ವಾಷಿಂಗ್ಟನ್: ಮುಂದಿನ ಕೆಲವು ದಿನಗಳಲ್ಲಿ ಭಾರತಕ್ಕೆ ಅಗತ್ಯ ವೈದ್ಯಕೀಯ ಸಾಮಗ್ರಿಗಳ ವಿತರಣೆಯನ್ನು ಸಮರೋಪಾದಿಯಲ್ಲಿ ಕಳುಹಿಸಲು ಅಮೆರಿಕ ಸಿದ್ಧತೆ ನಡೆಸಿದೆ.
ಮುಂದಿನ ಕೆಲವು ದಿನಗಳಲ್ಲಿ ಔಷಧ ಸಲಕರಣೆಗಳ ಸರಬರಾಜು ವಿತರಣೆಯನ್ನು ಪ್ರಾರಂಭಿಸುತ್ತಿದ್ದೇವೆ. ಈ ಅಗತ್ಯ ಸಾಮಗ್ರಿಗಳನ್ನು ಆದಷ್ಟು ಬೇಗ ತಲುಪಿಸಲು ನಾವು ಸಾರಿಗೆ ನೆರವು ನೀಡುತ್ತೇವೆ ಎಂದು ಪೆಂಟಗನ್ ತಿಳಿಸಿದೆ.
ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಅಮೆರಿಕ ಗೌರವಿಸುತ್ತದೆ. ಪ್ರಸ್ತುತ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೊನಾ ಎದುರಿಸಲು ಭಾರತದ ಜನರಿಗೆ ಸಹಾಯ ಮಾಡಲು ನಾವು ನಿರ್ಧರಿಸಿದ್ದೇವೆ ಎಂದು ಕಿರ್ಬಿ ಹೇಳಿದರು.
ಇದನ್ನೂ ಓದಿ:ಭಾರತ ನಮಗಾಗಿ ಇತ್ತು, ಇದೀಗ ನಾವು ಅವರಿಗಾಗಿ ಇರುತ್ತೇವೆ: ಅಮೆರಿಕ ಅಧ್ಯಕ್ಷರ ವಾಗ್ದಾನ
ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಅಮೆರಿಕದ ಇತರೆ ಇಲಾಖೆಗಳೊಂದಿಗೆ ಆಮ್ಲಜನಕ ಸಂಬಂಧಿತ ಉಪಕರಣಗಳು, ಕ್ಷಿಪ್ರ ಪರೀಕ್ಷಾ ಕಿಟ್‌ಗಳು, ವೈಯಕ್ತಿಕ ರಕ್ಷಣಾ ಸಾಧನಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಭಾರತಕ್ಕೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.