ಕ್ಯಾಲಿಫೋರ್ನಿಯಾ:ಸಿನಿಮಾ ರಂಗದ ಬಹುದೊಡ್ಡ 2020ನೇ ಸಾಲಿನ 92ನೇ ಆಸ್ಕರ್ ಪ್ರಶಸ್ತಿ ಇದೀಗ ಪ್ರಕಟಗೊಂಡಿದ್ದು, ಇದೇ ಮೊದಲ ಬಾರಿಗೆ ಮುಸ್ಲಿಂ ನಟರೊಬ್ಬರಿಗೆ ಈ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.
ಬಾಂಗ್ ಜೂನ್ ಹೊ ನಿರ್ದೇಶನದ ಪಾರಾಸೈಟ್ಗೆ ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದ್ದು, ಜೋಕರ್ ಸಿನಿಮಾದಲ್ಲಿ ಅತ್ಯುತ್ತಮ ನಟನೆ ಮಾಡಿದ್ದಕ್ಕಾಗಿ ಜೊವಾಕ್ವಿನ್ ಫೀನಿಕ್ಸ್ ಅವರಿಗೆ ಅತ್ಯುತ್ತಮ ನಟ, ರಿನೀ ಜೆಲ್ ವೆಗರ್ಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಪಾರಸೈಟ್ ಚಿತ್ರದಲ್ಲಿ ಉತ್ತಮ ನಿರ್ದೇಶನ ಮಾಡಿದ್ದಕ್ಕಾಗಿ ಬಾಂಗ್ ಜೂನ್-ಹೊ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.
'ಜೋಕರ್' ನಟನಿಗೆ ಒಲಿದ ಆಸ್ಕರ್ ಅತ್ಯುತ್ತಮ ನಟ 1917 ಮತ್ತು ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್ ಚಿತ್ರಗಳು ತಲಾ ಮೂರು ಪ್ರಶಸ್ತಿ ಬಾಚಿಕೊಂಡಿದ್ದು, ಹಾಲಿವುಡ್ನ ಬ್ರ್ಯಾಡ್ ಪಿಟ್ ಅವರಿಗೆ 'ಒನ್ಸ್ ಅಪಾನ್ ಎ ಟೈಮ್..ಇನ್ ಹಾಲಿವುಡ್' ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದಕ್ಕಿದೆ.
ಆಸ್ಕರ್ ಪ್ರಶಸ್ತಿ ಲಿಸ್ಟ್ ಇಂತಿದೆ
- ಜೊವಾಕ್ವಿನ್ ಫೀನಿಕ್ಸ್ ಅವರಿಗೆ ಅತ್ಯುತ್ತಮ ನಟ
- ಪಾರಾಸೈಟ್ಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ
- ರಿನೀ ಜೆಲ್ ವೆಗರ್ಗೆ ಅತ್ಯುತ್ತಮ ನಟಿ
- ಮ್ಯಾರೇಜ್ ಸ್ಟೋರಿ ಚಿತ್ರದ ನಟನೆಗೆ ಲೌರಾ ಡೆರ್ನ್ಗೆಅತ್ಯುತ್ತಮ ಪೋಷಕ ನಟಿ
- ಫಾರ್ಡ್ ವಿಫೆರ್ರರಿಚಿತ್ರಕ್ಕೆ ಅತ್ಯುತ್ತಮ ಸಂಕಲನ ಪ್ರಶಸ್ತಿ ಪಡೆದ ಮೈಕೆಲ್ ಮೆಕ್ಕಸ್ಕರ್ ಮತ್ತು ಆಂಡ್ರ್ಯೂ ಬಕ್ಲ್ಯಾಂಡ್
- 1917 ಚಿತ್ರಕ್ಕೆ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಪಡೆದ ರೊಗರ್ ಡೀಕಿನ್ಸ್
- ಅತ್ಯುತ್ತಮ ಚಿತ್ರಕಥೆ : ಬಾಂಗ್ ಜೂನ್ ಹೊ ಮತ್ತು ಹನ್ ಜಿನ್ ವೊನ್
- ಟಾಯ್ ಸ್ಟೋರಿ 4ಗೆಅತ್ಯುತ್ತಮ ಅನಿಮೇಟೆಡ್ ಚಿತ್ರ
- ಅತ್ಯುತ್ತಮ ಸಾಕ್ಷ್ಯಚಿತ್ರ ಲರ್ನಿಂಗ್ ಟು ಸ್ಕೇಟ್ ಬೋರ್ಡ್ ಇನ್ ಎ ವಾರ್ ಜೋನ್ ಚಿತ್ರಕ್ಕೆ ಕರೋಲ್ ಡಿಸಿಂಗರ್ ಮತ್ತು ಎಲೆನಾ ಆಂಡ್ರೀಚೆವಾ
- ಅತ್ಯುತ್ತಮ ಸಾಕ್ಷ್ಯಚಿತ್ರ ಅಮೆರಿಕನ್ ಫ್ಯಾಕ್ಟರಿ ಚಿತ್ರಕ್ಕೆ ಸ್ಟೀವನ್ ಬೊಗ್ನರ್, ಜೂಲಿಯಾ ರೀಚೆರ್ಟ್
- ಅತ್ಯುತ್ತಮ ಚಿತ್ರ ಸಂಕಲನ ಪ್ರಶಸ್ತಿ ಫಾರ್ಡ್ ವರ್ಸಸ್ ಫೆರ್ರರಿ
- ಅತ್ಯುತ್ತಮ ಧ್ವನಿ ಮಿಶ್ರಣ ಪ್ರಶಸ್ತಿ ಮಾರ್ಕ್ ಟೈಲರ್ ಮತ್ತು ಸ್ಟುವಾರ್ಟ್ ವಿಲ್ಸನ್
ಈ ಸಲದ ಪ್ರಶಸ್ತಿಯಲ್ಲಿ 1917 ಹಾಗೂ ಪಾರಸೈಟ್ ಅತಿ ಹೆಚ್ಚು ಪ್ರಶಸ್ತಿ ಗಿಟ್ಟಿಸಿಕೊಂಡು ಹೊಸ ದಾಖಲೆ ನಿರ್ಮಾಣ ಮಾಡಿವೆ.