ಕರ್ನಾಟಕ

karnataka

ETV Bharat / international

ಪಾಕ್‌ ಮೂಲದ ಉಗ್ರ ಸಂಘಟನೆಗಳಿಂದ ಜಾಗತಿಕ ಭದ್ರತೆಗೆ ಸವಾಲು: ವಿಶ್ವಸಂಸ್ಥೆಯಲ್ಲಿ ಭಾರತ ಕಳವಳ - ಎಸ್‌.ಜೈಶಂಕರ್‌

ನಿಷೇಧಿತ ಹಕ್ಕಾನಿ ಜಾಲ ತನ್ನ ಕಾರ್ಯ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳುತ್ತಿದೆ. ಜೊತೆಗೆ ಪಾಕ್‌ ಮೂಲದ ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್ ನಿರಂತರವಾಗಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಲೇ ಇರುವುದು ಜಾಗತಿಕ ಭದ್ರತೆಗೆ ಸವಾಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ವಿಶ್ವಸಂಸ್ಥೆಯ ಭದ್ರತಾ ಮಂಡಳಿ(UNSC) ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದರು.

Pakistan-based terror groups operate with impunity: Jaishankar at UNSC
ಪಾಕ್‌ ಮೂಲದ ಉಗ್ರ ಸಂಘಟನೆಗಳ ಚುಟುವಟಿಕೆ ಹೆಚ್ಚಿರುವುದು ಜಗತ್ತಿನ ಭದ್ರತೆಗೆ ಸವಾಲು; ಯುಎನ್‌ಎಸ್‌ಸಿಯಲ್ಲಿ ಜೈಶಂಕರ್‌ ಕಳವಳ

By

Published : Aug 20, 2021, 10:10 AM IST

ವಾಷಿಂಗ್ಟನ್‌: ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ನಿಷೇಧಿತ ಹಕ್ಕಾನಿ ಉಗ್ರ ಸಂಘಟನೆಯ ಜಾಲ ತನ್ನ ಕಾರ್ಯ ಚಟುವಟಿಕೆಗಳನ್ನು ವೃದ್ಧಿಸಿಕೊಂಡಿದೆ. ಇದರ ಜೊತೆಗೆ, ಪಾಕಿಸ್ತಾನ ಮೂಲದ ಇತರ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್ ನಿರಂತರವಾಗಿ, ನಿರ್ಭಯವಾಗಿ ಕಾರ್ಯನಿರ್ವಹಿಸುತ್ತಲೇ ಇರುವುದು ಜಗತ್ತಿನ ಭದ್ರತೆಗೆ ಸವಾಲು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಪ್ರಸ್ತಾಪಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC)ಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಅಫ್ಘಾನಿಸ್ತಾನದಲ್ಲಿನ ಘಟನೆಗಳು ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಕ್ರಮಗಳ ಅಗತ್ಯತೆಯನ್ನು ಅವರು ಒತ್ತಿ ಹೇಳಿದರು.

ನಿಷೇಧಿತ ಹಕ್ಕಾನಿ ಉಗ್ರರ ಕೃತ್ಯಗಳಿಂದ ಆತಂಕವಿದೆ. ಅಫ್ಘಾನಿಸ್ತಾನ, ಭಾರತದ ವಿರುದ್ಧ ಲಷ್ಕರ್-ಇ-ತೊಯ್ಬಾ ಮತ್ತು ಜೈಶ್-ಇ-ಮೊಹಮ್ಮದ್‌ನಂತಹ ಗುಂಪುಗಳು ನಿರ್ಭಯ ಮತ್ತು ಪರೋಕ್ಷ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದರು.

ಇದನ್ನೂ ಓದಿ: ಆಫ್ಘನ್ನರ ವಲಸೆ ನಿಯಂತ್ರಿಸಲು ಧಾರ್ಮಿಕ ನಾಯಕರಿಗೆ ತಾಲಿಬಾನ್ ಮೊರೆ: ಏರ್​ಪೋರ್ಟ್​ಗೆ ಬಂದವರಿಗೆ ಥಳಿತ

ABOUT THE AUTHOR

...view details