ವಾಷಿಂಗ್ಟನ್: ಪುಲ್ವಾಮಾ ದಾಳಿಯ ಬಳಿಕವೂ ಉಗ್ರರನ್ನು ಹತ್ತಿಕ್ಕುವ ವಿಚಾರದಲ್ಲಿ ಪಾಕಿಸ್ತಾನ ತನ್ನ ಉದಾಸೀನತೆಯನ್ನು ಮುಂದುವರೆಸಿದ್ದು, ಇದೀಗ ಅಮೆರಿಕ ಇದೇ ವಿಚಾರಕ್ಕೆ ಖಡಕ್ ಸಂದೇಶ ಕಳುಹಿಸಿದೆ.
ಬೇರೆ ದೇಶದೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಕಡಿತಗೊಳಿಸುವ ವಿಚಾರವನ್ನು ಬದಿಗಿಟ್ಟು ನಿಮ್ಮ ನೆಲದಲ್ಲಿ ಬೆಳೆಯುತ್ತಿರುವ ಉಗ್ರರನ್ನು ಮೊದಲು ಮಟ್ಟಹಾಕಿ ಎಂದು ಅಮೆರಿಕ ಖಾರವಾಗಿ ಹೇಳಿದೆ.
ಪಾಕ್ಗೆ ನುಂಗಲಾರದ ತುತ್ತಾದ ಆರ್ಟಿಕಲ್ 370 ರದ್ದು... ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಕ್ಕೆ ಎಳ್ಳು-ನೀರು!
ಬುಧವಾರ ಸಂಜೆಯ ಬಳಿಕ ನಡೆದ ಬೆಳವಣಿಗೆಯಲ್ಲಿ ಪಾಕಿಸ್ತಾನ ಭಾರತದೊಂದಿಗೆ ಎಲ್ಲ ರೀತಿಯ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಿತ್ತು. ಕಾಶ್ಮೀರ ವಿಚಾರದಲ್ಲಿ ಭಾರತ ಸರ್ಕಾರ ತೆಗೆದುಕೊಂಡ ದಿಟ್ಟ ನಿರ್ಧಾರದಿಂದ ಪಾಕಿಸ್ತಾನಕ್ಕೆ ಭಯ ಶುರುವಾಗಿತ್ತು.
ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ತನ್ನ ದೇಶದ ಪ್ರಜೆಗಳ ಹಿತ, ರಕ್ಷಣೆ ಮತ್ತು ಸಮಾನತೆಗಾಗಿ ಯಾವುದೇ ನಿರ್ಧಾರ ಕೈಗೊಳ್ಳಬಹುದು. ಇದೇ ವೇಳೆ ಪಾಕಿಸ್ತಾನ ದುಡುಕಿನ ನಿರ್ಧಾರ ಕೈಗೊಳ್ಳಬಾರದು. ಪಾಕಿಸ್ತಾನ ಮೊದಲು ತನ್ನ ನೆಲದಲ್ಲಿರುವ ಉಗ್ರರನ್ನು ದಮನ ಮಾಡಲಿ ಎಂದು ಅಮೆರಿಕ ವಿದೇಶಾಂಗ ವ್ಯವಹಾರಗಳ ಸಮಿತಿ ಪ್ರಕಟಣೆ ಹೊರಡಿಸಿದೆ.