ಕರ್ನಾಟಕ

karnataka

ETV Bharat / international

ಪೆಗಾಸಸ್ ಸ್ಪೈವೇರ್: ಹ್ಯಾಕಿಂಗ್‌ ವೈರಸ್‌ನಿಂದ ಜಾಗತಿಕ ಪ್ರಜಾಪ್ರಭುತ್ವಕ್ಕೆ ಬೆದರಿಕೆ - ಯುಎಇ

ಪೆಗಾಸಸ್‌ ಗೂಢಚರ್ಯೆ ನಡೆಸಿದೆ ಎನ್ನಲಾಗುತ್ತಿರುವ ವರದಿ ಇಡೀ ಜಗತ್ತನ್ನೇ ತಲ್ಲಣಗೊಳಿಸುತ್ತಿದೆ. ವಿಶ್ವದ ನಾಯಕರು, ಮಾಜಿ ಪ್ರಧಾನಿಗಳ ಫೋನ್‌ಗಳು ಗುರಿಪಡಿಸಲಾಗಿದ್ದ ಪಟ್ಟಿಯಲ್ಲಿವೆ ಸೇರಿರೋದು ಆತಂಕ ಮೂಡಿಸಿದೆ.

Pegasus Spyware: A threat to global democracy
ಪೆಗಾಸಸ್ ಸ್ಪೈವೇರ್; ಹ್ಯಾಕಿಂಗ್‌ ವೈರಸ್‌ನಿಂದ ಜಾಗತಿಕ ಪ್ರಜಾಪ್ರಭುತ್ವಕ್ಕೆ ಬೆದರಿಕೆ

By

Published : Jul 21, 2021, 10:23 PM IST

ನವದೆಹಲಿ: ಇಸ್ರೇಲ್‌ ಮೂಲದ ಪೆಗಾಸಸ್ ಸ್ಪೈವೇರ್ ಬಳಸಿ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ಕೆಲ ಪತ್ರಕರ್ತರು ಫೋನ್‌ ಕದ್ದಾಲಿಕೆ ಮಾಡಲಾಗಿದೆ ಎನ್ನಲಾದ ವರದಿ ದೇಶದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಮಾತ್ರವಲ್ಲದೆ ಸಂಸತ್‌ ಅಧಿವೇಶನದಲ್ಲಿ ಆಡಳಿತ, ವಿಪಕ್ಷಗಳ ನಡುವಿನ ವಾಕ್ಸಮರಕ್ಕೂ ಕಾರಣವಾಗಿತ್ತು. ದೇಶದ ಭದ್ರತೆಗೆ ಸವಾಲು ಅಂತಲೇ ಹೇಳಲಾಗುತ್ತಿರುವ ಫೋನ್‌ ಹ್ಯಾಕಿಂಗ್‌ ಭಾರತ ಮಾತ್ರವಲ್ಲದೆ, ಹಲವು ದೇಶಗಳಲ್ಲೂ ನಡೆದಿದೆ ಎನ್ನಲಾಗುತ್ತಿದೆ.

