ಕರ್ನಾಟಕ

karnataka

ETV Bharat / international

ಟ್ರಂಪ್ ಪ್ರಜಾಪ್ರಭುತ್ವಕ್ಕೇ ಅಪಾಯ: ನ್ಯಾನ್ಸಿ ಪೆಲೋಸಿ ವಾರ್ನಿಂಗ್​ - ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿ

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಜಾಪ್ರಭುತ್ವದ ಮೇಲೆ ನಡೆಸುತ್ತಿರುವ ದಾಳಿಯ ಭಯಾನಕತೆ ತೀವ್ರಗೊಂಡಿದೆ ಮತ್ತು ತಕ್ಷಣದ ಕ್ರಮ ಅಗತ್ಯವಿದೆ ಎಂದು ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ.

trump
trump

By

Published : Jan 11, 2021, 11:41 AM IST

ವಾಷಿಂಗ್ಟನ್:ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ದೋಷಾರೋಪಣೆ ಮಾಡಲು ಸದನದಲ್ಲಿ ಸಾಂವಿಧಾನಿಕ ಅಧಿಕಾರವನ್ನು ಬಳಸಲು ಉಪಾಧ್ಯಕ್ಷರನ್ನು ಮತ್ತು ಕ್ಯಾಬಿನೆಟ್ ಅನ್ನು ಒತ್ತಾಯಿಸುವಂತೆ ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದು, ಟ್ರಂಪ್​ ಅವರಿಂದ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಇದೆ ಎಂದು ಎಚ್ಚರಿಸಿದ್ದಾರೆ.

ಟ್ರಂಪ್ "ರಾಜೀನಾಮೆ ನೀಡಿ ಆದಷ್ಟು ಬೇಗನೆ ಹೊರ ಹೋಗಬೇಕು" ಎಂದು ಸೆನೆಟರ್​ಗಳು ಒತ್ತಾಯಿಸುತ್ತಿದ್ದಾರೆ.

"ನಾವು ತುರ್ತಾಗಿ ಕಾರ್ಯನಿರ್ವಹಿಸುತ್ತೇವೆ, ಏಕೆಂದರೆ ಟ್ರಂಪ್ ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆ" ಎಂದು ಪೆಲೋಸಿ ತಮ್ಮ ಸಹೋದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

"ಅವರು ಪ್ರಜಾಪ್ರಭುತ್ವದ ಮೇಲೆ ನಡೆಸುತ್ತಿರುವ ದಾಳಿಯ ಭಯಾನಕತೆ ತೀವ್ರಗೊಂಡಿದೆ ಮತ್ತು ತಕ್ಷಣದ ಕ್ರಮ ಅಗತ್ಯವಾಗಿದೆ" ಎಂದು ನ್ಯಾನ್ಸಿ ಪೆಲೋಸಿ ಪ್ರತಿಪಾದಿಸಿದ್ದಾರೆ.

ABOUT THE AUTHOR

...view details