ವಾಷಿಂಗ್ಟನ್: ಮೊದಲೇ ಅನಾರೋಗ್ಯದಿಂದ ಬಳಲುತ್ತಿರುವ 50 ವರ್ಷಕ್ಕೂ ಮೇಲ್ಪಟ್ಟ ವ್ಯಕ್ತಿಗಳಿಗೆ ಕೊವಿಡ್-19 ಬಾಧಿಸುವ ಸಾಧ್ಯತೆಗಳು ಹೆಚ್ಚು ಎಂದು ಇತ್ತೀಚಿನ ಅಧ್ಯಯನವೊಂದರಲ್ಲಿ ತಿಳಿದು ಬಂದಿದೆ. ಯುರೋಪ್ ಮತ್ತು ಚೀನಾಗಳಲ್ಲಿ ಕೊರೊನಾ ವೈರಸ್ನಿಂದಾದ ಸಾವಿನ ಅಂಕಿ ಅಂಶಗಳ ಕುರಿತಾದ ವೈಟ್ ಹೌಸ್ ಕೊರೊನಾ ವೈರಸ್ ಟಾಸ್ಕ್ ಫೋರ್ಸ್ ತಂಡದಲ್ಲಿನ ಅಮೆರಿಕ ವೈದ್ಯರೊಬ್ಬರು ಈ ಮಾಹಿತಿ ನೀಡಿದ್ದಾರೆ.
50 ವರ್ಷ ಮೇಲ್ಪಟ್ಟ ಅನಾರೋಗ್ಯ ವ್ಯಕ್ತಿಗೆ ಕೊವಿಡ್ ತಗಲುವ ಸಾಧ್ಯತೆ ಹೆಚ್ಚು: ಅಧ್ಯಯನ ವರದಿ - White House Coronavirus Task Force
50 ವರ್ಷಕ್ಕೂ ಮೇಲ್ಪಟ್ಟ ವ್ಯಕ್ತಿಗಳಿಗೆ ಕೊರೊನಾ ವೈರಸ್ ತಗಲುವ ಸಾಧ್ಯತೆ ಹೆಚ್ಚು ಎಂದು ವೈಟ್ ಹೌಸ್ ಕೊರೊನಾ ವೈರಸ್ ಟಾಸ್ಕ್ ಫೋರ್ಸ್ ತಂಡದಲ್ಲಿನ ಅಮೆರಿಕ ವೈದ್ಯರೊಬ್ಬರು ಈ ಮಾಹಿತಿ ನೀಡಿದ್ದಾರೆ.
'ನಮಗೆ ದೊರೆತ ಮಾಹಿತಿಯ ಪ್ರಕಾರ ಇಡೀ ಯುರೋಪ್ನಲ್ಲಿ 15 ವರ್ಷಕ್ಕೂ ಕೆಳಗಿನ ಯಾವುದೇ ಮಗು ಕೊರೊನಾಗೆ ಬಲಿಯಾಗಿಲ್ಲ. ಹೀಗಾಗಿ ಮಕ್ಕಳಲ್ಲಿ ಕೊರೊನಾ ವೈರಸ್ ಪ್ರಭಾವ ಕಡಿಮೆ ಎಂಬ ಅಭಿಪ್ರಾಯಕ್ಕೆ ನಾವು ಬಂದಿದ್ದೇವೆ. ಹಾಗೆಯೇ ದೊಡ್ಡವರಿಗೆ ಈ ವೈರಸ್ ಬಾಧೆ ಹೆಚ್ಚು' ಎಂದು ವೈಟ್ಹೌಸ್ ಕೊರೊನಾ ವೈರಸ್ ಟಾಸ್ಕ್ ಫೋರ್ಸ್ ಸಮನ್ವಯಾಧಿಕಾರಿ ಡಾ. ಡೆಬೊರಾ ಬರ್ಕ್ಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
50 ವರ್ಷಕ್ಕೂ ಮೇಲ್ಪಟ್ಟ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದವರಿಗೆ ಕೊರೊನಾ ಬಾಧಿಸದು ಎಂದು ಭಾವಿಸುವಂತಿಲ್ಲ. ಸಂಪೂರ್ಣ ಆರೋಗ್ಯವಂತರಾದ 50 ವರ್ಷ ಮೇಲ್ಪಟ್ಟವರಿಗೂ ವೈರಸ್ ದಾಳಿ ಮಾಡಬಹುದು ಎಂದು ಅವರು ಹೇಳಿದರು.