಿ‌ ಈ ರಾಸಾಯನಿಕಗಳ ಸೇರ್ಪಡೆಯಿಂದ ಹಾಳಾಗುತ್ತಿದ್ದು, ಗಾಢ ಗುಲಾಬಿ ಬಣ್ಣಕ್ಕೆ ತಿರುಗಿದೆ.

ಕೆರೆಯು ಟ್ರೆಲೆವ್ ನಗರದಿಂದ ಸುಮಾರು 30 ಕಿಲೋಮೀಟರ್ (20 ಮೈಲಿ) ದೂರದಲ್ಲಿದೆ ಮತ್ತು ಸ್ಥಳೀಯ ಕೈಗಾರಿಕೆಗಳು ತಮ್ಮ ರಾಸಾಯನಿಕಗಳು ಅಥವಾ ಸಂಸ್ಕರಿಸಿದ ನೀರನ್ನು ಬಿಡುಗಡೆ ಮಾಡಲು ಇದನ್ನು ಬಳಸುತ್ತವೆ.

ಇದಕ್ಕೆ ಕಾರ್ಖಾನೆಗಳ ವಿಷಪೂರಿತ ರಾಸಾಯನಿಕಗಳು ಸೇರ್ಪಡೆಯಾಗುತ್ತಿರುವುದರಿಂದ ಕಲುಷಿತಗೊಂಡು ತನ್ನ ಸೌಂದರ್ಯ ಕಳೆದುಕೊಳ್ಳುತ್ತಿದೆ ಎಂದು ಪರಿಸರವಾದಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಗುಲಾಬಿ ಬಣ್ಣಕ್ಕೆ ತಿರುಗಿದ ಅರ್ಜೆಂಟೀನಾದ ನದಿ

ಪರಿಸರ ಕಾರ್ಯಕರ್ತ ಪ್ಯಾಬ್ಲೊ ಲ್ಯಾಡಾ ಮಾತನಾಡಿ, ನೀರು ಮೊದಲು ಗುಲಾಬಿ ಬಣ್ಣವನ್ನು ಪಡೆದಿತ್ತು. ಆದರೆ, "ಈಗ ಅದು ಹಾಳಾಗುತ್ತಿದೆ; ಇದು ತೀವ್ರವಾದ ಗುಲಾಬಿ ಬಣ್ಣಕ್ಕೆ ತಿರುಗಿದೆ. ಚಿಪ್ಪುಮೀನುಗಳನ್ನು ಸಂರಕ್ಷಿಸಲು ಸಹಾಯ ಮಾಡುವ ಸೋಡಿಯಂ ಸಲ್ಫೈಟ್‌ನಿಂದ ಇದು ಉಂಟಾಗುತ್ತದೆ ಎಂದು ತಜ್ಞರು ಶಂಕಿಸಿದ್ದಾರೆ ಎಂದು ಅವರು ಹೇಳಿದರು.

ಈ ಲಗೂನ್‌ನ ಸುತ್ತಲಿನ ದುರ್ವಾಸನೆ ಮತ್ತು ಇತರ ಪರಿಸರ ಸಮಸ್ಯೆಗಳ ಬಗ್ಗೆ ನಿವಾಸಿಗಳು ಬಹಳ ಹಿಂದಿನಿಂದಲೂ ದೂರು ನೀಡಿದ್ದಾರೆ. ಕೆಲವು ಸ್ಥಳೀಯ ಮಾಧ್ಯಮಗಳು ರಾವ್ಸನ್‌ ಒಕ್ಕೂಟ ಕಂಪನಿಯನ್ನು ದೂಷಿಸಿವೆ. ಸ್ಥಳೀಯರು ವಾಸನೆಯ ಬಗ್ಗೆ ದೂರು ನೀಡಿದ್ದರಿಂದ ಅದು ರಾಸಾಯನಿಕಗಳನ್ನು ಈ ಲಗೂನ್​ಗೆ ಎಸೆಯುವಂತೆ ಸೂಚಿಸಿದೆ ಎಂದು ಆರೋಪಿಸಿದೆ.

ಆದರೆ, ರಾವ್ಸನ್ ಆಂಬಿಯೆಂಟಲ್ ಕಂಪನಿಗೆ ನೀರಿನ ಸಂಸ್ಕರಣೆಯ ಉಸ್ತುವಾರಿ ವಹಿಸಿರುವ ಆಡ್ರಿಯಾನಾ ಸಾಂಜ್ ಅದನ್ನು ನಿರಾಕರಿಸಿದರು ಮತ್ತು ಇದು ರಾವ್ಸನ್ ಅವರ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರತಿಸ್ಪರ್ಧಿ ಕಂಪನಿ ಮಾಡಿರುವ ಹುನ್ನಾರದ ಭಾಗವಾಗಿದೆ ಎಂದು ಅವರು ದೂರಿದ್ದಾರೆ.

ಕೆಲವು ದಿನಗಳಲ್ಲಿ ಈ ಬಣ್ಣವು ಮರೆಯಾಗಿ ಸಾಮಾನ್ಯ ರೂಪಕ್ಕೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಚುಬುಟ್ ಪ್ರಾಂತ್ಯದ ಅಧಿಕಾರಿಗಳು ಹೇಳಿದ್ದಾರೆ.

ABOUT THE AUTHOR

...view details