ಕರ್ನಾಟಕ

karnataka

ETV Bharat / international

ಪಾಕಿಸ್ತಾನವು ತಾಲಿಬಾನ್​ಗೆ ಬೆಂಬಲಿಸಿ, ಪೋಷಿಸಿದೆ: ಹರ್ಷ ವಿ.ಶೃಂಗ್ಲಾ - ಪಾಕಿಸ್ತಾನವು ತಾಲಿಬಾನ್​ಗೆ ಬೆಂಬಲಿಸಿ, ಪೋಷಿಸಿದೆ

ಆಫ್ಘನ್​ನಲ್ಲಿ ಚುನಾಯಿತ ಸರ್ಕಾರ ತೆಗೆದು ಹಾಕಿ, ತಾಲಿಬಾನ್ ಸರ್ಕಾರ ರಚಿಸುವಲ್ಲಿ ಪಾಕಿಸ್ತಾನ ಪ್ರಮುಖ ಪಾತ್ರ ವಹಿಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ವಿ ಶೃಂಗ್ಲಾ ಹೇಳಿದ್ದಾರೆ

ಹರ್ಷ ವಿ.ಶೃಂಗ್ಲಾ
ಹರ್ಷ ವಿ.ಶೃಂಗ್ಲಾ

By

Published : Sep 4, 2021, 12:15 PM IST

ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ಹರ್ಷ ವಿ ಶೃಂಗ್ಲಾ ಆತಂಕ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನವು ಚುನಾಯಿತ ಸರ್ಕಾರವನ್ನು ಬದಲಿಸಿದ ತಾಲಿಬಾನ್​ಗೆ ಬೆಂಬಲಿಸಿದೆ ಮತ್ತು ಪೋಷಿಸಿದೆ ಎಂದು ಹೇಳಿದ್ದಾರೆ.

ವಾಷಿಂಗ್ಟನ್​ನಲ್ಲಿ ಅವರು ಮಾತನಾಡುತ್ತಾ, ಪಾಕಿಸ್ತಾನವು ಆಫ್ಘನ್​ನ ನೆರೆಯ ರಾಷ್ಟ್ರವಾಗಿದೆ. ಅಫ್ಘಾನಿಸ್ತಾನದಲ್ಲಿರುವ ಚುನಾಯಿತ ಸರ್ಕಾರವನ್ನು ಅಧಿಕಾರದಿಂದ ತೆಗೆದುಹಾಕಲು, ಉಗ್ರಪಡೆ ಸರ್ಕಾರ ರಚಿಸಲು ಪಾಕಿಸ್ತಾನ ನೆರವಾಗಿದೆ. ಎರಡು ದಶಕಗಳಿಂದ ಭಯೋತ್ಪಾಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಪಾಕ್​​, ಆಫ್ಘನ್​ನಲ್ಲಿ ತಾಲಿಬಾನ್ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದರು.

ಆಫ್ಘನ್​ನ ಪ್ರಸ್ತುತ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿದ ಶೃಂಗ್ಲಾ, ಅಫ್ಘಾನಿಸ್ತಾನದ ಪರಿಸ್ಥಿತಿ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದ ಸದಸ್ಯರು ನಿಷ್ಕ್ರಿಯವಾಗಿಲ್ಲ. ಆಫ್ಘನ್​ ಬಗ್ಗೆ ಕಾಳಜಿ ಹೊಂದಿರುವ ಪ್ರತಿ ರಾಷ್ಟ್ರದೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಪಾಕ್​ ರಾಯಭಾರಿ ಭೇಟಿ ಮಾಡಿದ Taliban​.. ಈ ವಿಚಾರಗಳ ಕುರಿತಂತೆ ಚರ್ಚೆ

ಆಲ್​ಖೈದಾ ಉಗ್ರ ಸಂಘಟನೆಯು ಆಫ್ಘನ್​ - ಪಾಕ್​ ಗಡಿ ಪ್ರದೇಶದಲ್ಲಿ ಬೀಡುಬಿಟ್ಟಿದೆ ಎಂದು ವಿಶ್ವಸಂಸ್ಥೆಯ ಪರಿಶೀಲನಾ ವರದಿ ಹೇಳಿದೆ. ಅಲ್ಲದೇ, ISIL-K, ಆಲ್​ಖೈದಾ ಸೇರಿದಂತೆ ಬಹುತೇಕ ಉಗ್ರಪಡೆಗಳು ಪಾಕಿಸ್ತಾನದ ಮೂಲಕ ಅಫ್ಘಾನಿಸ್ತಾನಕ್ಕೆ ಪ್ರವೇಶಿಸಿದ್ದಾರೆ. ಈ ಸಂಘಟನೆಗಳ ನಾಯಕರು ಮತ್ತು ತಾಲಿಬಾನ್​​​ಗಳು ಪಾಕ್​ನಲ್ಲಿ ವಾಸಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.

ABOUT THE AUTHOR

...view details