ಕರ್ನಾಟಕ

karnataka

ETV Bharat / international

ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ.. ಸರ್ಕಾರದ ಒಪ್ಪಿಗೆಗೆ ಕಾಯುತ್ತಿರುವ ಫೈಜರ್​​​​​​​​! - 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಫೈಜರ್ ಲಸಿಕೆ

ಒಂದೊಮ್ಮೆ ಅಮೆರಿಕದ ಔಷಧ ನಿಯಂತ್ರಣ ಮಂಡಳಿ ದೃಢೀಕರಣ ನೀಡಿದರೆ, ಫೈಜರ್- ಬಯೋ ಎನ್‌ಟೆಕ್ ಲಸಿಕೆಯು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಲು ಸಿದ್ಧವಾದ ಮೊದಲ COVID-19 ಲಸಿಕೆಯಾಗಲಿದೆ. ಮುಂದಿನ ದಿನಗಳಲ್ಲಿ EUA ಸಲ್ಲಿಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಫೈಜರ್ ಮತ್ತು ಬಯೋಎನ್‌ಟೆಕ್ ಹೇಳಿಕೊಂಡಿವೆ.

Pfizer, BioNTech seek emergency authorization for
Pfizer, BioNTech seek emergency authorization for

By

Published : Feb 2, 2022, 7:07 AM IST

ನ್ಯೂಯಾರ್ಕ್​(ಅಮೆರಿಕ):ಔಷಧ ಕಂಪನಿಗಳಾದ ಫೈಜರ್ ಮತ್ತು ಬಯೋ-ಎನ್‌ಟೆಕ್, ಆರು ತಿಂಗಳಿಂದ ನಾಲ್ಕು ವರ್ಷದೊಳಗಿನ ಮಕ್ಕಳಿಗೆ COVID-19 ಲಸಿಕೆ ನೀಡಲು ತುರ್ತು ಅನುಮತಿ ಕೋರಿ ಅರ್ಜಿ ಸಲ್ಲಿವೆ.

ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ)ಯ ವಿನಂತಿ ಮೆರೆಗೆ ಫೈಜರ್ - ಬಯೋಎನ್‌ಟೆಕ್ ಕಂಪನಿಗಳು COVID-19 ಲಸಿಕೆಯ ತುರ್ತು ಬಳಕೆಯ ಅಧಿಕಾರ (ಇಯುಎ) ಪಡೆಯಲು ಬೇಕಾದ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ.

ಒಂದೊಮ್ಮೆ ಅಮೆರಿಕದ ಔಷಧ ನಿಯಂತ್ರಣ ಮಂಡಳಿ ದೃಢೀಕರಣ ನೀಡಿದರೆ, ಫೈಜರ್- ಬಯೋ ಎನ್‌ಟೆಕ್ ಲಸಿಕೆಯು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಲು ಸಿದ್ಧವಾದ ಮೊದಲ COVID-19 ಲಸಿಕೆಯಾಗಲಿದೆ. ಮುಂದಿನ ದಿನಗಳಲ್ಲಿ EUA ಸಲ್ಲಿಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಫೈಜರ್ ಮತ್ತು ಬಯೋಎನ್‌ಟೆಕ್ ಹೇಳಿಕೊಂಡಿವೆ.

ಆಸ್ಪತ್ರೆ ಸೇರುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ

COVID-19 ಕಾರಣದಿಂದಾಗಿ 5 ವರ್ಷದೊಳಗಿನ ಮಕ್ಕಳು ಆಸ್ಪತ್ರೆಗೆ ದಾಖಲು ಹೆಚ್ಚಾಗುತ್ತಿದ್ದು, ಮಕ್ಕಳ ರಕ್ಷಣೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವೈರಸ್​​ನಿಂದ ಮಕ್ಕಳನ್ನ ಕಾಪಾಡಿಕೊಳ್ಳಲು ತುರ್ತಾಗಿ ಲಸಿಕೆ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಈ ಲಸಿಕೆಗೆ ಅನುಮತಿ ಪಡೆದುಕೊಳ್ಳುವುದು ಸದ್ಯದ ಅಗತ್ಯತೆ ಆಗಿದೆ ಎಂದು ಫೈಜರ್​​​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲ್ಬರ್ಟ್ ಬೌರ್ಲಾ ಹೇಳಿದ್ದಾರೆ.

ಮೂರು ಡೋಸ್​ಗಳು ಅಗತ್ಯ

ಸಂಭಾವ್ಯ ರೂಪಾಂತರಿಗಳ ವಿರುದ್ಧ ಹೋರಾಡಲು ಮಕ್ಕಳಿಗೆ ಮೂರು ಡೋಸ್​ಗಳ ಅಗತ್ಯತೆ ಇದೆ ಎಂದು ಬೌರ್ಲಾ ಪ್ರತಿಪಾದಿಸಿದ್ದಾರೆ. ಹೀಗಾಗಿ ಮಕ್ಕಳಿಗೆ ಲಸಿಕೆ ಹಾಕಲು ಔಷಧ ಮಂಡಳಿಯಿಂದ ಅನುಮತಿ ಸಿಕ್ಕರೆ ಲಸಿಕಾ ಸರಣಿ ಮುಂದುವರಿಸಲು ಅನುಕೂಲವಾಗುತ್ತದೆ ಎಂದು ಫೈಜರ್​ ಸಂಸ್ಥೆ ಹೇಳಿಕೊಂಡಿದೆ.

ಮಕ್ಕಳ ಲಸಿಕೆ ಪ್ರಯೋಗ ಯಶಸ್ವಿ

ಬಯೋ-ಎನ್‌ಟೆಕ್‌ನ ಸಿಇಒ ಮತ್ತು ಸಹ-ಸಂಸ್ಥಾಪಕರಾದ ಉಗುರ್ ಸಾಹಿನ್ ಮಾತನಾಡಿ, ಲಸಿಕೆಯು ಈಗಾಗಲೇ 5 ವರ್ಷದಿಂದ ಪ್ರಾರಂಭವಾಗುವ ಎಲ್ಲಾ ವಯೋಮಾನದವರಿಗೆ ಬಹು ಕ್ಲಿನಿಕಲ್ ಪ್ರಯೋಗಗಳು, ಲಸಿಕೆ ಅತ್ಯಂತ ಸುರಕ್ಷಿತ ಹಾಗೂ ಪರಿಣಾಕಾರಿಯಾಗಿ ಕೆಲಸ ಮಾಡಿದೆ ಎಂಬದನ್ನು ಸಾಬೀತು ಮಾಡಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ:ಉಕ್ರೇನ್ ಬಿಕ್ಕಟ್ಟು: ವಿಶ್ವಸಂಸ್ಥೆಗೆ ಪತ್ರ ಬರೆದ ಕ್ರೆಮ್ಲಿನ್​..ಅಮೆರಿಕ ಪ್ರಸ್ತಾಪಕ್ಕೆ ರಷ್ಯಾ ಪ್ರತಿಕ್ರಿಯೆ ಏನು?.

ABOUT THE AUTHOR

...view details