ಅಜರ್‌ಬೈಜಾನ್‌, ಬಹ್ರೇನ್, ಹಂಗೇರಿ, ಕಜಕಿಸ್ತಾನ್, ಮೆಕ್ಸಿಕೊ, ಮೊರಾಕೊ, ರುವಾಂಡಾ ಮತ್ತು ಯುಎಇ ಕೂಡ ಪೆಗಾಸಸ್‌ನ ಬಲಿಪಶುಗಳಾಗಿವೆ ಎಂದು ಹೇಳಲಾಗುತ್ತಿದೆ. ಜಾಗತಿಕ ಮಾಧ್ಯಮಗಳ ಪ್ರಕಾರ, ಇದೇ ವಿಚಾರವಾಗಿ ತನಿಖೆಗಳು ನಡೆಯುತ್ತಿದ್ದು, ಹ್ಯಾಕಿಂಗ್‌ ಪಟ್ಟಿಯಲ್ಲಿ ಎಷ್ಟು ಸಾಧನಗಳನ್ನು ಗುರಿಯಾಗಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ವಿಧಿವಿಜ್ಞಾನದ ವಿಶ್ಲೇಷಣೆ ಪ್ರಕಾರ 37 ಫೋನ್‌ಗಳನ್ನು ಹ್ಯಾಕಿಂಗ್ ಮಾಡಲು ಪ್ರಯತ್ನಿ ಅದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದರಲ್ಲಿ 2018 ರ ಅಕ್ಟೋಬರ್‌ನಲ್ಲಿ ಇಸ್ತಾಂಬುಲ್‌ನಲ್ಲಿ ಹತ್ಯೆಗೀಡಾದ ಸೌದಿ ಪತ್ರಕರ್ತ ಜಮಾಲ್ ಖಶೋಗ್ಗಿ ಅವರ ಆಪ್ತರು ಸೇರಿದ್ದಾರೆ. ಮೆಕ್ಸಿಕನ್ ಪತ್ರಕರ್ತ ಸಿಸಿಲಿಯೊ ಪಿನೆಡಾ ಬ್ರಿಟೊ ಕೂಡ ಎರಡು ಬಾರಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ, ಇಬ್ಬರು ಹಂಗೇರಿಯನ್ ತನಿಖಾ ಪತ್ರಕರ್ತರಾದ ಆಂಡ್ರಾಸ್ ಸ್ಜಬೊ ಮತ್ತು ಸ್ಜಾಬೊಲ್ಕ್ಸ್ ಪನ್ಯಿ ಅವರ ಫೋನ್‌ಗಳು ಸಹ ಸ್ಪೈವೇರ್ ವೈರಸ್‌ಗೆ ಒಳಗಾಗಿರುವುದು ಕಂಡುಬಂದಿದೆ.

ಪೆಗಾಸಸ್ ಸ್ಪೈವೇರ್ ನಡೆಸುವ ಕಣ್ಗಾವಲು ಕಾರ್ಯಾಚರಣೆಗಳ ಗುರಿಗಳ ಪಟ್ಟಿ ಹೆಚ್ಚುತ್ತಿದೆ. ಪೆಗಾಸಸ್ ಬಹಿರಂಗಪಡಿಸಿದ ಹೊಸ ಪುರಾವೆಗಳು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಮತ್ತು ನೂರಾರು ಸರ್ಕಾರಿ ಅಧಿಕಾರಿಗಳು ಸೇರಿದಂತೆ 14 ವಿಶ್ವ ನಾಯಕರ ದೂರವಾಣಿ ಸಂಖ್ಯೆಗಳು ಪೆಗಾಸಸ್‌ನ ಸಂಭಾವ್ಯ ಗುರಿಗಳಾಗಿವೆ ಎಂದು ತಿಳಿದುಬಂದಿದೆ.

ಪೆಗಾಸಸ್‌ನ ಸಂಭಾವ್ಯ ಗುರಿ ಹೊಂದಿರುವ ಇತರ ವಿಶ್ವ ನಾಯಕರು ಮತ್ತು ಅವರಲ್ಲಿ ಇನ್ನೂ ಏಳು ಮಂದಿ ಮೊರಾಕೊದ ರಾಜ ಮೊಹಮ್ಮದ್ VI, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಇರಾಕ್ ಅಧ್ಯಕ್ಷ ಬರ್ಹಮ್ ಸಾಲಿಹ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಈಜಿಪ್ಟ್ ಪ್ರಧಾನಿ ಮೊಸ್ತಫಾ ಮಡ್ಬೌಲಿ, ಮೊರೊಕನ್ ಪ್ರಧಾನಿ ಸಾದ್-ಎಡ್ಡಿನ್ ಎಲ್ ಒಥ್ಮಾನಿ, ಮಾಜಿ ಲೆಬನಾನಿನ ಪ್ರಧಾನಿ ಸಾದ್ ಹರಿರಿ, ಉಗಾಂಡಾದ ಮಾಜಿ ಪ್ರಧಾನಿ ರುಹಕಾನಾ ರುಗುಂಡಾ, ಅಲ್ಜೀರಿಯಾದ ಮಾಜಿ ಪ್ರಧಾನಿ ನೌರೆಡ್ಡೈನ್ ಬೆಡೌಯಿ, ಬೆಲ್ಜಿಯಂನ ಮಾಜಿ ಪ್ರಧಾನಿ ಚಾರ್ಲ್ಸ್ ಮೈಕೆಲ್ ಸೇರಿದ್ದಾರೆ.

