ಕರ್ನಾಟಕ

karnataka

ETV Bharat / international

ಕಾಬೂಲ್​ನಲ್ಲಿ ತಾಲಿಬಾನಿಗಳ ಅಟ್ಟಹಾಸ... ಶಾಂತಿ ಮಾತುಕತೆ ರದ್ದುಗೊಳಿಸಿದ ಟ್ರಂಪ್ - ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಕಾಬೂಲ್​ನಲ್ಲಿ ಗುರುವಾರ ಸಂಭವಿಸಿದ್ದ ಕಾರ್ ಬಾಂಬ್ ಸ್ಫೋಟದಲ್ಲಿ ಅಮೆರಿಕದ ಓರ್ವ ಸೇರಿದಂತೆ 12 ಮಂದಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ತಾಲಿಬಾನ್​ ಮುಖಂಡರೊಂದಿಗಿನ ಶಾಂತಿ ಮಾತುಕತೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ರದ್ದುಗೊಳಿಸಿದ್ದಾರೆ.

ಟ್ರಂಪ್

By

Published : Sep 8, 2019, 9:06 AM IST

ವಾಷಿಂಗ್ಟನ್:ತಾಲಿಬಾನ್ ಉಗ್ರರು ಅಫ್ಘನ್ ರಾಜಧಾನಿ ಕಾಬೂಲ್​ನಲ್ಲಿ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ತಾಲಿಬಾನ್ ಜೊತೆಗಿನ ಶಾಂತಿ ಮಾತುಕತೆಯನ್ನು ರದ್ದುಗೊಳಿಸಿದ್ದಾರೆ.

ಇಂದು ತಾಲಿಬಾನ್ ನಾಯಕರ ಜೊತೆ ಕ್ಯಾಂಪ್ ಡೇವಿಡ್​ನಲ್ಲಿ ತಾಲಿಬಾನ್​ - ಟ್ರಂಪ್ ಮಾತುಕತೆ ಆಯೋಜನೆಯಾಗಿತ್ತು. ಆದರೆ, ಕಾಬೂಲ್​ನಲ್ಲಿ ಗುರುವಾರ ಸಂಭವಿಸಿದ್ದ ಕಾರ್ ಬಾಂಬ್​ ಸ್ಫೋಟದ ಹೊಣೆಯನ್ನು ತಾಲಿಬಾನ್ ವಹಿಸಿಕೊಂಡ ಬಳಿಕ ಟ್ರಂಪ್ ಈ ಮಾತುಕತೆಗೆ ತಿಲಾಂಜಲಿ ಹೇಳಿದ್ದಾರೆ.

ಕಾಬೂಲ್​ನಲ್ಲಿ ಗುರುವಾರ ಉಗ್ರರು ಕಾರ್ ಬಾಂಬ್ ಸ್ಫೋಟಿಸಿದ್ದರಿಂದ ಅಮೆರಿಕದ ಓರ್ವ ಯೋಧ ಸೇರಿದಂತೆ 12 ಮಂದಿ ಮೃತಪಟ್ಟಿದ್ದಾರೆ.ಕಾಬೂಲ್ ದಾಳಿಯನ್ನು ಖಂಡಿಸಿರುವ ಟ್ರಂಪ್ ಟ್ವಿಟ್ಟರ್​ ಮೂಲಕ ತಾಲಿಬಾನ್ ಜೊತೆಗಿನ ಶಾಂತಿ ಮಾತುಕತೆಯನ್ನು ರದ್ದುಗೊಳಿಸಿರುವುದಾಗಿ ಬರೆದುಕೊಂಡಿದ್ದಾರೆ.

ABOUT THE AUTHOR

...view details