ಇದನ್ನೂ ಓದಿ: 'Enough is enough' ಪೆಗಾಸಸ್​ ಅಪರಾಧ ಮಾಡಿದ್ರೆ ತನಿಖೆಗೊಳಪಡಲು ಸಿದ್ಧ ಎಂದ ಕಂಪನಿ!

ಫ್ರೆಂಚ್ ಪತ್ರಿಕೆ ಲೆ ಮಾಂಡೆ ಪ್ರಕಾರ, ನವದೆಹಲಿ ಮೂಲದ ಅನೇಕ ರಾಜತಾಂತ್ರಿಕರು, ಅಂತಾರಾಷ್ಟ್ರೀಯ ಎನ್‌ಜಿಒಗಳ ಸಿಬ್ಬಂದಿ ಕೂಡ ಪೆಗಾಸಸ್ ಪಟ್ಟಿಯಲ್ಲಿದ್ದರು. ಭಾರತದ ವಿದೇಶಾಂಗ ಸಚಿವಾಲಯವು ಇಡೀ ವಿವಾದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಳೆದ ಸೋಮವಾರ ಹಲವಾರು ಜಾಗತಿಕ ಮಾಧ್ಯಮ ಸಂಸ್ಥೆಗಳು ಬ್ರಿಟಿಷ್ ಹೈಕಮಿಷನ್ ಅಧಿಕಾರಿಯೊಬ್ಬರು ಮತ್ತು ಅಮೆರಿಕನ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ)ನ ಇಬ್ಬರು ಅಧಿಕಾರಿಗಳ ದೂರವಾಣಿ ಸಂಖ್ಯೆಗಳು ಮತ್ತು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನಂತಹ ಅಂತಾರಾಷ್ಟ್ರೀಯ ಎನ್‌ಜಿಒಗಳ ನೌಕರರು ಸಹ ಇದ್ದಾರೆ ಎಂದು ವರದಿ ಮಾಡಿದೆ.

ಭಾರತದಲ್ಲಿ 40 ಪತ್ರಕರ್ತರು, ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷ ನಾಯಕರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಇಬ್ಬರು ಮಂತ್ರಿಗಳು ಈ ಪಟ್ಟಿಯಲ್ಲಿದ್ದಾರೆ ಎಂದು ವರದಿಯಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕೂ ಪೆಗಾಸಸ್‌ ಹ್ಯಾಕಿಂಕ್‌ ವರದಿ ಕಾರಣವಾಯಿತು. ಪೆಗಾಸಸ್ ವಿಷಯ ಸೇರಿದಂತೆ ದೇಶದಲ್ಲಿನ ಇತರೆ ವಿಷಯಗಳ ಬಗ್ಗೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ಹಾಗೂ ಪ್ರತಿಭಟನೆ ಹಿನ್ನೆಲೆಯಲ್ಲಿ ಲೋಕಸಭಾ ಅಧಿವೇಶವನ್ನು ನಾಳೆಗೆ ಮುಂದೂಡಲಾಗಿದೆ.

ABOUT THE AUTHOR

...view details